ETV Bharat / city

ಬಿಜೆಪಿಗೆ ಈಗ ಆಪರೇಷನ್ ಕಮಲ ಅವಶ್ಯಕತೆಯಿಲ್ಲ; ನಳಿನ್ ಕುಮಾರ್ ಕಟೀಲ್ - ಪಕ್ಷದ ಸಿದ್ಧಾಂತವನ್ನು ಒಪ್ಪಿಕೊಂಡು ಯಾರು ಬರುತ್ತಾರೋ ಅವರನ್ನು ಸೇರಿಸಿ ಕೊಳ್ಳುತ್ತೇವೆ

ಬಿಜೆಪಿಗೆ ಈಗ ಆಪರೇಷನ್ ಕಮಲ ಅವಶ್ಯಕತೆ ಇಲ್ಲ. ಪಕ್ಷದ ಸಿದ್ಧಾಂತವನ್ನು ಒಪ್ಪಿಕೊಂಡು ಯಾರು ಬರುತ್ತಾರೋ ಅವರನ್ನು ಸೇರಿಸಿಕೊಳ್ಳುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.

Nalin Kumar Kateel
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್
author img

By

Published : May 11, 2022, 10:55 PM IST

ಮಂಗಳೂರು: ಬಿಜೆಪಿಗೆ ಈಗ ಆಪರೇಷನ್ ಕಮಲ ಅವಶ್ಯಕತೆ ಇಲ್ಲ. ಪಕ್ಷಕ್ಕೆ ಸೇರಲು ಆಸಕ್ತಿ ಹೊಂದಿರುವವರನ್ನಷ್ಟೇ ಈಗ ಸೇರ್ಪಡೆ ಮಾಡಲಾಗುತ್ತಿದೆ. ಬೇರೆ ಬೇರೆ ಪಕ್ಷಗಳಿಂದ ಪಕ್ಷದ ವಿಚಾರಧಾರೆಗಳನ್ನು ಒಪ್ಪಿ ಬಂದಾಗ ಸ್ವಾಗತಿಸಲಾಗುತ್ತದೆ. ಯಾರೆ ಬಂದರೂ ಕಾರ್ಯಕರ್ತರಲ್ಲಿ ಸಹಜವಾದ ವಿರೋಧ ಇದ್ದೆ ಇರುತ್ತದೆ. ಯಾಕೆಂದರೆ ಹಿಂದೆ ಅವರ ವಿರುದ್ಧ ಹೋರಾಟ ಮಾಡಲಾಗಿರುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.

ಮಂಗಳೂರಿನಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಅಕ್ರಮದ ಬಗ್ಗೆ ತಿಳಿಯುತ್ತಿದ್ದಂತೆ ತನಿಖೆಗೆ ಸರ್ಕಾರ ಆದೇಶಿಸಿದೆ. ಪಾರದರ್ಶಕವಾಗಿ ತನಿಖೆ ನಡೆಯುತ್ತಿದೆ. ಯಾವುದೇ ಪಕ್ಷದವರಾದರೂ ತಪ್ಪಿತಸ್ಥರನ್ನು ಬಂಧಿಸಲಾಗುತ್ತದೆ. ಅಶ್ವತ್ಥ ನಾರಾಯಣ ಅವರು ಈ ಬಗ್ಗೆ ಈಗಾಗಲೇ ಉತ್ತರ ಕೊಟ್ಟಿದ್ದಾರೆ.

ಬಿಜೆಪಿಗೆ ಈಗ ಆಪರೇಷನ್ ಕಮಲ ಅವಶ್ಯಕತೆಯಿಲ್ಲ

ಮಧ್ಯಪ್ರದೇಶ ನ್ಯಾಯಾಲಯ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಆದೇಶಿಸಿದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಜಿ.ಪಂ, ತಾ.ಪಂ ಚುನಾವಣೆ ನಡೆದರೆ ಬಿಜೆಪಿ ಸಿದ್ದವಿದೆ. ಮೀಸಲಾತಿ ಇಲ್ಲದೆ ಇದ್ದರೂ ಶೇಕಡಾ 33 ಕ್ಕಿಂತ ಹೆಚ್ಚು ಒಬಿಸಿ ಸಮುದಾಯಕ್ಕೆ ಟಿಕೆಟ್ ನೀಡಿ‌ ಚುನಾವಣೆ ನಡೆಸುತ್ತೇವೆ. ಚುನಾವಣಾ ಸಿದ್ಧತೆಗಳನ್ನು ಈಗಾಗಲೇ ಮಾಡಿದ್ದು, ಈ ಹಿಂದೆ ಪೇಜ್ ಪ್ರಮುಖ್ ಇದ್ದದ್ದನ್ನು ಇದೀಗ ಪೇಜ್​ಗೆ ಆರು ಮಂದಿಯ ತಂಡ ಮಾಡಿದ್ದೇವೆ. ಎಲ್ಲಾ ಸಮುದಾಯಗಳ ಪ್ರಾತಿನಿಧ್ಯ ನೀಡಿ ಪಂಚರತ್ನಗಳ ತಂಡವನ್ನು ಮಾಡಿದ್ದೇವೆ ಎಂದರು.

ಇದನ್ನೂ ಓದಿ: ದೇಶದ ಜನರೇ ಕಾಂಗ್ರೆಸ್ ಪಕ್ಷವನ್ನು​ ಟಾರ್ಗೆಟ್ ಮಾಡಿದ್ದಾರೆ: ಸಿ.ಟಿ. ರವಿ ಟಾಂಗ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.