ಕಲಬುರಗಿ: ಕೇವಲ ಹಸಿರು ಶಾಲು ಹೊದ್ದು ಪ್ರಮಾಣ ವಚನ ಸ್ವೀಕರಿಸಿದರೆ ರೈತ ನಾಯಕರಾಗಲು ಸಾಧ್ಯವಿಲ್ಲ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ, ಸಿಎಂ ಯಡಿಯೂರಪ್ಪ ವಿರುದ್ಧ ಫೇಸ್‌ಬುಕ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತೊಗರಿ ಖರೀದಿ ವಿಳಂಬ ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಪೋಸ್ಟ್ ಬರೆದಿರುವ ಪ್ರಿಯಾಂಕ್ ಖರ್ಗೆ, ತೊಗರಿ ಕಟಾವು ಪ್ರಕ್ರಿಯೆ ಮುಗಿದು ಎರಡು ತಿಂಗಳಾದರೂ ಇನ್ನು ತೊಗರಿ ಖರೀದಿ ಪ್ರಕ್ರಿಯೆ ಸರಿಯಾಗಿ ಪ್ರಾರಂಭವಾಗಿಲ್ಲ. 20 ಕ್ವಿಂಟಲ್ ತೂಗರಿ ಖರೀದಿಸುವ ನಿಮ್ಮ ಭರವಸೆ ಸುಳ್ಳಾಗಿದೆ ಎಂದಿದ್ದಾರೆ.
- " class="align-text-top noRightClick twitterSection" data="">
ಕೇವಲ ಹಸಿರು ಶಾಲು ಹೊದ್ದು ಪ್ರಮಾಣ ವಚನ ಸ್ವೀಕರಿಸಿದರೆ ಸಾಲದು, ಸ್ವಲ್ಪ ರೈತರ ಕಡೆ ಕಣ್ಣೆತ್ತಿ ನೋಡಿ, ಆಪರೇಷನ್ ಕಮಲಕ್ಕೆ ತೋರಿಸಿದ ಆಸಕ್ತಿಯನ್ನು ರೈತರಿಗೆ ಕೊಟ್ಟ ಮಾತಿನ ಮೇಲೆ ತೋರಿಸಿಕೊಳ್ಳಿ ಎಂದು ಕಿಡಿಕಾರಿದ್ದಾರೆ.