ETV Bharat / city

ಕಲಬುರ್ಗಿಯಲ್ಲಿ ಮತ್ತೆ ಮೂವರಿಗೆ ಸೋಂಕು.. ಆರೇಂಜ್‌ ಆದ್ರೂ ಆತಂಕ ತಪ್ಪಲಿಲ್ಲ.. - ಲಾಕ್​ಡೌನ್​ೠ

ಇಂದು ಸೋಂಕಿಗೆ ತುತ್ತಾದವರ ಪೈಕಿ ಇಬ್ಬರು ಮೋಮಿನಪುರದ ನಿವಾಸಿಗಳಾಗಿದ್ದಾರೆ. ಇದೇ ವೇಳೆ 41 ವರ್ಷದ ವ್ಯಕ್ತಿ ಪಿ-604 ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ. ಈಗ ಕೊರೊನಾ ಸೋಂಕಿರುವುದು ದೃಢಪಟ್ಟಿದೆ.

corona
ಕೊರೊನಾ
author img

By

Published : May 3, 2020, 1:04 PM IST

ಕಲಬುರಗಿ: ಜಿಲ್ಲೆಯಲ್ಲಿ ಮತ್ತೆ ಮೂವರಲ್ಲಿ ಕೊರೊನಾ ಸೋಂಕು ಕಾಣಿಸಿದೆ. 13 ವರ್ಷದ ಬಾಲಕಿ, 54 ವರ್ಷದ ಪುರುಷ ಹಾಗೂ 41 ವರ್ಷದ ಪುರುಷನಿಗೆ ಸೋಂಕು ತಗುಲಿದ್ದು, ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

13 ವರ್ಷದ ಬಾಲಕಿ ಹಾಗೂ 54 ವರ್ಷದ ಪುರುಷನಿಗೆ ಪಿ-532ರ ಸಂಪರ್ಕದಿಂದ ಸೋಂಕು ತಗುಲಿದೆ ಹಾಗೂ ಪಿ-532, ಪಿ-205ರ ಸಂಪರ್ಕವೂ ಕೂಡಾ ಇದೆ. ಬಟ್ಟೆ ವರ್ತಕನಾಗಿದ್ದ 55 ವರ್ಷದ ಪಿ-205 ಸೋಂಕಿನಿಂದ ಮೃತಪಟ್ಟಿದ್ದ. ಆತನಿಂದ ಈವರಗೆ 25 ಜನರಿಗೆ ಸೋಂಕು ಹರಡಿದೆ.

ಇಂದು ಸೋಂಕಿಗೆ ತುತ್ತಾದವರ ಪೈಕಿ ಇಬ್ಬರು ಮೋಮಿನಪುರದ ನಿವಾಸಿಗಳಾಗಿದ್ದಾರೆ. ಇದೇ ವೇಳೆ 41 ವರ್ಷದ ವ್ಯಕ್ತಿ ಪಿ-604 ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ. ಈಗ ಕೊರೊನಾ ಸೋಂಕಿರುವುದು ದೃಢಪಟ್ಟಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ ಜಿಲ್ಲೆಯಲ್ಲಿ 58ಕ್ಕೆ ಏರಿಕೆಯಾಗಿದೆ. ಜಿಲ್ಲೆ ರೆಡ್ ಝೋನ್​​ನಿಂದ ಆರೇಂಜ್ ಝೋನ್​​ಗೆ ಬಂದ ಬೆನ್ನಲ್ಲೇ ಮತ್ತೆ ಸೋಂಕಿತರು ಪತ್ತೆಯಾಗಿದ್ದು, ಜನತೆಯಲ್ಲಿ ಆತಂಕ ಹೆಚ್ಚಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.