ETV Bharat / city

MRPL: ಟಗ್ ಅಲೈನ್ಸ್ ನೌಕೆ ಮೇಲೆತ್ತುವ ಕಾರ್ಯಾಚರಣೆಗೆ ಪ್ರಯತ್ನ - ಟಗ್ ಅಲೈನ್ಸ್ ನೌಕೆ

ತೌಕ್ತೆ ಅಬ್ಬರಕ್ಕೆ ಸಿಲುಕಿ ಸಮುದ್ರ ಮಧ್ಯದಲ್ಲಿ ಹಾನೀಗೀಡಾದ ಟಗ್ ಅಲೈನ್ಸ್ ಎಂಬ ನೌಕೆಯನ್ನು ಮೇಲೆತ್ತುವ ಕಾರ್ಯಾಚರಣೆ ನಡೆಯುತ್ತಿದೆ. ಟಗ್ ಸಮುದ್ರದಲ್ಲಿ ಮುಳುಗಿದರೂ ಯಾವುದೇ ಮಾಲಿನ್ಯ ಸಂಭವಿಸಿಲ್ಲ ಎಂದು ಎಂಆರ್​ಪಿಎಲ್ ಸಂಸ್ಥೆ ತಿಳಿಸಿದೆ‌.

Tug Alliance ship
ಟಗ್ ಅಲೈನ್ಸ್ ನೌಕೆ
author img

By

Published : Jun 13, 2021, 6:37 AM IST

ಮಂಗಳೂರು: ತೌಕ್ತೆ ಚಂಡಮಾರುತ ಪರಿಣಾಮ ಸಮುದ್ರ ಮಧ್ಯೆ ದುರ್ಘಟನೆಗೊಳಗಾದ ಟಗ್ ಅಲೈನ್ಸ್ ಎಂಬ ನೌಕೆಯನ್ನು ಮೇಲೆತ್ತುವ ಕಾರ್ಯಕ್ಕೆ ಎಲ್ಲಾ ರೀತಿಯ ಪ್ರಯತ್ನ ನಡೆಯುತ್ತಿದೆ ಎಂದು ಎಂಆರ್​ಪಿಎಲ್ ಸಂಸ್ಥೆ ತಿಳಿಸಿದೆ‌.

ಎಂಆರ್​ಪಿಎಲ್, ಎನ್ಎಂಪಿಟಿ, ಟಗ್ ಅಲೈನ್ಸ್ ನೌಕೆಯ ಮಾಲೀಕ, ಗುತ್ತಿಗೆದಾರ ಎಲ್ಲರ ಪ್ರಯತ್ನದಿಂದ ನೌಕೆಯನ್ನು ಮೇಲೆತ್ತುವ ಕಾರ್ಯ ಮಾಡಲಾಗುತ್ತಿದೆ. ಕಾರ್ಯಾಚರಣೆ ನಡೆಯುವ ಬಗ್ಗೆ ಎಲ್ಲರೂ ಸಂಪರ್ಕದಲ್ಲಿದ್ದಾರೆಂದು ತಿಳಿದು ಬಂದಿದೆ.

ಟಗ್ ಅಲೈನ್ಸ್ ಮಾಲೀಕ ಮೆರೈನ್ ಮರ್ಸಂಟೈಲ್ ಡಿಪಾರ್ಟ್ಮೆಂಟ್​ಗೆ ಟಗ್ ಸಮುದ್ರದಿಂದ ಎತ್ತಲು ಪರವಾನಗಿಗೆ ಅರ್ಜಿ ಹಾಕಲಾಗಿದೆ. ಅಲ್ಲಿಂದ ಸೂಚನೆ ಬಂದ ತಕ್ಷಣ ಟಗ್​​ಅನ್ನು ಸಮುದ್ರದಿಂದ ಮೇಲೆತ್ತುವ ಕಾರ್ಯಾಚರಣೆ ಆರಂಭಿಸಲಾಗುತ್ತದೆ ಎಂದು ಎಂಆರ್​ಪಿಎಲ್ ತಿಳಿಸಿದೆ. ಟಗ್ ಸಮುದ್ರದಲ್ಲಿ ಮುಳುಗಿದರೂ ಯಾವುದೇ ಮಾಲಿನ್ಯ ಸಂಭವಿಸಿಲ್ಲ. ಈ ಬಗ್ಗೆ ಒಂದೆರಡು ದಿನಗಳಲ್ಲಿ ಮಾಲಿನ್ಯ ಸರ್ಟಿಫಿಕೇಟ್ ದೊರೆಯಲಿದೆ ಎಂದು ಎಂಆರ್​ಪಿಎಲ್ ತಿಳಿಸಿದೆ.

ಇದನ್ನೂ ಓದಿ: ಉಡುಪಿ: 40 ಗಂಟೆಯಿಂದ ಸಮುದ್ರದಲ್ಲಿ ಸಿಲುಕಿದ್ದ 9 ಮಂದಿಯ ರಕ್ಷಣೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.