ETV Bharat / city

ಮ್ಯಾನ್​ ಹೋಲ್​ ದುರಂತ: ಮೃತರ ಕುಟುಂಬಕ್ಕೆ ಸರ್ಕಾರಿ ನೌಕರಿ, ತಲಾ 5 ಲಕ್ಷ ರೂ. ಪರಿಹಾರ

ಕಲಬುರಗಿ ಮ್ಯಾನ್ ಹೋಲ್ ದುರಂತದಲ್ಲಿ ಅಧಿಕಾರಿಗಳ, ಗುತ್ತಿಗೆದಾರನ ನಿರ್ಲಕ್ಷ್ಯವಿದೆ. ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಪರಿಹಾರ ನೀಡಲಾಗಿದೆ. ಹೆಚ್ಚುವರಿಯಾಗಿ ಮತ್ತೆ 5 ಲಕ್ಷ ಪರಿಹಾರ ನೀಡಲಾಗುವುದು ಎಂದು ಶಿವಣ್ಣ ಹೇಳಿದರು.

state-safai-karmachari-commission-chairman-m-shivanna-kalaburagi-visited-manhole-tragedy-place
ಮ್ಯಾನ್​ ಹೋಲ್​ ದುರಂತ
author img

By

Published : Jan 30, 2021, 5:23 PM IST

ಕಲಬುರಗಿ: ಮ್ಯಾನ್ ಹೋಲ್ ದುರಂತ ಹಿನ್ನೆಲೆ ಇಂದು ನಗರಕ್ಕೆ ಭೇಟಿ ನೀಡಿದ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ.ಶಿವಣ್ಣ, ಘಟನಾ ಸ್ಥಳ ಪರಿಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಅಲ್ಲದೆ ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಚೆಕ್​​ ವಿತರಿಸಿ ಸಾಂತ್ವನ ಹೇಳಿದರು.

ಜ. 28ರಂದು ನಗರದ ಕೈಲಾಶ್ ನಗರದಲ್ಲಿ ಮ್ಯಾನ್ ಹೋಲ್ ಸ್ವಚ್ಛತೆಗೆ ಇಳಿದಿದ್ದ ಲಾಲ್ ಅಹ್ಮದ್ ಮತ್ತು ರಶೀದ್ ಅಹ್ಮದ್ ಎಂಬ ಗುತ್ತಿಗೆ ಕಾರ್ಮಿಕರು ಉಸಿರುಗಟ್ಟಿ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಮತ್ತೋರ್ವ ಕಾರ್ಮಿಕ ರಾಜ್ ಅಹ್ಮದ್, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಹಿನ್ನೆಲೆ ಆರ್​ಜಿ ನಗರ ಪೊಲೀಸ್ ಠಾಣೆಯಲ್ಲಿ ಒಳಚರಂಡಿ ಮಂಡಳಿ ಅಧಿಕಾರಿಗಳು ಹಾಗೂ ಗುತ್ತಿಗೆದಾರ ಸೇರಿ ಐವರ ವಿರುದ್ಧ ಎಫ್​ಐಆರ್ ದಾಖಲಾಗಿದೆ.

ಮೃತರ ಕುಟುಂಬಕ್ಕೆ ಸರ್ಕಾರಿ ನೌಕರಿ, 5 ಲಕ್ಷ ರೂ. ಪರಿಹಾರ

ಮ್ಯಾನ್ ಹೋಲ್ ದುರಂತ ಪ್ರಕರಣ ಹಿನ್ನೆಲೆ ಇಂದು ರಾಜ್ಯ ಸಫಾಯಿ ಕರ್ಮಚಾರಿ ಆರೋಗದ ಅಧ್ಯಕ್ಷ ಎಂ.ಶಿವಣ್ಣ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ‌ನಡೆಸಿದರು. ದುರಂತ ಸಂಭವಿಸಿದ ಬಗ್ಗೆ ಮಾಹಿತಿ ಪಡೆದ ಶಿವಣ್ಣ, ಇದೊಂದು ಅಮಾನವೀಯ ಘಟನೆ. ಇಂತಹ ಘೋರ ದುರಂತ ನಡೆಯಬಾರದಿತ್ತು. ಸುಪ್ರೀಂ ಕೋರ್ಟ್ ಹೇಳಿದ ನಂತರವೂ ಈ ರೀತಿಯಾಗಿ ಸ್ವಚ್ಛತೆಗಾಗಿ ಕಾರ್ಮಿಕರನ್ನು ಚರಂಡಿಗೆ ಇಳಿಸಿರೋದು ತಪ್ಪು.

