ETV Bharat / city

ಮಂಗಳೂರು ಪಾಲಿಕೆ ಆಡಳಿತ ನಡೆಸುವಲ್ಲಿ ಬಿಜೆಪಿ ಸಂಪೂರ್ಣ ವಿಫಲವಾಗಿದೆ: ಅಬ್ದುಲ್ ರವೂಫ್ - ಮಂಗಳೂರು ಮಹಾನಗರ ಪಾಲಿಕೆ ಸುದ್ದಿ

ಸ್ಮಾರ್ಟ್ ಸಿಟಿ ಯೋಜನೆ ಹೆಸರಲ್ಲಿ ಮಂಗಳೂರು ಮಹಾನಗರ ಪಾಲಿಕೆ ಏಕಕಾಲದಲ್ಲಿ ಐದಾರು ಪ್ರಮುಖ ರಸ್ತೆಗಳನ್ನು ಬಂದ್ ಮಾಡಿ ಕಾಮಗಾರಿ ಆರಂಭಿಸಿದೆ. ಇದು ಪಾಲಿಕೆಯ ದೂರದೃಷ್ಟಿ ಕೊರತೆಯನ್ನು ಸೂಚಿಸುತ್ತದೆ ಎಂದು ಪಾಲಿಕೆ ವಿಪಕ್ಷ ನಾಯಕ ಆರೋಪಿಸಿದ್ದಾರೆ.

Abdul ravoof
ಅಬ್ದುಲ್ ರವೂಫ್
author img

By

Published : Nov 11, 2020, 9:18 PM IST

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಆಡಳಿತ ನಡೆಸಲು ಸಂಪೂರ್ಣ ವಿಫಲವಾಗಿದೆ ಎಂದು ಮಂಗಳೂರು ಮಹಾನಗರ ಪಾಲಿಕೆ ವಿಪಕ್ಷ ನಾಯಕ ಅಬ್ದುಲ್ ರವೂಫ್ ಹೇಳಿದ್ದಾರೆ.

ದ.ಕ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರಿನ ಸ್ಮಾರ್ಟ್ ಸಿಟಿ ಕಾಮಗಾರಿಯಿಂದ ನಗರದ ಜನರು, ವ್ಯಾಪಾರಿಗಳು ಕಂಗೆಟ್ಟಿದ್ದಾರೆ. ಕೊರೊನಾ ಬಳಿಕ ವ್ಯಾಪಾರ ಚೇತರಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ , ದೀಪಾವಳಿ ಹಬ್ಬದ ಸಂದರ್ಭದಲ್ಲಿ ನಗರದ ರಸ್ತೆಗಳನ್ನು ಬಂದ್ ಮಾಡಲಾಗಿದೆ. ಏಕಕಾಲದಲ್ಲಿ ಐದಾರು ಪ್ರಮುಖ ರಸ್ತೆಗಳನ್ನು ಬಂದ್ ಮಾಡಿ ಕಾಮಗಾರಿ ಆರಂಭಿಸಲಾಗಿದೆ ಎಂದರು.

ರಸ್ತೆಯಲ್ಲಿ ಸಣ್ಣ ಚರಂಡಿ , ನೀರಿನ ಪೈಪ್ ಕಾಮಗಾರಿ ನಡೆಸಲು ಪೊಲೀಸ್ ಇಲಾಖೆ ಹಲವು ಪ್ರಶ್ನೆಗಳನ್ನು ಕೇಳಿ ಹದಿನೈದು ದಿನಗಳ ಬಳಿಕ ಅನುಮತಿ ಕೊಡುತ್ತದೆ. ಆದರೆ ಒಂದೇ ದಿನದಲ್ಲಿ ಪ್ರಮುಖ ರಸ್ತೆಗಳನ್ನು ಬಂದ್ ಮಾಡಲು ಪೊಲೀಸ್ ಇಲಾಖೆ ಮೇಲೆ ಎಷ್ಟು ಒತ್ತಡ ಹೇರಿದ್ದಾರೆ ಎಂದು ತಿಳಿಯಬಹುದಾಗಿದೆ ಎಂದರು.

ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಬಂದ ಹಣವನ್ನು ಏಕಾಏಕಿ ಖರ್ಚು ಮಾಡಲು ಈ ರೀತಿಯ ಅವ್ಯವಸ್ಥೆ ಮಾಡಲಾಗಿದೆ ‌. ಸ್ಮಾರ್ಟ್ ಸಿಟಿಯಲ್ಲಿ ಪ್ರವಾಸೋದ್ಯಮಕ್ಕೆ ಒತ್ತು ಕೊಟ್ಟು ಕಾಮಗಾರಿ ನಡೆಸಬೇಕು. ಆದರೆ ಅದನ್ನು ನಿರ್ಲಕ್ಷಿಸಲಾಗಿದೆ ಎಂದರು.

30 ವರ್ಷದ ಹಿಂದೆ ಮುಂದಿನ ಪ್ಲಾನ್ ಮಾಡಿ ಯುಜಿಡಿಗೆ 6 ಇಂಚು ಪೈಪ್ ಅಳವಡಿಸಲಾಗಿತ್ತು. ಆದರೆ ಸ್ಮಾರ್ಟ್ ಸಿಟಿಯಲ್ಲಿ ಮೂವತ್ತು ವರ್ಷಗಳ ಬಳಿಕ ಕೇವಲ 8 ಇಂಚು ಪೈಪ್ ಬಳಸಲಾಗುತ್ತಿದೆ. ಅಡ್ಡರಸ್ತೆಯ ಕಾಮಗಾರಿ ಸಂದರ್ಭದಲ್ಲಿ ನಮ್ಮ ಆಡಳಿತದಲ್ಲಿ 12 ಇಂಚು ಪೈಪ್ ಅಳವಡಿಸಲಾಗಿತ್ತು. ಆದರೆ ಸ್ಮಾರ್ಟ್ ಸಿಟಿಯಲ್ಲಿ 8 ಇಂಚು ಪೈಪ್ ಅಳವಡಿಸಲಾಗುತ್ತಿದೆ. ಇವರಿಗೆ ದೂರದೃಷ್ಟಿ ಕೊರತೆ ಇದ್ದು ಬಿಜೆಪಿ ಪಾಲಿಕೆಯಲ್ಲಿ ಆಡಳಿತ ಮಾಡಲು ವಿಫಲವಾಗಿದೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.