ETV Bharat / city

ವಂದೇ ಭಾರತ್​​​​ ಮಿಷನ್​: ಯುಎಇಯಿಂದ ಮಂಗಳೂರು ತಲುಪಿದ 176 ಭಾರತೀಯರು

ವಂದೇ ಬಾರತ್​ ಮಿಷನ್ ಅಡಿಯಲ್ಲಿ ವಿದೇಶಗಳಲ್ಲಿನ ಭಾರತೀಯರನ್ನು ಕರೆ ತರಲಾಗುತ್ತಿದ್ದು, ಈಗ ಮಂಗಳೂರಿಗೆ ಯುಎಇಯಿಂದ 176 ಭಾರತೀಯರು ಆಗಮಿಸಿದ್ದಾರೆ.

vande bharat mission
ವಂದೇ ಭಾರತ್​​​​ ಮಿಷನ್
author img

By

Published : May 12, 2020, 11:36 PM IST

ಮಂಗಳೂರು: 'ವಂದೇ ಭಾರತ್ ಮಿಷನ್' ಅಡಿಯಲ್ಲಿ ವಿದೇಶದಿಂದ ಏರ್ ಲಿಫ್ಟ್ ಮಾಡಿರುವ ಭಾರತೀಯರ ತಂಡ ಇಂದು ಯುಎಇಯಿಂದ ಮಂಗಳೂರು ತಲುಪಿತು. ತಾಯ್ನಾಡಿನ ನೆಲ ತಲುಪಿದವರ ಪ್ರಯಾಣಿಕರಲ್ಲಿ ಸಂತಸ ತುಂಬಿತ್ತು.

vande bharat mission
ವಂದೇ ಭಾರತ್​​​​ ಮಿಷನ್

ಯುಎಇ ಕಾಲಮಾನ 5.10ಕ್ಕೆ ಹೊರಟ ಏರ್ ಇಂಡಿಯಾ IX384 ವಿಮಾನದ ಮೂಲಕ ಆಗಮಿಸಿದ ವಿಮಾನ ಭಾರತೀಯ ಕಾಲಮಾನ ರಾತ್ರಿ 10.10ರ ವೇಳೆಗೆ 176 ಭಾರತೀಯರನ್ನು ತಾಯ್ನೆಲಕ್ಕೆ ತಲುಪಿಸಿದೆ. ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಭಾಗದ ಪ್ರಯಾಣಿಕರಿರುವ ಈ ವಿಮಾನದಲ್ಲಿ 95 ಮಂದಿ ಪುರುಷರು, 81 ಮಂದಿ ಮಹಿಳೆಯರು ಆಗಮಿಸಿದ್ದಾರೆ. ಇದರಲ್ಲಿ 38 ಮಂದಿ ಗರ್ಭಿಣಿಯರು, 12 ಮಂದಿ ತುರ್ತು ವೈದ್ಯಕೀಯ ಚಿಕಿತ್ಸೆಯ ಅಗತ್ಯವುಳ್ಳವರು ಇದ್ದರು.

vande bharat mission
ವಂದೇ ಭಾರತ್​​​​ ಮಿಷನ್

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ‌ ಬಂದಿಳಿದ ಪ್ರಯಾಣಿಕರಿಗೆ ವೈದ್ಯಕೀಯ ತಪಾಸಣೆ ನಡೆಸಿದ ಬಳಿಕ ಮುನ್ನೆಚ್ಚರಿಕಾ ಕ್ರಮವಾಗಿ ಕ್ವಾರಂಟೈನ್ ಮುದ್ರೆ ಒತ್ತಲಾಯಿತು. ಬಳಿಕ ಪ್ರತ್ಯೇಕ ಐವರು ಅಧಿಕಾರಿಗಳು 10 ಬಸ್​ಗಳ ಮೂಲಕ ಕ್ವಾರಂಟೈನ್ ಸ್ಥಳಗಳಿಗೆ ಕರೆ ತಂದಿದ್ದಾರೆ.

vande bharat mission
ವಂದೇ ಭಾರತ್​​​​ ಮಿಷನ್

ವಿದೇಶದಿಂದ ಆಗಮಿಸಿರುವ ಈ ಪ್ರಯಾಣಿಕರನ್ನು 14 ದಿನಗಳ ಕಾಲ ಸರ್ಕಾರಿ ನಿಯಂತ್ರಣದಲ್ಲಿರುವ ಹೊಟೇಲ್​​ಗಳಲ್ಲಿ ಅಥವಾ ಹಾಸ್ಟೆಲ್​ಗಳಲ್ಲಿ ಕಡ್ಡಾಯ ಕ್ವಾರಂಟೈನ್​ಗೆ ಒಳಪಡಿಸಲಾಗುವುದು. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕ್ವಾರಂಟೈನ್ ವ್ಯವಸ್ಥೆಗಾಗಿ 17 ಹೊಟೇಲ್​ಗಳು ಹಾಗೂ 12 ಹಾಸ್ಟೆಲ್​​ಗಳನ್ನು ಈಗಾಗಲೇ ವ್ಯವಸ್ಥೆ ಮಾಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.