ಸೇಡಂ: ಸಾಮಾಜಿಕ ಅಂತರ ಪಾಲನೆ ಕಡ್ಡಾಯ ಎಂದು ಸರ್ಕಾರ ಹೇಳುತ್ತಿದ್ದರೂ ಜನರು ಮಾತ್ರ ಕ್ಯಾರೇ ಎನ್ನುತ್ತಿಲ್ಲ.
ಇಲ್ಲಿನ ಬಸ್ ನಿಲ್ದಾಣದ ಪಕ್ಕದ ಫಿವರ್ ಕ್ಲಿನಿಕ್ನಲ್ಲಿ ಕ್ವಾರಂಟೈನ್ನಲ್ಲಿ ಇರುವವರ ಗಂಟಲು ದ್ರವ ಸಂಗ್ರಹಿಸಲಾಗುತ್ತದೆ. ಆದರೆ, ಜನ ಸಾಮಾಜಿಕ ಅಂತರ ಪಾಲಿಸದೆ ಗುಂಪುಗುಂಪಾಗಿ ಮಾತಿಗಿಳಿಯುತ್ತಾರೆ.
ಪಟ್ಟಣದ ಹೃದಯ ಭಾಗದಲ್ಲಿ ಕ್ಲಿನಿಕ್ ಇದೆ. ಬಹುತೇಕ ಹಣ್ಣು, ತರಕಾರಿ, ಮೆಡಿಕಲ್, ಬಟ್ಟೆ ಅಂಗಡಿಗಳಿವೆ. ಕ್ಲಿನಿಕ್ಗೆ ಬರುವ ಜನರು ಎಲ್ಲೆಂದರಲ್ಲಿ ಮನಸೋ ಇಚ್ಛೆ ತಿರುಗಾಡಿ ಆತಂಕ ಸೃಷ್ಟಿಸುತ್ತಿದ್ದಾರೆ. ಅಲ್ಲದೆ, ಗಂಟಲು ದ್ರವ ಸಂಗ್ರಹ ಮಾಡುವಲ್ಲೂ ನಿಧಾನಗತಿ ಎಂಬ ಆರೋಪ ಕೇಳಿಬಂದಿದೆ.