ETV Bharat / city

ತಣ್ಣೀರುಬಾವಿ ಕಡಲತೀರದಲ್ಲಿ ದೋಣಿ ಮುಳುಗಡೆ.. 9ಮೀನುಗಾರರ ರಕ್ಷಣೆ! - ಮಂಗಳೂರಿನ ಪ್ರವಾಸಿ ತಾಣ

ತಣ್ಣೀರುಬಾವಿ ಕಡಲತೀರ ಸಮೀಪ ಮೀನುಗಾರಿಕೆ ಮಾಡುತ್ತಿದ್ದ ಸಂದರ್ಭದಲ್ಲಿ ಅಲೆಗಳ ಅಬ್ಬರಕ್ಕೆ ಸಿಲುಕಿ ದೋಣಿಯೊಂದು ಅಪಘಾತಕ್ಕೀಡಾಗಿದ್ದು, ಅದರಲ್ಲಿದ್ದ 9 ಮಂದಿಯನ್ನು ಸ್ಥಳೀಯ ದೋಣಿಯಲ್ಲಿದವರು ರಕ್ಷಿಸಿದ್ದಾರೆ.

ದಡಕ್ಕೆ ತಂದಿರುವ ದೋಣಿ
author img

By

Published : Aug 3, 2019, 11:23 PM IST

ಮಂಗಳೂರು: ನಗರದ ಹೊರವಲಯದ ತಣ್ಣೀರುಬಾವಿ ಕಡಲತೀರ ಸಮೀಪ ಮೀನುಗಾರಿಕೆ ಮಾಡುತ್ತಿದ್ದ ಸಂದರ್ಭದಲ್ಲಿ ಅಲೆಗಳ ಅಬ್ಬರಕ್ಕೆ ಸಿಲುಕಿ ದೋಣಿಯೊಂದು ಅಪಘಾತಕ್ಕೀಡಾಗಿದ್ದು, ಅದರಲ್ಲಿದ್ದ 9 ಮಂದಿಯನ್ನು ಸ್ಥಳೀಯ ದೋಣಿಯಲ್ಲಿದ್ದವರು ರಕ್ಷಿಸಿದ್ದಾರೆ.

ಶಬ್ಬೀರ್, ನಾಸೀರ್, ರಿಯಾಝ್, ಆಶಿಕ್, ಲಕ್ಷ್ಮಣ್, ಎಲ್.ಆರ್.ರಾವ್, ಕೃಷ್ಣ, ಗುರು ಬೋಟ್‌ನಲ್ಲಿದ್ದವರು. ಇಂದು ಬೆಳಗ್ಗೆ 7.45ಕ್ಕೆ ಸಹಿತ್ಲು ಶಬೀರ್ ಮಾಲೀಕತ್ವದ ‘ಶಬ್ಬೀರ್’ ದೋಣಿಯಲ್ಲಿ ಮೀನುಗಾರರು ತಣ್ಣೀರುಬಾವಿ ಕಡಲತೀರ ಸಮೀಪದಲ್ಲಿ ಮೀನುಗಾರಿಕೆ ಮಾಡುತ್ತಿದ್ದರು. ಈ ವೇಳೆ ಗಾಳಿ ಹೆಚ್ಚಾಗಿ ಸಮುದ್ರಗಳ ಅಲೆಗಳ ಅಬ್ಬರಕ್ಕೆ ಸಿಲುಕಿ ದೋಣಿಯು ಮಗುಚಿ ಬಿತ್ತು.

ಅಪಾಯದ ಸ್ಥಿತಿಯಲ್ಲಿದ್ದ 9 ಮೀನುಗಾರರನ್ನು ‘ಸುವರ್ಣ ಕುಸುಮ’ ಹಾಗೂ ‘ಶ್ರೀರಾಮ’ ದೋಣಿಯ ಮೀನುಗಾರರು ಕಂಡು ರಕ್ಷಿಸಿ ಸ್ಥಳೀಯರ ಸಹಕಾರದಿಂದ ದೋಣಿಯನ್ನು ಸಮುದ್ರದ ದಡಕ್ಕೆ ಎಳೆದು ತಂದರು. ದೋಣಿ ಮಗುಚಿದಾಗ ಎಂಜಿನ್ ಕಿತ್ತು ಮತ್ತು ಮೀನುಗಳಿಗೆ ಗಾಳ ಹಾಕಿದ್ದ ಬಲೆಯೂ ನೀರು ಪಾಲಾಗಿದೆ. ದೋಣಿಯಲ್ಲಿದ್ದ ಮೀನುಗಾರರಿಗೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸ್ಥಳಕ್ಕೆ ಕರಾವಳಿ ಕಾವಲು ಪಡೆಯ ಅಧಿಕಾರಿಗಳು, ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Intro:ಮಂಗಳೂರು: ನಗರದ ಹೊರವಲಯದ ತಣ್ಣೀರುಬಾವಿ ಕಡಲತೀರ ಸಮೀಪ ಮೀನುಗಾರಿಕೆ ಮಾಡುತ್ತಿದ್ದ ಸಂದರ್ಭ ಅಲೆಗಳ ಅಬ್ಬರಕ್ಕೆ ಸಿಲುಕಿ ದೋಣಿಯೊಂದು ಅಪಘಾತಕ್ಕೀಡಾಗಿದ್ದು, ದೋಣಿಯಲ್ಲಿದ್ದ ಒಂಬತ್ತು ಮೀನುಗಾರರನ್ನು ಸ್ಥಳೀಯ ದೋಣಿಯವರು ರಕ್ಷಿಸಿದ್ದಾರೆ.

