ETV Bharat / city

ಬಿ ಸಿ ರೋಡ್-ಅಡ್ಡಹೊಳೆ ಹೆದ್ದಾರಿ ಕಾಮಗಾರಿಗೆ ವೇಗ : ಕಲ್ಲಡ್ಕದ ಹಳೆಯ ಕಟ್ಟಡಗಳು ಧರೆಗೆ

ಕಲ್ಲಡ್ಕದಲ್ಲಿ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದಂತೆ, ಹಳೆಯ ಕಟ್ಟಡಗಳು ಇತಿಹಾಸದ ಪುಟ ಸೇರುತ್ತಿವೆ. ಬಿ.ಸಿ.ರೋಡ್​​​ನಿಂದ ಪೆರಿಯಶಾಂತಿವರೆಗಿನ 48 ಕಿ.ಮೀ. ಕಾಮಗಾರಿಯನ್ನು ಹೈದರಾಬಾದ್​​ ಕಂಪನಿಯೊಂದು ವಹಿಸಿಕೊಂಡಿದ್ದರೆ, ಪೆರಿಯಶಾಂತಿಯಿಂದ ಅಡ್ಡಹೊಳೆವರೆಗಿನ 15 ಕಿ.ಮೀ. ಕಾಮಗಾರಿಯನ್ನು ಮಹಾರಾಷ್ಟ್ರದ ಕಂಪನಿ ವಹಿಸಿಕೊಂಡಿದೆ..

Bantwal
ಬಿ.ಸಿ.ರೋಡ್-ಅಡ್ಡಹೊಳೆ ಹೆದ್ದಾರಿ ಕಾಮಗಾರಿ
author img

By

Published : Oct 12, 2021, 6:42 PM IST

ಬಂಟ್ವಾಳ : ಮಂಗಳೂರು-ಹಾಸನ ಸಂಪರ್ಕಿಸುವ ಬಿಸಿರೋಡ್-ಅಡ್ಡಹೊಳೆ ರಸ್ತೆ ಕಾಮಗಾರಿ ಆರಂಭಗೊಳ್ಳುವ ಲಕ್ಷಣಗಳು ಕಂಡು ಬರುತ್ತಿವೆ. ಇದಕ್ಕೆ ಸಾಕ್ಷಿಯಾಗಿ ಬಂಟ್ವಾಳ ತಾಲೂಕಿನ ಹೆದ್ದಾರಿ ಬದಿಯ ಕಲ್ಲಡ್ಕದಲ್ಲಿ ಫ್ಲೈ ಓವರ್ ನಿರ್ಮಾಣ ಹಾಗೂ ರಸ್ತೆ ಅಗಲಗೊಳಿಸುವ ಕಾರ್ಯಕ್ಕೆ ಪೂರ್ವಭಾವಿಯಾಗಿ ಕಟ್ಟಡಗಳನ್ನು ಕೆಡವಲಾಗುತ್ತಿದೆ.

ಬಿಸಿ ರೋಡ್-ಅಡ್ಡಹೊಳೆ ಹೆದ್ದಾರಿ ಕಾಮಗಾರಿ..

ಕಲ್ಲಡ್ಕದಲ್ಲಿ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದಂತೆ, ಹಳೆಯ ಕಟ್ಟಡಗಳು ಇತಿಹಾಸದ ಪುಟ ಸೇರುತ್ತಿವೆ. ಬಿ.ಸಿ.ರೋಡ್​​​ನಿಂದ ಪೆರಿಯಶಾಂತಿವರೆಗಿನ 48 ಕಿ.ಮೀ. ಕಾಮಗಾರಿಯನ್ನು ಹೈದರಾಬಾದ್​​ ಕಂಪನಿಯೊಂದು ವಹಿಸಿಕೊಂಡಿದ್ದರೆ, ಪೆರಿಯಶಾಂತಿಯಿಂದ ಅಡ್ಡಹೊಳೆವರೆಗಿನ 15 ಕಿ.ಮೀ. ಕಾಮಗಾರಿಯನ್ನು ಮಹಾರಾಷ್ಟ್ರದ ಕಂಪನಿ ವಹಿಸಿಕೊಂಡಿದೆ.

