ETV Bharat / city

ಲಾಡ್ಜ್​​ನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಇಬ್ಬರ ಬಂಧನ: ಓರ್ವ ಮಹಿಳೆ ರಕ್ಷಣೆ - ಫೆರಾವೊ ಲಾಡ್ಜಿಂಗ್ ಮತ್ತು ಬೋರ್ಡಿಂಗ್ ರೂಮ್

ಮಂಗಳೂರು ತಾಲೂಕಿನ ಬಾಳ ಗ್ರಾಮದ ಬಿಎಎಸ್​​ಎಫ್ ಫ್ಯಾಕ್ಟರಿಯ ಎದುರಿಗಿರುವ ಫೆರಾವೊ ಲಾಡ್ಜಿಂಗ್ ಮತ್ತು ಬೋರ್ಡಿಂಗ್ ರೂಮ್​​ನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಇಬ್ಬರು ಆರೋಪಿಗಳನ್ನು ಸುರತ್ಕಲ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

Arrest of two men in prostitution at the lodge
ಲಾಡ್ಜ್​​ನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಇಬ್ಬರ ಬಂಧನ
author img

By

Published : Mar 1, 2021, 12:53 PM IST

ಮಂಗಳೂರು: ಲಾಡ್ಜ್​​ವೊಂದರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಸುರತ್ಕಲ್ ಠಾಣೆ ಪೊಲೀಸರು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಹಳೆಯಂಗಡಿ ಬಳಿಯ ತೋಕೂರಿನ ಹರೀಶ್ (42) ಹಾಗೂ ಬಂಟ್ವಾಳ ತಾಲೂಕು ದಡ್ಡಲ್ ಕಾಡ್​​ನ ಲೋಕನಾಥ್ ಪೂಜಾರಿ ಯಾನೆ ನವೀನ್ (42) ಬಂಧಿತ ಆರೋಪಿಗಳು. ಇವರಿಬ್ಬರು ಬಾಳ ಗ್ರಾಮದ ಬಿಎಎಸ್​​ಎಫ್ ಫ್ಯಾಕ್ಟರಿ ಎದುರಿಗಿರುವ ಫೆರಾವೊ ಲಾಡ್ಜಿಂಗ್ ಮತ್ತು ಬೋರ್ಡಿಂಗ್ ರೂಮ್​​ನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದರು.

ಖಚಿತ ಮಾಹಿತಿ ದಾಳಿ ನಡೆಸಿದ ಸುರತ್ಕಲ್ ಠಾಣೆ ಪೊಲೀಸರು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಬೆಂಗಳೂರಿನ ಉತ್ತರಹಳ್ಳಿ ಮೂಲದ ಓರ್ವ ಮಹಿಳೆಯನ್ನು ರಕ್ಷಿಸಿದ್ದಾರೆ. ಈ ಸಂಬಂಧ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.