ETV Bharat / city

ಪಿಎಸ್​​ಐ ನೇಮಕಾತಿ ಹಗರಣ: ಹಿರಿಯ ಪೊಲೀಸ್ ಅಧಿಕಾರಿಗಳೂ ಶಾಮೀಲಾಗಿರುವ ಶಂಕೆ

ಕಲಬುರಗಿ ನಗರದ ಜ್ಞಾನಜ್ಯೋತಿ ಶಿಕ್ಷಣ ಸಂಸ್ಥೆಯಿಂದ ಆರಂಭವಾದ ಅಕ್ರಮ‌‌ ಪಿಎಸ್ಐ ನೇಮಕಾತಿ ಪ್ರಕರಣ ಇದೀಗ ರಾಜ್ಯವ್ಯಾಪಿ ಸದ್ದು ಮಾಡುತ್ತಿದೆ. ಪಿಎಸ್ಐ ನೇಮಕಾತಿ ಪರೀಕ್ಷೆಯ ಅಕ್ರಮದಲ್ಲಿ ಮತ್ತಷ್ಟು ಪಿಎಸ್​ಐಗಳು ಲಾಕ್ ಆಗ್ತಾರಾ..? ಎಂಬ ಅನುಮಾನಗಳು ಕಾಡುತ್ತಿವೆ.

PSI exam scam : senior officials enquiry
ಪಿಎಸ್​​ಐ ನೇಮಕಾತಿ ಹಗರಣ: ಹಿರಿಯ ಪೊಲೀಸ್ ಅಧಿಕಾರಿಗಳೂ ಶಾಮೀಲಾಗಿರುವ ಶಂಕೆ
author img

By

Published : May 4, 2022, 1:45 PM IST

ಕಲಬುರಗಿ: ಪಿಎಸ್ಐ ಪರೀಕ್ಷೆ ಅಕ್ರಮ ಪ್ರಕರಣದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಹೆಸರು ಥಳಕು ಹಾಕಿಕೊಳ್ಳುತ್ತಿದೆ. ಸಿಐಡಿ ಅಧಿಕಾರಿಗಳು ಸಾಕ್ಷ್ಯ ಸಂಗ್ರಹದಲ್ಲಿ ತೊಡಗಿದ್ದಾರೆ. ಓರ್ವ ಅಧಿಕಾರಿಯನ್ನು ಕರೆತಂದು ವಿಚಾರಣೆ ಕೂಡಾ ನಡೆಸಲಾಗುತ್ತಿದೆ. ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ದೊಡ್ಡ ದೊಡ್ಡ ತಿಮಿಂಗಿಲಗಳ ಕೈವಾಡ ಇರೋದು ಮೇಲ್ನೋಟಕ್ಕೆ ಕಂಡುಬಂದಿದೆ. ಕೆಲವು ಹಿರಿಯ ಪೊಲೀಸ್ ಅಧಿಕಾರಿಗಳು ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದೆ.

ಮಧ್ಯವರ್ತಿಗಳಂತೆ ಆರೋಪಿ ಪೊಲೀಸ್​​ ಕಾನ್ಸ್​ಟೇಬಲ್ ರುದ್ರಗೌಡ ಪಾಟೀಲ್​ಗೆ ಅಭ್ಯರ್ಥಿಗಳನ್ನು ಭೇಟಿ ಮಾಡಿಸಿ ಹಣ ಕೂಡಾ ಅಧಿಕಾರಿಗಳೇ ಸಂದಾಯ ಮಾಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.‌ ಸದ್ಯ ಸಿಐಡಿ ಅಧಿಕಾರಿಗಳ ಅಕ್ರಮ ಕುರಿತಾಗಿ ಸಾಕ್ಷ್ಯ ಸಂಗ್ರಹದಲ್ಲಿ ತೊಡಗಿದ್ದು, ಓರ್ವ ಅಧಿಕಾರಿಯ ಕರೆ ತಂದು ವಿಚಾರಣೆ ನಡೆಸಿದ್ದಾರೆ. ಅಧಿಕಾರಿಯೊಬ್ಬರ ಮೊಬೈಲ್ ವಶಕ್ಕೆ ಪಡೆದು ಸಾಕ್ಷ್ಯ ಕಲೆ ಹಾಕಲಾಗುತ್ತಿದ