ಓದಿ-ಫೆ. 1ರಿಂದ ರಾಜ್ಯದಲ್ಲಿ ಪೂರ್ಣ ಪ್ರಮಾಣದಲ್ಲಿ 9-12ನೇ ತರಗತಿ ಆರಂಭ

ದುರಂತದಲ್ಲಿ ಅಧಿಕಾರಿಗಳ, ಗುತ್ತಿಗೆದಾರನ ನಿರ್ಲಕ್ಷ್ಯವಿದೆ. ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಪರಿಹಾರ ನೀಡಲಾಗಿದೆ. ಹೆಚ್ಚುವರಿಯಾಗಿ ಮತ್ತೆ 5 ಲಕ್ಷ ಪರಿಹಾರ ನೀಡಲಾಗುವುದು ಎಂದು ಶಿವಣ್ಣ ಹೇಳಿದರು.

ಮೃತರ ಮನೆಗೆ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಸಚಿವರ ಮುಂದೆ ತಮ್ಮ ಪರಿಸ್ಥಿತಿಯ ಬಗ್ಗೆ ಅಳಲು ತೋಡಿಕೊಂಡ ಕುಟುಂಬಸ್ಥರು, ಕಣ್ಣೀರು ಹಾಕಿದರು. ಮನೆ ಯಜಮಾನನನ್ನು ಕಳೆದುಕೊಂಡು ಬದುಕು ನಡೆಸೋದು ಹೇಗೆ ಎಂಬುದು ತಿಳಿಯದಂತಾಗಿದೆ. ಪರಿಹಾರ ಅಷ್ಟೇ ಅಲ್ಲ ನಮಗೆ ಸರ್ಕಾರಿ ನೌಕರಿ ಕೊಡಿ ಅಂತ ಮೃತರ ಕುಟುಂಬಸ್ಥರು ಅಧ್ಯಕ್ಷರಿಗೆ, ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.

ಓದಿ-ಕಲಬುರಗಿ: ಮ್ಯಾನ್​ ಹೋಲ್ ಸ್ವಚ್ಛಗೊಳಿಸಲು ಇಳಿದ ಇಬ್ಬರು ಉಸಿರುಗಟ್ಟಿ ಸಾವು

ಅಲ್ಲದೆ ಯಾವುದೇ ಮುಂಜಾಗ್ರತೆ ವಹಿಸದೆ, ಸೇಫ್ಟಿ ಕಿಟ್​ಗಳನ್ನು ನೀಡದೆ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಒತ್ತಾಯಪೂರ್ವಕವಾಗಿ ನಮ್ಮನ್ನು ಡ್ರೈನೇಜ್​ಗೆ ಇಳಿಸಿ ಕೆಲಸ ಮಾಡಿಸುತ್ತಿದ್ದಾರೆ ಎಂದು ನೌಕರರು ಆರೋಪ ಮಾಡಿದ್ದಾರೆ.

ಮೃತರ ಅವಲಂಬಿತರಿಗೆ ಡಿ ಗ್ರೂಪ್ ನೌಕರಿ, ವಸತಿ ಹಾಗೂ ಮಕ್ಕಳಿಗೆ ಶಿಕ್ಷಣ ಸೌಲಭ್ಯ

ಮೃತರ ಕುಟುಂಬಕ್ಕೆ ಹೆಚ್ಚುವರಿ 5 ಲಕ್ಷ ರೂ. ಚೆಕ್ ವಿತರಿಸಿದ ಆಯೋಗದ ಅಧ್ಯಕ್ಷ ಶಿವಣ್ಣ, ಎರಡು ಕುಟುಂಬಗಳಿಗೆ ತಲಾ ಹತ್ತು ಲಕ್ಷ ರೂ. ಪರಿಹಾರ ಕೊಡಲಾಗ್ತಿದೆ. ಇನ್ನು ಮೃತರ ಅವಲಂಬಿತರಿಗೆ ಡಿ ಗ್ರೂಪ್ ನೌಕರಿ, ಪುನರ್ವಸತಿ ಯೋಜನೆ ಅಡಿ ಮನೆ ಒದಗಿಸುವಂತೆ ಹಾಗೂ ಮೃತರ ಮಕ್ಕಳಿಗೆ ಶಿಕ್ಷಣ ಸೌಲಭ್ಯಕ್ಕೂ ಕ್ರಮ ಕೈಗೊಳ್ಳುವಂತೆ ಶಿವಣ್ಣ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.