ಕಲಬುರಗಿ : ಪಿಎಸ್ಐ ಪರೀಕ್ಷೆ ಅಕ್ರಮ ಪ್ರಕರಣದ ಮಧ್ಯೆ ಮತ್ತೊಂದು ಅಕ್ರಮ ನೇಮಕ ಬಯಲಾಗಿದೆ. ಪಿಎಸ್ಐ, ಕಾನ್ಸ್ಟೇಬಲ್, ಕೆಪಿಎಸ್ಸಿ ಜತೆಗೆ ಪಿಡಬ್ಲ್ಯೂಡಿನಲ್ಲಿಯೂ ಅಕ್ರಮ ನಡೆದಿರು ಬಗ್ಗೆ ವಿಡಿಯೋವೊಂದು ಹರಿದಾಡುತ್ತಿದೆ.
ಪಿಡಬ್ಲ್ಯೂಡಿ ಪರೀಕ್ಷೆಯಲ್ಲಿ ಬ್ಲೂಟೂತ್ ಡಿವೈಸ್ ಬಳಸಿ ಅಕ್ರಮ ಎಸಗಿರುವ ವಿಡಿಯೋ ಲಭ್ಯವಾಗಿದೆ. ಮೊದಲು ಈ ವಿಡಿಯೋ ಪಿಎಸ್ಐ ಪರೀಕ್ಷೆಗೆ ಹೇಳಲಾದ ಉತ್ತರಗಳು ಎಂದಾಗಿತ್ತು. ಆದರೆ, ಈಗ ಬ್ಲೂಟೂತ್ ಬಳಸಿ ಉತ್ತರ ನೀಡುತ್ತಿರುವ ವಿಡಿಯೋ ಬೇರೆ ಎಂದು ಹೇಳಲಾಗುತ್ತಿದೆ. ಪಿಡಬ್ಲ್ಯೂಡಿ ಜೂನಿಯರ್ ಇಂಜಿನಿಯರ್ ಪರೀಕ್ಷೆಯಲ್ಲಿ ಬಂದ ಪ್ರಶ್ನೆಗಳಿಗೆ ಹೇಳಲಾದ ಉತ್ತರಗಳು ಎನ್ನಲಾಗುತ್ತಿದೆ.
ವಿಡಿಯೋದಲ್ಲಿ ಹೇಳಿರುವ ಪ್ರಶ್ನೆಗಳು ಹಾಗೂ ಪಿಡಬ್ಲ್ಯೂಡಿ ಪ್ರಶ್ನೆ ಪತ್ರಿಕೆಯಲ್ಲಿರುವ ಪ್ರಶ್ನೆಗಳು ಒಂದೇ ಆಗಿರುವುದರಿಂದ ಇದು 2021ರ ಡಿಸೆಂಬರ್ 13ರಲ್ಲಿ ನಡೆದ ಪಿಡಬ್ಲ್ಯೂಡಿ ಜೂನಿಯರ್ ಇಂಜಿನಿಯರ್ ಪರೀಕ್ಷೆಯದ್ದು ಎಂದು ಹೇಳಲಾಗುತ್ತಿದೆ. ಪಿಎಸ್ಐ ಪರೀಕ್ಷೆ ಅಕ್ರಮ ಪ್ರಕರಣ ಬೆನ್ನತಿದ್ದ ಸಿಐಡಿ ಪೊಲೀಸರಿಗೆ ದಿನಕ್ಕೊಂದು ಟ್ವಿಸ್ಟ್ ಸಿಗುತ್ತಿದೆ.
ಇದನ್ನೂ ಓದಿ: ಪಿಎಸ್ಐ ಪರೀಕ್ಷೆಯಲ್ಲಿ ಬ್ಲೂಟೂತ್ ಡಿವೈಸ್ ಬಳಕೆ : ವಿಡಿಯೋ