ಟ್ರೈನಿ ಪಿಎಸ್ಐ ವಿಚಾರಣೆ: ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ತರಬೇತಿಯಲ್ಲಿರುವ ಕೆಎಸ್ಐಎಸ್ಎಫ್ ಸಬ್​ ಇನ್ಸ್​​ಪೆಕ್ಟರ್ ಯಶವಂತಗೌಡ ಎಂಬುವವರನ್ನು ಸಿಐಡಿ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಬೆಂಗಳೂರು ಮೂಲದ ಯಶವಂತಗೌಡ ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಬೆಂಗಳೂರಿನಲ್ಲಿ ಪಾಸ್ ಆಗಿದ್ದ. ಕಳೆದ 22ರಂದು ಬೆಂಗಳೂರಿನ ಸಿಐಡಿ ಕಚೇರಿಗೆ ದಾಖಲಾತಿ ಪರಿಶೀಲನೆಗೆ ತೆರಳಿದ್ದ, ದಾಖಲಾತಿ ಪರಿಶೀಲನೆ ಮುಗಿಸಿ ವಾಪಸ್ ಆಗಿದ್ದ ಯಶವಂತ್ ಗೌಡ ಕಳೆದ ಎಂಟು ದಿನಗಳ ಹಿಂದೆ ಕಲಬುರಗಿಯ ಕಲಬುರಗಿ ಪಿಟಿಸಿಗೆ ಆಗಮಿಸಿದ್ದ. ಸದ್ಯ ಆತನನ್ನು ವಶಕ್ಕೆ ಪಡೆದ ಸಿಐಡಿ ಅಧಿಕಾರಿಗಳು ವಿಚಾರಣೆಯನ್ನು ಮುಂದುವರೆಸಿದ್ದಾರೆ.

ಮತ್ತಷ್ಟು ಸಬ್​​ ಇನ್ಸ್​​ಪೆಕ್ಟರ್​ಗಳು ಲಾಕ್?: ನಗರದ ಜ್ಞಾನಜ್ಯೋತಿ ಶಿಕ್ಷಣ ಸಂಸ್ಥೆಯಿಂದ ಆರಂಭವಾದ ಅಕ್ರಮ‌‌ ಪಿಎಸ್ಐ ನೇಮಕಾತಿ ಪ್ರಕರಣ ಇದೀಗ ರಾಜ್ಯವ್ಯಾಪಿ ಸದ್ದು ಮಾಡುತ್ತಿದೆ. ಪಿಎಸ್ಐ ನೇಮಕಾತಿ ಪರೀಕ್ಷೆಯ ಅಕ್ರಮದಲ್ಲಿ ಮತ್ತಷ್ಟು ಪಿಎಸ್​ಐಗಳು ಲಾಕ್ ಆಗ್ತಾರಾ? ಎಂಬ ಅನುಮಾನಗಳು ಕಾಡುತ್ತಿವೆ. ಕೆಎಸ್ಐಎಸ್ಎಫ್​ನ ಸಬ್ ಇನ್ಸ್​ಪೆಕ್ಟರ್​ಗಳ ಮೇಲೆ ಸಿಐಡಿ ಕಣ್ಣಿಟ್ಟಿದೆ‌. ಸದ್ಯ ಯಶವಂತಗೌಡನನ್ನು ವಶಕ್ಕೆ‌ ಪಡೆದಿದ್ದ ಸಿಐಡಿ ತಂಡ ಬೆಂಗಳೂರಿಗೆ ಕರೆದುಕೊಂಡು ಹೋಗಿದೆ‌.

ನಾಗನಹಳ್ಳಿ ತರಬೇತಿ ಕೇಂದ್ರದಲ್ಲಿ ಟ್ರೈನಿಂಗ್ ಪಡೆಯುತ್ತಿದ್ದ ನಾಲ್ವರು ಕೆಎಸ್ಐಎಸ್​​ಎಫ್ ಸಬ್ ಇನ್ಸ್​​ಪೆಕ್ಟರ್​ ಸಿವಿಲ್ ಪಿಎಸ್ಐ ಎಕ್ಸಾಮ್​​​ನಲ್ಲಿ ಪಾಸ್ ಆಗಿದ್ದಾರೆ. ನಾಲ್ವರು ಕೂಡ ಸಿಐಡಿ ವಿಚಾರಣೆಗೆ ಹಾಜರಾಗಿ ವಾಪಸ್ ಆಗಿದ್ದರು. ಸದ್ಯ ಕಲಬುರಗಿಯ ನಾಗನಹಳ್ಳಿ ತರಬೇತಿ ಕೇಂದ್ರದಲ್ಲಿ‌ ತರಬೇತಿ ಪಡೆಯುತ್ತಿದ್ದಾರೆ‌. ಸಿಐಡಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿ ವಾಪಸ್ ಆದವರ ಬಗ್ಗೆ ಸಿಐಡಿ ತಂಡ ಮಾಹಿತಿ ಕಲೆ ಹಾಕೋದ್ದಕ್ಕೆ ಮುಂದಾಗಿದೆ.

ಇದನ್ನೂ ಓದಿ: ಅಷ್ಟು ಹಣ ಎಲ್ಲಿಂದ ತರೋಕಾಗುತ್ತೆ?: ಪಿಎಸ್​​ಐ ಮಹಿಳಾ ವಿಭಾಗದಲ್ಲಿ ಮೊದಲ ಸ್ಥಾನ ಪಡೆದ ರಚನಾ ಕುಟುಂಬಸ್ಥರ ಅಳಲು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.