ETV Bharat / city

ನೀರಿನ ರಭಸಕ್ಕೆ ಟ್ರ್ಯಾಕ್ಟರ್ ಸಮೇತ ಕೊಚ್ಚಿ ಹೋದ ಯುವಕರು: ಚಾಲಕ ಬಚಾವ್, ಮತ್ತೋರ್ವ ಬಲಿ

ತುಂಬಿ ಹರಿಯುತ್ತಿದ್ದ ಹಳ್ಳ ದಾಟುವ ದುಸ್ಸಾಹಸ-ಟ್ರ್ಯಾಕ್ಟರ್ ಸಮೇತ ಕೊಚ್ಚಿ ಹೋದ ಯುವಕರು- ಚಾಲಕ ಬಚಾವ್, ಮತ್ತೋರ್ವ ಬಲಿ-ಕಲಬುರಗಿ ಜಿಲ್ಲೆಯ ಕಡಣಿ ಗ್ರಾಮದಲ್ಲಿ ಘಟನೆ

Tractor washed into the water in Kalburgi
ನೀರಿನ ರಭಸಕ್ಕೆ ಕೊಚ್ಚಿ ಹೋದ ಟ್ರ್ಯಾಕ್ಟರ್​
author img

By

Published : Jul 23, 2022, 10:55 AM IST

ಕಲಬುರಗಿ: ಜಿಲ್ಲೆಯಾದ್ಯಂತ ಕಳೆದ ರಾತ್ರಿ ಭಾರಿ ಮಳೆಯಾಗಿದೆ. ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ತುಂಬಿ ಹರಿಯುತ್ತಿದ್ದ ಹಳ್ಳ ದಾಟುವ ದುಸ್ಸಾಹಸ ಮಾಡಿದ ಪರಿಣಾಮ ಟ್ರ್ಯಾಕ್ಟರ್ ಸಮೇತ ಇಬ್ಬರು ನೀರಿನ ರಭಸಕ್ಕೆ ಕೊಚ್ಚಿ ಹೋಗಿರುವ ಘಟನೆ ಜಿಲ್ಲೆಯ ಕಡಣಿ ಗ್ರಾಮದಲ್ಲಿ ಸಂಭವಿಸಿದೆ.

ಘಟನೆಯಲ್ಲಿ ಟ್ರ್ಯಾಕ್ಟರ್ ಚಾಲಕ ಬಚಾವ್ ಆಗಿದ್ದು, ಇನ್ನೋರ್ವ ಸಾವನ್ನಪ್ಪಿದ್ದಾನೆ. ಕಡಣಿ ಗ್ರಾಮದ ಸಿದ್ದಪ್ಪ ಕೆರಂಬಗಿ ಮೃತ ವ್ಯಕ್ತಿ. ನಿನ್ನೆ(ಶುಕ್ರವಾರ) ಕಡಣಿ ಹೊರವಲಯದ ಹಳ್ಳದ ನೀರಿನಲ್ಲಿ ಟ್ರ್ಯಾಕರ್ ದಾಟಿಸುವ ವೇಳೆ ನೀರಿನ ರಭಸಕ್ಕೆ ಟ್ರ್ಯಾಕ್ಟರ್ ಕೊಚ್ಚಿ ಹೋಗಿದೆ ಎನ್ನಲಾಗ್ತಿದೆ.

ನೀರಿನ ರಭಸಕ್ಕೆ ಕೊಚ್ಚಿ ಹೋದ ಟ್ರ್ಯಾಕ್ಟರ್​

ಟ್ರ್ಯಾಕ್ಟರ್​​ನಲ್ಲಿದ್ದ ಇಬ್ಬರ ಪೈಕಿ ಚಾಲಕ ಮುಳ್ಳು ಕಂಟಿ ಹಿಡಿದು ಬಚಾವ್ ಆಗಿದ್ದಾನೆ. ಆದ್ರೆ ಇನ್ನೋರ್ವ ಯುವಕ ನಾಪತ್ತೆಯಾಗಿದ್ದ. ರಾತ್ರಿಯಿಡಿ ಶೋಧಕಾರ್ಯ ನಡೆಸಿದಾಗ ಸುಮಾರು ಒಂದು ಕಿ.ಮೀ ದೂರದಲ್ಲಿ ಮುಳ್ಳುಕಂಟಿಯಲ್ಲಿ ಮೃತದೇಹ ಸಿಲುಕಿರುವುದು ಪತ್ತೆಯಾಗಿದೆ.

ಸದ್ಯ ಇಡೀ ಗ್ರಾಮವೇ ಶೋಕ ಸಾಗರದಲ್ಲಿ ಮುಳುಗಿದೆ. ಮೃತ ಯುವಕನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಫರತಾಬಾದ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ಕಾಗಿಣಾ ನದಿಗೆ ಜಿಗಿದು ವಿದ್ಯಾರ್ಥಿನಿ ಆತ್ಮಹತ್ಯೆ: ಶವಕ್ಕಾಗಿ ತೀವ್ರ ಶೋಧ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.