ETV Bharat / city

ಅಡಕೆಯಲ್ಲಿದೆ ಕ್ಯಾನ್ಸರ್​​ ಗುಣಕಾರಕ ಅಂಶ: ವೈಜ್ಞಾನಿಕ ಆಧಾರ ರೂಪಿಸುವ ನಿಟ್ಟಿನಲ್ಲಿ ಕ್ಯಾಂಪ್ಕೊ ಹೆಜ್ಜೆ - ನಿಟ್ಟೆ ವಿಶ್ವ ವಿದ್ಯಾಲಯ

ನಿಟ್ಟೆ ವಿಶ್ವ ವಿದ್ಯಾಲಯದ ವಿಜ್ಞಾನಿಗಳೊಂದಿಗೆ ಸೇರಿ ಕ್ಯಾಂಪ್ಕೊ ಕಂಪನಿಯು ಅಡಕೆಯಲ್ಲಿದೆ ಕ್ಯಾನ್ಸರ್​​ ಗುಣಕಾರಕ ಅಂಶವಿದೆ ಎಂಬುದನ್ನು ವೈಜ್ಞಾನಿಕವಾಗಿ ಸಾಬೀತು ಪಡಿಸಲು ಹೊರಟಿದೆ.

ಅಡಿಕೆ
ಅಡಿಕೆ
author img

By

Published : Sep 23, 2021, 12:16 PM IST

ಮಂಗಳೂರು: ಅಡಕೆಯಲ್ಲಿ ಕ್ಯಾನ್ಸರ್ ರೋಗವನ್ನು ಶಮನಗೊಳಿಸುವ ಗುಣಗಳಿವೆ ಎಂಬ ವೈಜ್ಞಾನಿಕ ಆಧಾರಗಳನ್ನು ರೂಪಿಸುವ ನಿಟ್ಟಿನಲ್ಲಿ ಕ್ಯಾಂಪ್ಕೊ ಕಂಪನಿ ಹೆಜ್ಜೆ ಇರಿಸಿದೆ. ಈ ಮೂಲಕ ಅಡಕೆ ಕ್ಯಾನ್ಸರ್​ಕಾರಕ ಎಂಬ ಹಣೆಪಟ್ಟಿಯನ್ನು ವೈಜ್ಞಾನಿಕವಾಗಿ ಕಳಚಿಹಾಕಲು ಸಿದ್ಧತೆ ನಡೆಯುತ್ತಿದೆ.

ಇದಕ್ಕಾಗಿ ನಿಟ್ಟೆ ವಿಶ್ವ ವಿದ್ಯಾಲಯದ ವಿಜ್ಞಾನಿಗಳೊಂದಿಗೆ ಸಂಶೋಧನೆಗೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಕ್ಯಾಂಪ್ಕೊ 25 ಲಕ್ಷ ರೂ. ವೆಚ್ಚ ಮಾಡುತ್ತಿದೆ. ನಿಟ್ಟೆ ವಿವಿಯ ತಜ್ಞ ಡಾ.ಇಡ್ಯಾ ಕರುಣಾ ಸಾಗರ್ ಲ್ಯಾಬೊರೇಟರಿ ಇವಾಲ್ಯುವೇಶನ್ ನಡೆಸಲಿದ್ದಾರೆ. ಈ ಪ್ರಯೋಗವನ್ನು ಮೊಟ್ಟ ಮೊದಲು ಝೀಬ್ರಾ ಮೀನುಗಳ ಮೇಲೆ ಪ್ರಯೋಗ ನಡೆಸಲಾಗುತ್ತದೆ.

ಅಡಕೆಯಲ್ಲಿ ಕ್ಯಾನ್ಸರ್ ಗುಣಕಾರಕ ಅಂಶವಿದೆ ಎನ್ನುವುದಕ್ಕೆ ಸಂಶೋಧನೆ ಜೊತೆಯಲ್ಲಿಯೇ ಈ ಕುರಿತ ಔಷಧವೊಂದನ್ನೂ ಜೆಡ್ಡು ಆಯುರ್ವೆದ ಅಧ್ಯಯನ ಕೇಂದ್ರದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ.

ಇದಕ್ಕೆ ಕ್ಯಾಂಪ್ಕೊ ಪ್ರವರ್ತಿತ ಅಡಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ (ಎಆರ್​ಡಿಎಫ್) ನೆರವು ನೀಡುತ್ತಿದೆ. ಇದರಲ್ಲಿ ಶೇ.20 ಅಡಕೆ ಹಾಗೂ ಶೇ.20 ವೀಳ್ಯದೆಲೆಯ ಅಂಶಗಳಿದ್ದರೆ ಉಳಿದಂತೆ ಜೇನು, ಲವಂಗ, ಅರಿಶಿಣ ಇತ್ಯಾದಿಗಳಿರುತ್ತವೆ.

ಇದನ್ನೂ ಓದಿ: ಬಾಗಲಕೋಟೆ: ಬರೋಬ್ಬರಿ 3.25 ಲಕ್ಷ ರೂ.ಗೆ ಮಾರಾಟವಾದ ಕಿಲಾರಿ ಹೋರಿ..! ಏನಿದರ ಸ್ಪೆಷಾಲಿಟಿ?

ಪ್ರಯೋಗ ಹೇಗೆ?

ಸದ್ಯ ಲೇಹವನ್ನು ತಯಾರಿಸಿ ಪ್ರಥಮ ಹಂತದಲ್ಲಿ ಯಶಸ್ಸು ಕಂಡಿರುವ ವಿಜ್ಞಾನಿಗಳು, ಮುಂದಿನ ದಿನಗಳಲ್ಲಿ ಇಲಿಗಳಿಗೆ ಕ್ಯಾನ್ಸರ್ ರೋಗ ಬಾಧಿಸುವಂತೆ ಮಾಡಿ, ಅವುಗಳಿಗೆ ಇದೇ ಲೇಹ್ಯವನ್ನು ನೀಡಿ ಗುಣಪಡಿಸುವ ಕಾರ್ಯ ನಡೆಸಲಿದ್ದಾರೆ.

ಉತ್ತರ ಕನ್ನಡದ ಕೆಂಪಡಿಕೆ, ದಕ್ಷಿಣ ಕನ್ನಡ ಭಾಗದ ಬಿಳಿ ಚಾಲಿ ಹಣ್ಣಡಿಕೆಗಳಿಂದ ಪ್ರತ್ಯೇಕಿಸಲಾಗಿರುವ ದ್ರವಾಂಶವನ್ನು ಝೀಬ್ರಾ ಮೀನುಗಳಿಗೆ ನೀಡಿ, ಈ ಔಷಧ ಯಾವ ರೀತಿ ಪರಿಣಾಮ ಬೀರಲಿದೆ ಎನ್ನುವುದನ್ನು ವೈಜ್ಞಾನಿಕವಾಗಿ ಅರಿತುಕೊಳ್ಳಲಿದ್ದಾರೆ. ಇದಕ್ಕಾಗಿ ನಿಟ್ಟೆ ವಿವಿಯ ತಜ್ಞರೊಂದಿಗೆ ಸಮಾಲೋಚನೆ ನಡೆಸಲಾಗುತ್ತದೆ ಎನ್ನಲಾಗುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.