ETV Bharat / city

ನಾಳೆಯಿಂದ ಶಾಲೆಗಳು ಪುನಾರಂಭ : ಕಲಬುರಗಿಯಲ್ಲಿ ಪೊಲೀಸ್​​​ ಕಟ್ಟೆಚ್ಚರ - ಕಲಬುರಗಿಯಲ್ಲಿ ಶಾಲೆ ಆರಂಭ

ಶಾಲೆಗಳು ನಾಳೆಯಿಂದ ಪುನಾರಂಭವಾಗುತ್ತಿರುವ ಹಿನ್ನೆಲೆ ಜಿಲ್ಲೆಯಾದ್ಯಂತ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ..

police alert in kalaburagi as school will reopen from tomorrow
ಕಲಬುರಗಿಯಲ್ಲಿ ಪೊಲೀಸ್​ ಭದ್ರತೆ
author img

By

Published : Feb 13, 2022, 6:01 PM IST

Updated : Feb 13, 2022, 6:27 PM IST

ಕಲಬುರಗಿ : ಹಿಜಾಬ್ ಹಾಗೂ ಕೇಸರಿ ಶಾಲು ವಿವಾದದಿಂದ ಮೂರು ದಿನ ಬಂದ್ ಮಾಡಲಾಗಿದ್ದ ಶಾಲೆಗಳನ್ನ ನಾಳೆಯಿಂದ ಪುನಾರಂಭವಾಗುತ್ತಿರುವ ಹಿನ್ನೆಲೆ ಜಿಲ್ಲೆಯಾದ್ಯಂತ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.

ಕಲಬುರಗಿಯಲ್ಲಿ ಪೊಲೀಸರಿಂದ ಪಥ ಸಂಚಲನ..

ಜಿಲ್ಲೆಯ ತಾಲೂಕು ಕೇಂದ್ರಗಳಾದ ಆಳಂದ, ಅಫಜಲಪುರ, ಚಿತ್ತಾಪುರ ಹಾಗೂ ವಾಡಿ ಪಟ್ಟಣದಲ್ಲಿ ಪೊಲೀಸರಿಂದ ಪಥ ಸಂಚಲನ ನಡೆಸಲಾಯಿತು. ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಸಂಚರಿಸಿ ಪಥ ಸಂಚಲನ ನಡಸಿದಲ್ಲದೇ, ಆಯಾ ಠಾಣೆಗಳಲ್ಲಿ ಶಾಂತಿ ಸಭೆ ನಡೆಸಿ ಯಾರು ಕೂಡಾ ಶಾಂತಿ ಕದಡುವ ಕೆಲಸ ಮಾಡದೆ ಕಾನೂನು ಪಾಲಿಸುವಂತೆ ಸೂಚನೆ ನೀಡಿದರು.

ನಗರ ಪೊಲೀಸ್​ ಕಮಿಷನರ್ ಆದೇಶ: ಹಿಜಾಬ್ ಹಾಗೂ ಕೇಸರಿ ವಿವಾದ ಹಿನ್ನೆಲೆ ಕಲಬುರಗಿ ನಗರದಲ್ಲಿ ಪ್ರತಿಭಟನೆ, ಹೋರಾಟ ಹಾಗೂ ಧರಣಿಯನ್ನು ನಿಷೇಧಿಸಿ ನಗರ ಪೊಲೀಸ್ ಕಮಿಷನರ್ ವೈ ಎಸ್ ರವಿಕುಮಾರ್ ಆದೇಶಿಸಿದ್ದಾರೆ.

ಇದನ್ನೂ ಓದಿ: ಪಾಕಿಸ್ತಾನ ಮೊದಲು ಅಲ್ಲಿನ ಸಮಸ್ಯೆ ಸರಿಪಡಿಸಿಕೊಳ್ಳಲಿ: ಮೌಲಾನ ಮಹಮದ್ ಷಪಿ

ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ವದಂತಿ, ಪ್ರಚೋದಕಾರಿ ಹೇಳಿಕೆ, ಭಿತ್ತಿ ಚಿತ್ರಗಳನ್ನು ಪ್ರದರ್ಶನ ಮಾಡುವ ಮೂಲಕ ಸಮಾಜದಲ್ಲಿ ಶಾಂತಿ ಕದಡಿದರೆ ಅಂಥವರ ವಿರುದ್ಧ ನಿರ್ದಾಕ್ಷಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಕಮಿಷನರ್ ಎಚ್ಚರಿಸಿದ್ದಾರೆ‌.

Last Updated : Feb 13, 2022, 6:27 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.