ಶಬ್ಬೀರ್, ನಾಸೀರ್, ರಿಯಾಝ್, ಆಶಿಕ್, ಲಕ್ಷ್ಮಣ್, ಎಲ್.ಆರ್.ರಾವ್, ಕೃಷ್ಣ, ಗುರು ಬೋಟ್‌ನಲ್ಲಿದ್ದ ರಕ್ಷಿಸಲ್ಪಟ್ಟ ಮೀನುಗಾರರು.

ಇಂದು ಬೆಳಗ್ಗೆ 7:45ಕ್ಕೆ ಸಸಿಹಿತ್ಲು ಶಬೀರ್ ಮಾಲಕತ್ವದ ‘ಶಬ್ಬೀರ್’ ಹೆಸರಿನ ದೋಣಿಯು ತಣ್ಣೀರುಬಾವಿ ಕಡಲತೀರ ಸಮೀಪದ ಸಮುದ್ರದಲ್ಲಿ ಮೀನುಗಾರಿಕೆ ಮಾಡುತ್ತಿತ್ತು. ಈ ಸಂದರ್ಭ ಗಾಳಿ ಮತ್ತು ಸಮುದ್ರಗಳ ಅಲೆಗಳ ಅಬ್ಬರಕ್ಕೆ ಸಿಲುಕಿ ದೋಣಿಯು ಮಗುಚಿ ಬಿದ್ದು ದೋಣಿಯಲ್ಲಿದ್ದ ಒಂಬತ್ತು ಮಂದಿ ಅಪಾಯ ಸ್ಥಿತಿಯಲ್ಲಿದ್ದರು.

ಇದನ್ನು ನೋಡಿದ ಪರಿಸರದಲ್ಲೇ ಇದ್ದ ‘ಸುವರ್ಣ ಕುಸುಮ’ ಹಾಗೂ ‘ಶ್ರೀರಾಮ’ ದೋಣಿಯವರು ಈ ಒಂಭತ್ತು ಮಂದಿಯನ್ನು ರಕ್ಷಣೆ ಮಾಡಿದ್ದಾರೆ. ಮುಳುಗಡೆಯಾದ ದೋಣಿಯನ್ನು ಸ್ಥಳೀಯರ ಸಹಕಾರದಿಂದ ಸಮುದ್ರದ ದಡಕ್ಕೆ ಎಳೆದು ತಂದಿದ್ದಾರೆ.

Body:ಅಲೆಗಳ ಅಬ್ಬರಕ್ಕೆ ದೋಣಿ ಮಗುಚಿದ ವೇಳೆ ಇಂಜಿನ್ ಕಿತ್ತು ಸಮುದ್ರದ ಪಾಲಾಗಿತ್ತು. ಮೀನುಗಾರಿಕೆಯಲ್ಲಿ ತೊಡಗಿದ್ದ ವೇಳೆ ಮೀನುಗಳಿಗೆ ಗಾಳ ಹಾಕಿದ್ದ ಬಲೆ ಈ ವೇಳೆ ಕೊಚ್ಚಿ ಹೋಗಿದೆ. ದೋಣಿಯಲ್ಲಿದ್ದ ಮೀನುಗಾರರಿಗೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಸ್ಥಳಕ್ಕೆ ಕರಾವಳಿ ಕಾವಲು ಪಡೆಯ ಅಧಿಕಾರಿಗಳು, ಸಿಬ್ಬಂದಿ ಭೇಟಿ ನೀಡಿ, ಪರಿಶೀಲಿಸಿದ್ದಾರೆ.

Reporter_Vishwanath PanjimogaruConclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.