ಬಂಟ್ವಾಳ (ದಕ್ಷಿಣ ಕನ್ನಡ): ಗ್ಯಾಸ್ ಟ್ಯಾಂಕರ್ ಮತ್ತು ಮಾರುತಿ ಇಕೋ ಕಾರಿನ ನಡುವೆ ಮುಖಾಮುಖಿ ಅಪಘಾತ ನಡೆದು 6 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಮೆಲ್ಕಾರ್ ಸಮೀಪದ ಪಾಣೆಮಂಗಳೂರಿನಲ್ಲಿ ನಡೆದಿದೆ.
ಮುಲ್ಕಿ ಸಮೀಪದ ಕಿನ್ನಿಗೋಳಿ ಐಕಳ ನಿವಾಸಿಗಳು ಸುಳ್ಯದ ನಿಂತಿಕಲ್ಲು ಎಂಬಲ್ಲಿ ಕೊರಗಜ್ಜ ದೈವದ ನರ್ತನ ಸೇವೆಗೆ ಡೋಲು ಬಾರಿಸುವ ಸೇವೆ ಸಲ್ಲಿಸಿ, ಬೆಳಿಗ್ಗೆ ವಾಪಸಾಗುತ್ತಿದ್ದರು. ಈ ವೇಳೆ ಅನಾಹುತ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ಜಖಂ ಆಗಿದೆ.
ಸ್ಥಳಕ್ಕಾಗಮಿಸಿದ ಟ್ರಾಫಿಕ್ ಎಸ್‌ಐ ರಾಜೇಶ್ ಮತ್ತು ತಂಡ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಇದನ್ನೂ ಓದಿ: ಸಿಡಿ ಪ್ರಕರಣದಲ್ಲಿ ವೈಯಕ್ತಿಕ ಹೇಳಿಕೆ ನೀಡುವುದಿಲ್ಲ: ಸಚಿವ ಸುಧಾಕರ್