ETV Bharat / city

ಕಂಟೈನರ್​ಗೆ ಬೈಕ್ ಡಿಕ್ಕಿ: ಸ್ಥಳದಲ್ಲೇ ದ್ವಿಚಕ್ರ ವಾಹನ ಸವಾರ ಸಾವು - ಮಂಗಳೂರಿನ ಪಡೀಲ್​ ಬಳಿ ಬೈಕ್ ಅಪಘಾತ

ಮಂಗಳೂರಿನ ಪಡೀಲ್​ ಬಳಿ ಬೈಕ್ ಸವಾರನ ನಿಯಂತ್ರಣ ತಪ್ಪಿ ರಸ್ತೆಯ ಡಿವೈಡರ್​ಗೆ ಡಿಕ್ಕಿ ಹೊಡೆದು ನಂತರ ಮುಂದೆ ಬರುತ್ತಿದ್ದ ಕಂಟೈನರ್ ಕೆಳಗೆ ಬಿದ್ದಿದೆ. ಪರಿಣಾಮ ಬೈಕ್ ಮೇಲೆ ಕಂಟೈನರ್ ಹರಿದು ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ‌.

ಕಂಟೈನರ್​ಗೆ ಬೈಕ್ ಡಿಕ್ಕಿ
ಕಂಟೈನರ್​ಗೆ ಬೈಕ್ ಡಿಕ್ಕಿ
author img

By

Published : Dec 6, 2020, 6:17 PM IST

ಮಂಗಳೂರು: ಕಂಟೈನರ್​ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಇಂದು ಮಧ್ಯಾಹ್ನ ನಗರದ ಪಡೀಲ್​ ಬಳಿ ನಡೆದಿದೆ.

ಮಂಗಳೂರು ಹೊರವಲಯದ ನೀರುಮಾರ್ಗ ನಿವಾಸಿ ಮನ್ವಿತ್ (22) ಮೃತ ಯುವಕ. ನಂತೂರಿನಿಂದ ಪಡೀಲ್ ಕಡೆಗೆ ಕಂಟೈನರ್ ಬರುತ್ತಿದ್ದ ವೇಳೆ ಬೈಕ್ ನಿಯಂತ್ರಣ ತಪ್ಪಿ ರಸ್ತೆಯ ಡಿವೈಡರ್​ಗೆ ಡಿಕ್ಕಿ ಹೊಡೆದು ನಂತರ ಕಂಟೈನರ್ ಕೆಳಗೆ ಬಿದ್ದಿದೆ. ಬೈಕ್ ಮೇಲೆ ಕಂಟೈನರ್ ಹರಿದ ಪರಿಣಾಮ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ‌.

ಈ ಕುರಿತು ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ರಸ್ತೆ ಅಪಘಾತ : ಟ್ರ್ಯಾಕ್ಟರ್ ಹಾಯ್ದು ವ್ಯಕ್ತಿ ಸಾವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.