ಮಂಗಳೂರು: ನಗರದ ನಂದಿಗುಡ್ಡೆ ಎಂಬಲ್ಲಿ ಫ್ಲ್ಯಾಟ್ವೊಂದರಲ್ಲಿ ನಡೆಯುತ್ತಿದ್ದ ಹೈಟೆಕ್ ವೇಶ್ಯಾವಾಟಿಕೆ ಪ್ರಕರಣದಲ್ಲಿ ಬಾಲಕಿಗೆ ಕಿರುಕುಳ ನೀಡಿದ ಮತ್ತೋರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮಂಗಳೂರಿನ ಉಳ್ಳಾಲದ ಅಬ್ದುಲ್ ರಾಝೀಕ್ ಉಳ್ಳಾಲ ಯಾನೆ ರಫೀಕ್ ಉಳ್ಳಾಲ (44) ಬಂಧಿತ ಆರೋಪಿ. ಇತ್ತೀಚೆಗೆ ನಂದಿಗುಡ್ಡೆಯ ಫ್ಲ್ಯಾಟ್ವೊಂದರಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆಗೆ ಪೊಲೀಸರು ದಾಳಿ ನಡೆಸಿದ್ದರು. ಫ್ಲ್ಯಾಟ್ನಲ್ಲಿದ್ದ ಬಾಲಕಿಯರನ್ನು ಮತ್ತು ಮಹಿಳೆಯರನ್ನು ಪೊಲೀಸರು ರಕ್ಷಿಸಿದ್ದರು. ರಕ್ಷಿಸಲ್ಪಟ್ಟ ಇಬ್ಬರು ಅಪ್ರಾಪ್ತ ವಯಸ್ಸಿನ ಬಾಲಕಿಯರು ನೀಡಿದ ದೂರಿನಂತೆ ಹತ್ತು ಪ್ರಕರಣಗಳನ್ನು ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿತ್ತು. ಈ ಪ್ರಕರಣಗಳಲ್ಲಿ ಈ ಮೊದಲು 15 ಮಂದಿ ಬಂಧಿಸಲಾಗಿತ್ತು. ಇದೀಗ ಬಂಧಿತರ ಸಂಖ್ಯೆ 16ಕ್ಕೆ ಏರಿಕೆಯಾಗಿದೆ.
ಇದನ್ನೂ ಓದಿ: ಹುಟ್ಟುವ ಮೊದಲೇ ಮಗುವಿನ ಜಾತಿ ಬಗ್ಗೆ ಗಲಾಟೆ: ಗರ್ಭಿಣಿ ಪತ್ನಿ ಕೊಂದ ಪಾಪಿ ಪತಿ