ಬೆಳ್ತಂಗಡಿ: ಚಾರ್ಮಾಡಿ ಘಾಟ್ ಪ್ರದೇಶದಲ್ಲಿ ಭಾರಿ ಮಳೆಯಾದ ಪರಿಣಾಮ ಬೆಳ್ತಂಗಡಿ (Belthangady) ತಾಲೂಕಿನ ದಿಡುಪೆ ಸಮೀಪದ ಬಂಡಾಜೆ ಫಾಲ್ಸ್ ಉಕ್ಕಿ ಹರಿಯುತ್ತಿದೆ. ಮಲವಂತಿಗೆ ಗ್ರಾಮದ ಸುತ್ತ-ಮುತ್ತ ಇರುವ ನದಿ ಹಾಗೂ ಹಳ್ಳಕೊಳ್ಳಗಳು ಸಹ ಏಕಾಏಕಿ ಉಕ್ಕಿ ಹರಿಯುತ್ತಿವೆ. ಹಾಗಾಗಿ ಹಳ್ಳ ದಾಟುವ ಕಾಲು ಸಂಕ ರಕ್ಷಿಸಿಕೊಳ್ಳಲು ಸ್ಥಳೀಯರು ಪರದಾಟ ನಡೆಸಿದ್ದಾರೆ.
ದಿಡುಪೆ ಸಮೀಪದ ಕಜಕ್ಕೆ ಗೋಪಾಲಕೃಷ್ಣ ದೇವಸ್ಥಾನಕ್ಕೆ ಸಂಪರ್ಕಿಸಲು ಹಳ್ಳವೊಂದಕ್ಕೆ ಹಾಕಿದ್ದ ಅಡಿಕೆ ಮರದ ಕಾಲು ಸಂಕ ನೀರಿನ ರಭಸಕ್ಕೆ ಕೊಚ್ಚಿ ಹೋಗುತ್ತಿರುವ ಸಂದರ್ಭ ಸ್ಥಳೀಯರೆಲ್ಲ ಸೇರಿ ಅದಕ್ಕೆ ಹಗ್ಗವನ್ನು ಕಟ್ಟಿ ರಕ್ಷಿಸಲು ಪ್ರಯತ್ನಪಟ್ಟಿದ್ದಾರೆ.
2019ರಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ ಸುರಿದ ಭಾರಿ ಮಳೆಯಿಂದ ದಿಡುಪೆ ಸುತ್ತಮುತ್ತ ಅಪಾರ ಹಾನಿಯಾಗಿ ಅನೇಕ ಮನೆಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಇಡೀ ತಾಲೂಕು ನಲುಗಿ ಹೋಗಿತ್ತು. ಆ ಭಯದಲ್ಲಿರುವ ಜನರು ಇಂತಹ ಅನಿರೀಕ್ಷಿತ ನೆರೆಯಿಂದ ಇನ್ನಷ್ಟು ಆತಂಕ ಪಡುವಂತಾಗಿದೆ.
ಇದನ್ನೂ ಓದಿ: ನೈಸರ್ಗಿಕ ಮಾದರಿಯಲ್ಲಿ ಕೆರೆ ನೀರು ಶುದ್ಧೀಕರಣ : ದೇಶದಲ್ಲೇ ಮೊದಲ ಪ್ರಯತ್ನ!