ETV Bharat / city

ಕೇರಳ ಸಂಪರ್ಕಿಸುವ ಬಂಟ್ವಾಳ ತಾಲೂಕಿನ ಗಡಿ ಮತ್ತೆ ಬಂದ್​​

ಕೇರಳ ಸಂಪರ್ಕಿಸುವ ಬಂಟ್ವಾಳ ತಾಲೂಕಿನ ಗಡಿ ಭಾಗವನ್ನು ಮುಚ್ಚಿದ್ದರೂ ಜನರು ನುಸುಳುತ್ತಿದ್ದಾರೆ ಎಂದು ದೂರು ಬಂದ ಹಿನ್ನೆಲೆ ಕೂಡಲೇ ಸ್ಥಳಕ್ಕೆ ಧಾವಿಸಿದ ಬಂಟ್ವಾಳ ತಹಶೀಲ್ದಾರ್ ಮತ್ತೆ ಗಡಿ ಮುಚ್ಚಿಸಿದ್ದಾರೆ.

Tahsildar, re-bound the open borde
ತೆರೆದ ಗಡಿಯನ್ನು ಮತ್ತೆ ಬಂದ್ ಮಾಡಿಸಿದ ತಹಶೀಲ್ದಾರ್
author img

By

Published : Apr 5, 2020, 9:38 PM IST

ಬಂಟ್ವಾಳ(ದ.ಕ.): ಕೊರೊನಾ ಹಿನ್ನೆಲೆಯಲ್ಲಿ ಗಡಿಗಳನ್ನು ಬಂದ್ ಮಾಡಿದ್ದರೂ ಕರ್ನಾಟಕಕ್ಕೆ ಕೇರಳದ ಜನ ನುಸುಳುತ್ತಿದ್ದಾರೆ ಎಂದು ಬಂಟ್ವಾಳ ತಾಲೂಕಿನ ಕರೋಪಾಡಿ ಸ್ಥಳೀಯರು ದೂರು ನೀಡಿದ ಹಿನ್ನೆಲೆ ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್. ಸ್ಥಳಕ್ಕೆ ಧಾವಿಸಿ ಮತ್ತೆ ಗಡಿ ಬಂದ್ ಮಾಡಿಸಿದರು.

ಲಾಕ್​ಡೌನ್ ಆದೇಶವಾಗುತ್ತಿದ್ದಂತೆ ಕರೋಪಾಡಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ದೇವಪ್ಪ, ವಿಟ್ಲ ಎಸ್​ಐ ವಿನೋದ್ ಎಸ್.ಕೆ. ನೇತೃತ್ವದಲ್ಲಿ ಗಡಿಯನ್ನು ಬಂದ್ ಮಾಡಿದ್ದರು. ಬಂದ್ ಮಾಡಿದ್ದರೂ ಕರೋಪಾಡಿ ಕೋಡ್ಲ ರಸ್ತೆಯ ಮೂಲಕ ಕೇರಳದಿಂದ ಜನರು ವಾಹನದಲ್ಲಿ ಬರುತ್ತಿದ್ದಾರೆ ಎಂದು ಸ್ಥಳೀಯರಾದ ವಿನೋದ್ ಶೆಟ್ಟಿ ಪಟ್ಲ ಕರೋಪಾಡಿ ತಹಶೀಲ್ದಾರ್​ಗೆ ದೂರು ನೀಡಿದ್ದರು.

ದೂರಿನ ಅನ್ವಯ ಸ್ಥಳಕ್ಕೆ ಧಾವಿಸಿದ ತಹಶೀಲ್ದಾರರು ಮತ್ತೆ ಗಡಿ ಬಂದ್ ಮಾಡಿಸಿದರು. ಕೆಲವರು ರಸ್ತೆಯನ್ನು ಬಂದ್ ಮಾಡುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ರೌಡಿ ನಿಗ್ರಹ ದಳ ಹಾಗೂ ವಿಟ್ಲ ಪೊಲೀಸರು ಬಂದು ಬಂದ್​ ಮಾಡುವಲ್ಲಿ ಯಶಸ್ವಿಯಾದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.