ETV Bharat / city

ದ.ಕ.ಜಿಲ್ಲೆಯ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸುವತ್ತ ಒತ್ತು: ಜಿಲ್ಲಾಧಿಕಾರಿ - mangalore tourism destinations

ಜಿಲ್ಲೆಯ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸುವತ್ತ ಒತ್ತು ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.

dc rajendra kv
ಜಿಲ್ಲಾಧಿಕಾರಿ ಡಾ ರಾಜೇಂದ್ರ ಕೆ ವಿ
author img

By

Published : Sep 24, 2021, 3:08 PM IST

ಮಂಗಳೂರು: ಮಂಗಳೂರಿನ ಬೀಚ್ ಸೇರಿದಂತೆ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಲಿ ಟೂರಿಸಂ ಆರಂಭಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ತಿಳಿಸಿದ್ದಾರೆ.

ಹೆಲಿ ಟೂರಿಸಂ ಆರಂಭಿಸುವ ಚಿಂತನೆ:

ಮಂಗಳೂರು ಪ್ರೆಸ್ ಕ್ಲಬ್​ನಲ್ಲಿ ನಡೆದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ನವಮಂಗಳೂರು ಬಂದರು ಮೂಲಕ ಕ್ರೂಸ್​ಗಳಲ್ಲಿ ಬರುವ ವಿದೇಶಿ ಪ್ರವಾಸಿಗರಿಗೆ ಹೆಲಿ ಟೂರಿಸಂ ವ್ಯವಸ್ಥೆ ಮಾಡುವ ಮೂಲಕ ಪ್ರವಾಸಿ ತಾಣಗಳನ್ನು ತೋರಿಸಲು ಬೇಕಾದ ವ್ಯವಸ್ಥೆ ಮಾಡಬೇಕಾಗಿದೆ. ಅದಕ್ಕೂ ಮೊದಲು ದಕ್ಷಿಣ ಕನ್ನಡ ಜಿಲ್ಲೆಯ ಬೀಚ್​​ಗಳಲ್ಲಿ ವಿದೇಶಿ ಪ್ರವಾಸಿಗರನ್ನು ಆಕರ್ಷಿಸಲು ವ್ಯವಸ್ಥೆಗಳು ಆಗಬೇಕು. ಇದು ಪೂರ್ಣವಾದ ಬಳಿಕ ಹೆಲಿ ಟೂರಿಸಂ ಆರಂಭಿಸುವ ಚಿಂತನೆಯಿದೆ ಎಂದರು.

ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ.

ಮಂಗಳೂರಿನ ಇಡ್ಯಾ ಮತ್ತು ತಣ್ಣೀರುಬಾವಿ ಬೀಚ್​ಗೆ ಬ್ಲೂ ಫ್ಲ್ಯಾಗ್ ಮಾನ್ಯತೆಗೆ ಪ್ರಕ್ರಿಯೆ ನಡೆಯುತ್ತಿದೆ. ಎರಡು ಬೀಚ್​ಗಳ ಸುಮಾರು ಒಂದು ಕಿಲೋಮೀಟರ್ ಬ್ಲೂ ಪ್ಲಾಗ್ ಮಾನ್ಯತೆ ಸಿಗಲಿದ್ದು, ಪ್ರಕ್ರಿಯೆ ಮುಗಿದ ಬಳಿಕ ಯಾವುದೇ ಕ್ಷಣದಲ್ಲಿ ಅಭಿವೃದ್ಧಿ ಕಾರ್ಯ ಆರಂಭವಾಗಲಿದೆ ಎಂದರು.

ಮಂಗಳೂರಿನ ಒಂದು ಬೀಚ್​​ನಿಂದ ಮತ್ತೊಂದು ಬೀಚ್​ಗೆ ತೆರಳುವ ಪ್ರವಾಸಿಗರಿಗೆ ಬಸ್ ವ್ಯವಸ್ಥೆ ಮಾಡುವ ಪ್ರಯತ್ನಗಳು ನಡೆಯುತ್ತಿದೆ. ಬೆಂಗ್ರೆ ಬೀಚ್ ಅಭಿವೃದ್ಧಿ ಪಡಿಸಲು, ಅಲ್ಲಿ ಗಾಲ್ಫ್​​ ರೆಸಾರ್ಟ್ ಆರಂಭಿಸಿ ಸುಮಾರು 800 ಮಂದಿಗೆ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಪ್ರಕ್ರಿಯೆ ನಡೆಯುತ್ತಿದೆ. ಸಸಿಹಿತ್ಲು ಮತ್ತು ತಣ್ಣೀರು ಬಾವಿ ಬೀಚ್​ನಲ್ಲಿ ಸರ್ಫಿಂಗ್ ಸ್ಕೂಲ್ ಆರಂಭಿಸುವ ಚಿಂತನೆಯಿದೆ ಎಂದರು.

ಪಿಲಿಕುಳ ಝೂಗೆ ಮೂರು ಪ್ರಾಣಿಗಳನ್ನು ತರುವ ಚಿಂತನೆ ಇದೆ. ಆನೆ, ಝೀಬ್ರಾ ಮತ್ತು ಜಿರಾಫೆಯನ್ನು ಪ್ರಾಣಿಗಳ ವಿನಿಮಯ ಮೂಲಕ ತರುವ ಚಿಂತನೆ ಇದೆ. ಈ ಮೂಲಕ ಈ ಝೂವನ್ನು ಇನ್ನಷ್ಟು ಆಕರ್ಷಕ ಮಾಡಲಾಗುವುದು ಎಂದರು.

ಇದನ್ನೂ ಓದಿ: ಜಲ ಜೀವನ್ ಮಿಷನ್ ಅಡಿ 2023ಕ್ಕೆ ಎಲ್ಲ ಮನೆಗಳಿಗೂ ಕುಡಿಯುವ ನೀರು: ಸಚಿವ ಈಶ್ವರಪ್ಪ ಭರವಸೆ

ಮಂಗಳೂರಿಗೆ ದೇಶದ ವಿವಿಧ ಕಡೆಗಳಿಂದ ಪ್ರವಾಸಿಗರನ್ನು ಆಕರ್ಷಿಸಲು ದೇಶದ ವಿವಿಧ ವಿಮಾನ ನಿಲ್ದಾಣಗಳಲ್ಲಿ ಮಂಗಳೂರಿನ ಪ್ರವಾಸಿ ತಾಣಗಳ ಬಗ್ಗೆ ಮಾಹಿತಿ ನೀಡುವ ಫೋಟೋಗಳನ್ನು ಹಾಕಿಸುವ ಪ್ರಯತ್ನಗಳಾಗಿದೆ. ಈ ರೀತಿ ಆದರೆ ವಿವಿಧ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಮಂಗಳೂರಿಗೆ ಪ್ರವಾಸ ಬರಲು ಪ್ರೇರಣೆಯಾಗಲಿದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.