ಮಂಗಳೂರು: ನಗರದ ಕಾವೂರಿನ ವ್ಯಾಪಾರಿಯೊಬ್ಬ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ. ಪಂಜಿಮೊಗರು ನಿವಾಸಿ ಮುಸ್ತಾಫ್(35) ಆರೋಪಿ. ಈತ ಕಾವೂರಿನಲ್ಲಿ ತರಕಾರಿ ಅಂಗಡಿಯನ್ನು ನಡೆಸುತ್ತಿದ್ದಾನೆ.
ಅಪ್ರಾಪ್ತೆಯು ತನ್ನ ತಾಯಿಯೊಂದಿಗೆ ಕಾವೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದು, ಆರೋಪಿ ಮುಸ್ತಾಫ್ ತರಕಾರಿ ಅಂಗಡಿಗೆ ಬರುವ ಬಾಲಕಿಗೆ ತನಗೆ ಫೋನ್ ಮಾಡುವಂತೆ ದಿನವೂ ಕಿರುಕುಳ ನೀಡುತ್ತಿದ್ದನಂತೆ. ಅಲ್ಲದೇ, ತಾನೇ ಫೋನ್ ಮಾಡಿ ಅಶ್ಲೀಲವಾಗಿ ಮಾತನಾಡುತ್ತಿದ್ದನಂತೆ. ಇದನ್ನು ಬಾಲಕಿ ನಿರ್ಲಕ್ಷಿಸಿದ್ದಳು.
ಜು.8 ರಂದು ಬಾಲಕಿ ಮನೆಯಲ್ಲಿ ಒಬ್ಬಳೇ ಇದ್ದಾಗ ಆರೋಪಿ ಮುಸ್ತಾಫ್ ಮನೆಗೆ ನುಗ್ಗಿ ಮಾನಭಂಗಕ್ಕೆ ಯತ್ನಿಸಿದ್ದಾನೆ. ಬಳಿಕ ಈ ವಿಚಾರ ತಿಳಿಸಿದರೆ ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆಯೊಡ್ಡಿದ್ದಾನಂತೆ. ಈ ಬಗ್ಗೆ ಬಾಲಕಿಯು ತನ್ನ ತಾಯಿಗೆ ವಿವರಿಸಿದ್ದಾಳೆ. ಆಗ ಮುಸ್ತಾಫ್ ವಿರುದ್ಧ ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಓದಿ; ಲಾರಿ-ಕಾರ್ ಮಧ್ಯೆ ಭೀಕರ ರಸ್ತೆ ಅಪಘಾತ: ಒಂದೇ ಕುಟುಂಬದ ನಾಲ್ವರು ಸಾವು