ETV Bharat / city

ದ.ಕ ಜಿಲ್ಲೆಯಲ್ಲಿ 1,51,398 ಪಲ್ಸ್ ಪೋಲಿಯೋ ಲಸಿಕಾ ಗುರಿ: ಡಾ. ರಾಮಚಂದ್ರ ಬಾಯಿರಿ - pulse polio 2021

ಪ್ರತೀ ವರ್ಷದಂತೆ 921 ಲಸಿಕಾ ಬೂತ್​ಗಳನ್ನು ತೆಗೆಯಲಾಗುತ್ತದೆ. ‌ಬೆಳಗ್ಗೆ 8ರಿಂದ 5ರತನಕ ಲಸಿಕೆ ಹಾಕಲಾಗುತ್ತದೆ. ಕೋವಿಡ್ ಮುಂಜಾಗ್ರತೆ ವಹಿಸಿ ಪಲ್ಸ್ ಪೋಲಿಯೋ ಲಸಿಕೆ ಹಾಕುವ ಕಾರ್ಯಕ್ರಮವನ್ನು ಕೈಗೊಳ್ಳಲಾಗಿದೆ. ಅಲ್ಲದೆ ಆರು ಮೊಬೈಲ್ ಲಸಿಕಾ ಬೂತ್​ಗಳನ್ನು ಮಾಡಲಾಗಿದ್ದು, ರೈಲು ನಿಲ್ದಾಣ, ವಿಮಾನ ನಿಲ್ದಾಣ, ಬಸ್ ತಂಗುದಾಣಗಳು ಸೇರಿದಂತೆ 26 ಟ್ರ್ಯಾಂಸಿಯಂಟ್ ಬೂತ್​ಗಳನ್ನು ತೆರೆಯಲಾಗಿದೆ.

151398-pulse-polio-vaccine-target
ಡಾ ರಾಮಚಂದ್ರ ಬಾಯಿರಿ
author img

By

Published : Jan 29, 2021, 10:04 PM IST

ಮಂಗಳೂರು: ಜ. 31ರಂದು ಪಲ್ಸ್ ಪೋಲಿಯೋ ಕಾರ್ಯಕ್ರಮ ನಡೆಯಲಿದ್ದು, ದ.ಕ ಜಿಲ್ಲೆಯಲ್ಲಿ ಈ ಬಾರಿ 1,51,398 ಮಕ್ಕಳಿಗೆ ಲಸಿಕೆ ಹಾಕಲು ಗುರಿ ಇರಿಸಲಾಗಿದೆ ಎಂದು ದ.ಕ ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಚಂದ್ರ ಬಾಯಿರಿ ಹೇಳಿದರು.

ದ.ಕ ಜಿಲ್ಲೆಯಲ್ಲಿ 1,51,398 ಪಲ್ಸ್ ಪೋಲಿಯೋ ಲಸಿಕಾ ಗುರಿ

ನಗರದ ಪ್ರೆಸ್ ಕ್ಲಬ್​ನಲ್ಲಿ ಮಾತನಾಡಿದ ಅವರು, ಬಂಟ್ವಾಳದಲ್ಲಿ 30,352, ಬೆಳ್ತಂಗಡಿ ಯಲ್ಲಿ 19659, ಮಂಗಳೂರಿನಲ್ಲಿ 69,074, ಪುತ್ತೂರಿನಲ್ಲಿ 21,456, ಸುಳ್ಯದಲ್ಲಿ 10,857 ತಾಲೂಕುವಾರು ಮಕ್ಕಳಿಗೆ ಲಸಿಕೆ ಹಾಕಲಾಗುತ್ತದೆ‌. ಪ್ರತೀ ವರ್ಷದಂತೆ 921 ಲಸಿಕಾ ಬೂತ್​ಗಳನ್ನು ತೆಗೆಯಲಾಗುತ್ತದೆ ಎಂದರು.

ಓದಿ-ಶೋಕಿಯಾಗಿ ಕಾಲ ಕಳೆದ ಮೈಸೂರು ರಾಜರು.. ರೆಸಾರ್ಟ್‌ ನಿಗಮದ ಅಧ್ಯಕ್ಷ ಅಪ್ಪಣ್ಣ ಮಾತಿನ ಕಿಡಿ..

ಕೋವಿಡ್ ಮುಂಜಾಗ್ರತೆ ವಹಿಸಿ ಬೆಳಗ್ಗೆ 8ರಿಂದ 5ರ ತನಕ ಲಸಿಕೆ ಹಾಕಲಾಗುತ್ತದೆ. ಹಾಗೂ 6 ಮೊಬೈಲ್ ಲಸಿಕಾ ಬೂತ್​ಗಳನ್ನು ಸಹ ಆಯೋಜನೆ ಮಾಡಲಾಗಿದೆ. ರೈಲು ನಿಲ್ದಾಣ, ವಿಮಾನ ನಿಲ್ದಾಣ, ಬಸ್ ತಂಗುದಾಣಗಳು ಸೇರಿದಂತೆ 26 ಟ್ರ್ಯಾಂಸಿಯಂಟ್ ಬೂತ್​ಗಳನ್ನು ತೆರೆಯಲಾಗಿದೆ. ಎಲ್ಲರೂ ತಪ್ಪದೆ ತಮ್ಮ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿಸಬೇಕೆಂದು ವಿನಂತಿ ಮಾಡಿದರು‌.

ಭಾರತದಲ್ಲಿ 2011 ಜ‌. 13ರಂದು ಪಶ್ಚಿಮ ಬಂಗಾಲದ ಹೌರಾದಲ್ಲಿ ಕೊನೆಯ ಪೋಲಿಯೋ ಪ್ರಕರಣ ದಾಖಲಾಗಿದೆ. ದ.ಕ ಜಿಲ್ಲೆಯಲ್ಲಿ 1999ನೇ ಇಸವಿಯಲ್ಲಿ ಕೊನೆಯ ಪ್ರಕರಣ ಕಂಡು ಬಂದಿದೆ. ಈ ಮೂಲಕ ಇಡೀ ಭಾರತದಲ್ಲಿ ಹತ್ತು ವರ್ಷಗಳಲ್ಲಿ ಯಾವುದೇ ಪೋಲಿಯೋ ಪ್ರಕರಣಗಳು ವರದಿಯಾಗಿಲ್ಲ ಎಂದು ಡಾ. ರಾಮಚಂದ್ರ ಬಾಯಿರಿ ಮಾಹಿತಿ ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.