ಕೆಂಜಾರಿನ ಸಲೂನ್ನಲ್ಲಿ ಇನ್ನೊಂದು ಬ್ಯಾಗ್ ಇರಿಸಲು ಯತ್ನಿಸಿದ್ದನಂತೆ ಶಂಕಿತ ವ್ಯಕ್ತಿ - ಸಲೂನ್ನಲ್ಲಿ ಬಾಂಬ್ ಬ್ಯಾಗ್ ಇಡಲು ಯತ್ನ
ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್ ಇರಿಸಿದ್ದ ವ್ಯಕ್ತಿ ಮೊದಲು ಸಲೂನ್ವೊಂದರಲ್ಲಿ ಬ್ಯಾಗ್ ಇಡಲು ಯತ್ನಿಸಿದ್ದ ಎಂಬ ಮಾಹಿತಿ ತಿಳಿದುಬಂದಿದೆ.
![ಕೆಂಜಾರಿನ ಸಲೂನ್ನಲ್ಲಿ ಇನ್ನೊಂದು ಬ್ಯಾಗ್ ಇರಿಸಲು ಯತ್ನಿಸಿದ್ದನಂತೆ ಶಂಕಿತ ವ್ಯಕ್ತಿ mng bomb](https://etvbharatimages.akamaized.net/etvbharat/prod-images/768-512-5785160-thumbnail-3x2-mngbomb.jpg?imwidth=3840)
ಮಂಗಳೂರು: ನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್ ಇರಿಸಿದ್ದ ಅಪರಿಚಿತ ವ್ಯಕ್ತಿ ಮೊದಲಿಗೆ ನಮ್ಮ ಸಲೂನ್ನಲ್ಲಿ ಬ್ಯಾಗ್ ಇರಿಸಲು ಬಂದಿದ್ದ. ಆದ್ರೆ ನಾನು ಬ್ಯಾಗ್ ಇಟ್ಟುಕೊಳ್ಳಲು ನಿರಾಕರಿಸಿದೆ ಎಂದು ಕೆಂಜಾರಿನಲ್ಲಿರುವ ಸಲೂನ್ ಮಾಲೀಕ ಸಲ್ಮಾನ್ ಅಲಿ ಹೇಳಿದ್ದಾರೆ.
ಈ ಅಪರಿಚಿತ ವ್ಯಕ್ತಿಯು ರಾಜ್ ಕುಮಾರ್ ಹೆಸರಿನ ಖಾಸಗಿ ಬಸ್ಸಿನಲ್ಲಿ ಬಂದು ಕೆಂಜಾರು ಸಮೀಪ ಬಂದಿಳಿದಿದ್ದ. ಜೊತೆಯಲ್ಲಿ ಎರಡು ಬ್ಯಾಗ್ ತಂದಿದ್ದ, ಒಂದು ಬ್ಯಾಗ್ ಕೆಂಜಾರ್ ಜಂಕ್ಷನ್ನಲ್ಲಿರುವ ಏರ್ ಪೋರ್ಟ್ ವ್ಯೂ ವಾಣಿಜ್ಯ ಸಂಕೀರ್ಣದ ಸಲೂನ್ನಲ್ಲಿ ಇರಿಸಲು ಯತ್ನಿಸಿದ್ದ ಎಂದು ತಿಳಿದು ಬಂದಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಅಂಗಡಿ ಮಾಲೀಕ ಸಲ್ಮಾನ್ ಅಲಿ, ಸಲೂನ್ನಲ್ಲಿ ಬ್ಯಾಗ್ ಇಡೋದಕ್ಕೆ ವಿರೋಧ ವ್ಯಕ್ತಪಡಿಸಿದೆ. ಈ ವೇಳೆ ಆತ ಮುಖಕ್ಕೆ ಮುಖ ಕೊಟ್ಟು ಮಾತನಾಡಿರಲಿಲ್ಲ. ತಲೆಗೆ ಕ್ಯಾಪ್ ಧರಿಸಿದ್ದ. ಇಲ್ಲಿ ಬ್ಯಾಗ್ ಇಡಬಹುದಾ ಎಂದಿ ಕೇಳಿದ್ದ. ಆಗ ನಾನು ಬೇಡ ಎಂದೆ. ಬಳಿಕ ಜಂಕ್ಷನ್ನಿಂದ ಆಟೋ ಮಾಡಿಕೊಂಡು ಏರ್ಪೋರ್ಟ್ಗೆ ತೆರಳಿದ ಎಂದು ಮಾಹಿತಿ ನೀಡಿದ್ದಾರೆ.
ಈ ಅಪರಿಚಿತ ವ್ಯಕ್ತಿಯು ರಾಜ್ ಕುಮಾರ್ ಹೆಸರಿನ ಖಾಸಗಿ ಬಸ್ಸಿನಲ್ಲಿ ಬಂದು ಕೆಂಜಾರು ಸಮೀಪ ಬಂದಿಳಿದಿದ್ದ. ಜೊತೆಯಲ್ಲಿ
ಎರಡು ಬ್ಯಾಗ್ ತಂದಿದ್ದ, ಒಂದು ಬ್ಯಾಗ್ ನ್ನು ಕೆಂಜಾರು ಸಮೀಪದ ವಾಣಿಜ್ಯ ಸಂಕೀರ್ಣದಲ್ಲಿ ಇಡಲು ಪ್ರಯತ್ನಿಸಿದ್ದ ಆತ ಕೆಂಜಾರ್ ಜಂಕ್ಷನ್ ನಲ್ಲಿರುವ ಏರ್ ಪೋರ್ಟ್ ವ್ಯೂ ವಾಣಿಜ್ಯ
ಸಂಕೀರ್ಣದ ಸೆಲೂನ್ ನಲ್ಲಿ ಇರಿಸಲು ಪ್ರಯತ್ನ ಪಟ್ಟಿದ್ದ ಎಂದು ತಿಳಿದು ಬಂದಿದೆ.
Body:ಈ ಬಗ್ಗೆ ಪ್ರತಿಕ್ರಿಯಿಸಿದ ಅಂಗಡಿ ಮಾಲಕ ಸಲ್ಮಾನ್ ಅಲಿ, ತಾನು ಬ್ಯಾಗ್ ಇಡೋದಕ್ಕೆ ವಿರೋಧ ವ್ಯಕ್ತಪಡಿಸಿದ್ದೆ. ಈ ಸಂದರ್ಭ ಆತ ಮುಖಕ್ಕೆ ಮುಖ ಕೊಟ್ಟು ಆತ ಮಾತನಾಡಿರಲಿಲ್ಲ. ತಲೆಗೆ ಹ್ಯಾಟ್ ಧರಿಸಿದ್ದ.
ಇಲ್ಲಿ ಬ್ಯಾಗ್ ಇಡಬಹುದಾ ಎಂದಿ ಕೇಳಿದ್ದ. ಇದಕ್ಕೆ ತಾನು ನಿರಾಕರಿಸಿದ್ದಕ್ಕೆ, ಜಂಕ್ಷನ್ ನಿಂದ ಅಟೋ ಮಾಡಿಕೊಂಡು ಏರ್ ಪೋರ್ಟ್ ಗೆ ತೆರಳಿದ್ದ ಎಂದು ಹೇಳಿದರು.Conclusion: