ಮಂಗಳೂರು: ಮಂಗಳೂರಿನ ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ಬೇರೆಯವರಿಗೆ ಬಾಳೆ ಹಣ್ಣು ಟೆಂಡರ್ ನೀಡಲಾಗಿದೆ ಎಂಬ ವಿಚಾರ ಟೆಂಡರ್ ಅವಧಿ ಮುಗಿಯುವ ಸಂದರ್ಭದಲ್ಲಿ ವಿವಾದಕ್ಕೆ ಕಾರಣವಾಗಿದೆ. ಕುಡುಪು ದೇವಾಲಯದ ಸೇವಾಧಿಗಳಿಗೆ ಅಗತ್ಯವಿರುವ ಬಾಳೆ ಹಣ್ಣಿಗಾಗಿ ಪ್ರತೀ ವರ್ಷ ಟೆಂಡರ್ ಕರೆಯಲಾಗುತ್ತಿದ್ದು, ಕಳೆದ ವರ್ಷ ಕರೆದ ಟೆಂಡರ್ಗೆ ಕಡಿಮೆ ದರ ನಿಗದಿಪಡಿಸಿದ (ಪ್ರತಿ ಬಾಳೆಹಣ್ಣಿಗೆ ರೂ 1.95) ಎಂ.ಕೆ.ಹಂಝ ಎಂಬವರಿಗೆ ಬಾಳೆಹಣ್ಣು ಸರಬರಾಜು ಮಾಡಲು ಅವಕಾಶ ನೀಡಲಾಗಿತ್ತು.
ಇತರ ವ್ಯಾಪಾರಿಗಳು ಪ್ರತಿ ಬಾಳೆಹಣ್ಣಿಗೆ ಅಧಿಕ ದರ ವಿಧಿಸಿದ ಕಾರಣ ಅವರ ಟೆಂಡರ್ನ್ನು ತಿರಸ್ಕರಿಸಲಾಗಿತ್ತು. 1.95 ರೂ.ಗೆ ಪ್ರತಿ ಬಾಳೆಹಣ್ಣು ನೀಡುವ ಎಂ.ಕೆ. ಹಂಝ ಅವರಿಗೆ 2021 ಜುಲೈ 1 ರಿಂದ 2022 ಜೂನ್ 30 ವರೆಗೆ ಸರಬರಾಜು ಮಾಡಲು ಟೆಂಡರ್ ನೀಡಲಾಗಿತ್ತು. ಇದೇ ಜೂನ್ 30ಕ್ಕೆ ಟೆಂಡರ್ ಅವಧಿ ಮುಕ್ತಾಯವಾಗಲಿದ್ದು, ಅವಧಿ ಕೊನೆಗೊಳ್ಳುವ ಸಂದರ್ಭದಲ್ಲಿ ಬಾಳೆ ಹಣ್ಣಿನ ಟೆಂಡರ್ ನೀಡಲಾಗಿರುವ ವಿಚಾರ ವಿವಾದಕ್ಕೆ ಕಾರಣವಾಗಿದೆ. ಕೆಲವರು ಬೇರೆಯವರಿಗೆ ಬಾಳೆಹಣ್ಣು ಟೆಂಡರ್ ನೀಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು.
ಈ ಅವಧಿ ಮುಕ್ತಾಯಗೊಳ್ಳುತ್ತಿರುವುದರಿಂದ ವಿವಾದದ ಕಾರಣದಿಂದ ಜುಲೈ 1 ರಿಂದ ಬಾಳೆಹಣ್ಣು ಸರಬರಾಜಿಗೆ ನೀಡುವ ಟೆಂಡರ್ ಬಗ್ಗೆ ಕುತೂಹಲ ಮೂಡಿಸಿದೆ.
ಇದನ್ನೂ ಓದಿ : ಮಳಲಿ ವಿವಾದ: ಮಸೀದಿ ಹೆಸರು ನಮೂದಿಗೆ ತಡೆಯಾಜ್ಞೆ