ಬೆಳ್ತಂಗಡಿ (ದ.ಕ): ತಾಲೂಕಿನ ಗೇರುಕಟ್ಟೆಯ ಕಳಿ ಗ್ರಾಮ ಪಂಚಾಯತ್ ಮೇಲೆ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸರು ದಾಳಿ ನಡೆಸಿ ದಾಖಲೆ ವಶಪಡಿಸಿಕೊಂಡಿದ್ದಾರೆ. ಈ ಗ್ರಾಮ ಪಂಚಾಯತ್ನಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಆರೋಪದ ಬೆನ್ನಲ್ಲೇ ಇನ್ಸ್ಪೆಕ್ಟರ್ ಯೋಗೀಶ್ ಕುಮಾರ್ ಬಿ.ಸಿ. ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.
ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಪಿಡಿಒ ಸೇರಿ ಒಂದು ಕುಟುಂಬಕ್ಕೆ 2-3, 94C ಹಕ್ಕುಪತ್ರ ವಿತರಿಸಿದ್ದು ಮತ್ತು ಜಾಗದಲ್ಲಿ ಯಾವುದೇ ರೀತಿಯ ಮನೆ ಇಲ್ಲದಿದ್ದರೂ ಅವರಿಗೆ 94C ಹಕ್ಕುಪತ್ರ ವಿತರಿಸಿರುವ ಗುರುತರ ಆರೋಪದ ಕುರಿತು ಸಾರ್ವಜನಿಕರು ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸರಿಗೆ ದೂರು ನೀಡಿದ್ದರು. ಈ ಬಗ್ಗೆ ಎಸಿಬಿ ಪೊಲೀಸರು ದಾಖಲೆಗಳನ್ನು ವಶಪಡಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.