ಕಲಬುರಗಿ: ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮದ ಪ್ರಮುಖ ಆರೋಪಿ ಎನ್ನಲಾದ ದಿವ್ಯಾ ಹಾಗರಗಿ ಸೇರಿ ಐವರನ್ನು ಪುಣೆಯಲ್ಲಿ ಸಿಐಡಿ ತಂಡ ಬಂಧಿಸಿ, ಕಲಬುರಗಿ ಕಚೇರಿಗೆ ಕರೆ ತಂದಿದೆ. ಸಿಐಡಿ ತಂಡ ರಾತ್ರಿ ಪುಣೆಗೆ ತೆರಳಿ ಆರೋಪಿಗಳನ್ನು ಬಂಧಿಸಿ, ಪೊಲೀಸ್ ಬಂದೋಬಸ್ತ್ನಲ್ಲಿ ನಗರಕ್ಕೆ ಕರೆ ತಂದಿದೆ.
ಜ್ಞಾನಜ್ಯೋತಿ ಶಾಲೆಯ ಕಾರ್ಯದರ್ಶಿ ದಿವ್ಯಾ ಹಾಗರಗಿ, ಮೇಲ್ವಿಚಾರಕರಾದ ಅರ್ಚನಾ, ಸುನೀತಾ ಹಾಗೂ ಆರೋಪಿಗಳಿಗೆ ಆಶ್ರಯ ನೀಡಿದ ಉದ್ಯಮಿ ಸುರೇಶ, ಕಾಳಿದಾಸ ಐದು ಜನರನ್ನು ಸಿಐಡಿ ಕರೆ ತಂದಿದೆ. ಪಿಎಸ್ಐ ಅಕ್ರಮ ಪ್ರಕರಣ ಹೊರ ಬರುತ್ತಿದ್ದಂತೆ ದಿವ್ಯಾ ಮತ್ತು ಟೀಮ್ ತಲೆಮರೆಸಿಕೊಂಡಿತ್ತು. ಇದೀಗ 18 ದಿನಗಳ ನಂತರ ಸಿಐಡಿ ಬಲೆಗೆ ಬಿದ್ದಿದೆ.
ಹೆಡ್ಮಾಸ್ಟರ್ ಕಾಶಿನಾಥ್, ಪಿಎಸ್ಐ ಅಭ್ಯರ್ಥಿ ಶಾಂತಾಬಾಯಿ ಸೇರಿದಂತೆ ಇನ್ನೂ ಹಲವರು ತಲೆಮರೆಸಿಕೊಂಡಿದ್ದಾರೆ. ಅವರ ಬಂಧನಕ್ಕೂ ಸಿಐಡಿ ಜಾಲ ಬೀಸಿದೆ. ಇನ್ನು ಪ್ರಾಥಮಿಕ ತನಿಖೆ ನಂತರ ದಿವ್ಯಾ ಮತ್ತು ಸಹಚರರನ್ನು ನ್ಯಾಯಾಂಗ ಬಂಧನಕ್ಕೆ ನೀಡುವ ಸಾಧ್ಯತೆ ಇದೆ.
(ಇದನ್ನೂ ಓದಿ: ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣ.. ದಿವ್ಯಾ ಹಾಗರಗಿಗೂ ಬಿಜೆಪಿಗೂ ಸಂಬಂಧ ಇಲ್ಲ.. ತೇಲ್ಕೂರ್ ಸ್ಪಷ್ಟನೆ.. )