ಸದ್ಯ ಕಲ್ಲಡ್ಕ ಪ್ರದೇಶದಲ್ಲಿ ಭೂ ತಾಂತ್ರಿಕ ಪರಿಶೀಲನಾ ಕಾರ್ಯಗಳನ್ನು ಇಲಾಖೆ ನಡೆಸುತ್ತಿದೆ. ಅಭಿವೃದ್ಧಿ ಹಿನ್ನೆಲೆ ರಸ್ತೆ ಪಕ್ಕ ಇರುವ ಅಂಗಡಿ-ಮುಂಗಟ್ಟುಗಳನ್ನು ಕೆಡವಲಾಗುತ್ತಿದೆ. ಪಾಣೆ ಮಂಗಳೂರು, ಕಲ್ಲಡ್ಕ ಸಹಿತ ಹೆದ್ದಾರಿ ಬದಿಯಲ್ಲಿ ಮಾರ್ಕಿಂಗ್ ಮಾಡಿರುವ ಜಾಗಗಳಲ್ಲಿ ಯಂತ್ರಗಳೊಂದಿಗೆ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಬೃಹತ್ ಪಿಲ್ಲರ್ ಅಳವಡಿಕೆಗಾಗಿ ಭೂಮಿಯ ಕಲ್ಲು, ಮಣ್ಣಿನ ಪರೀಕ್ಷಾ ಕಾರ್ಯ ಸಹ ನಡೆಯುತ್ತಿದೆ.

ಹೊಸ ವಿನ್ಯಾಸದೊಂದಿಗೆ ಕೆ ಟಿ ಹೋಟೆಲ್ : ಕಲ್ಲಡ್ಕ ಹೆಸರು ಕೇಳಿದ ತಕ್ಷಣ ಪ್ರಯಾಣಿಕರಿಗೆ ಥಟ್ಟನೆ ನೆನಪಾಗುವುದು ಕೆ ಟಿ ಅಂದರೆ ಕಲ್ಲಡ್ಕ ಟೀ. ಸಿನಿಮಾ ನಟರು, ರಾಜಕಾರಣಿಗಳು, ಜನಸಾಮಾನ್ಯರು, ಉದ್ಯಮಿಗಳು ಅಥವಾ ವಿವಿಐಪಿಗಳೇ ಇರಲಿ ಕಲ್ಲಡ್ಕಕ್ಕೆ ಬಂದರೆ ಹಳೆಯ ಕಟ್ಟಡದಲ್ಲಿರುವ ಈ ಹೋಟೆಲ್​​ಗೆ ಭೇಟಿ ನೀಡದವರಿಲ್ಲ.

ಹೊಸ ವಿನ್ಯಾಸದೊಂದಿಗೆ ಕೆ ಟಿ ಹೋಟೆಲ್..

ಈ ಚಹದ ಸ್ವಾದ ಅಂಥದ್ದು. ವಿಶಿಷ್ಟ ವಿಧಾನದ ಮೂಲಕ ಮಾಡುವ ಚಹಕ್ಕೆ ಪ್ರಸಿದ್ಧವಾದ ಕೆ ಟಿ ಹೋಟೆಲ್ ದಶಕಗಳಿಂದ ಹೆದ್ದಾರಿ ಬದಿಯಲ್ಲಿ ಕಾರ್ಯಾಚರಿಸುತ್ತಿದ್ದು, ಇದರ ಹೆಸರು ಲಕ್ಷ್ಮಿನಿವಾಸ್.

ರಸ್ತೆ ಅಭಿವೃದ್ಧಿ ಹಿನ್ನೆಲೆ ಈ ಹಳೆಯ ಹೋಟೆಲ್ ಧರಾಶಾಹಿಯಾದರೆ, ಈಗ ಇರುವ ಜಾಗದ ಹಿಂದೆಯೇ ಹೊಸ ಕಟ್ಟಡ ನಿರ್ಮಾಣವಾಗುತ್ತಿದೆ. ಕೆಲ ಸಮಯದಲ್ಲೇ ಹೊಸ ವಿನ್ಯಾಸದೊಂದಿಗೆ ಗ್ರಾಹಕರ ಸೇವೆಗೆ ಸಿದ್ಧವಾಗಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.