ಬೆಂಗಳೂರು: ಅತೃಪ್ತ ಶಾಸಕರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಕನ್ನಡ ಚಳುವಳಿ ವಾಟಾಳ್ ಪಕ್ಷದ ಮುಖ್ಯಸ್ಥ ವಾಟಾಳ್ ನಾಗರಾಜ್ ಆಗ್ರಹಿಸಿದ್ದಾರೆ.
ರಾಜಭವನದ ಬಳಿ ಮಾತಾನಾಡಿದ ಅವರು, ನಾನು ಈಗ ಸದನದ ಸದಸ್ಯ ಅಲ್ಲ. ಆದ್ರೆ ಒಂದು ಕಾಲದಲ್ಲಿ ಸದಸ್ಯನಾಗಿದ್ದೆ. ಸ್ವತಃ ವಿಶ್ವಾಸಮತ ಪಡೆಯುವ ಅಧಿಕಾರ ಸಿಎಂಗೆ ಇದೆ. ಸ್ಪೀಕರ್ ರಮೇಶ್ ಕುಮಾರ್ ಅದ್ಭುತವಾಗಿ ಸದನದಲ್ಲಿ ಸಭೆ ನಡೆಸುತ್ತಿದ್ದಾರೆ. ಸರ್ಕಾರದಲ್ಲಿ ವಿಶ್ವಾಸ ಆಗಬಹುದು, ಆಗದೆಯೂ ಇರಬಹುದು. ಆದ್ರೆ ಇದರ ಬಗ್ಗೆ ಚರ್ಚೆ ಆಗಲೇಬೇಕು. ರಾಜ್ಯದ ಜನರಿಗೆ ವಿಚಾರಗಳು ತಿಳಿಯಬೇಕು ಎಂದು ಆಗ್ರಹಿಸಿದರು.
ಸದನದಲ್ಲಿ ಎಲ್ಲಾ ಸದಸ್ಯರು ಇರಬೇಕಾಗಿರುವುದು ಸಂಪ್ರದಾಯ. ಆದ್ರೆ 12 ಜನ ಶಾಸಕರು ಮುಂಬೈಯಲ್ಲಿದ್ದಾರೆ. ಗೈರಾಗಿರುವ ಶಾಸಕರ ಮೇಲೆ ಪಕ್ಷ ಶಿಸ್ತಿನ ಕ್ರಮ ತೆಗೆದುಕೊಳ್ಳಬೇಕು. ಹಾಗೇ ವಿಪ್ ವಿಚಾರ ತೀರ್ಮಾನ ಆಗಲೇಬೇಕು ಎಂದು ಆಗ್ರಹಿಸಿದರು.