ETV Bharat / city

'ಸುಳ್ಳನ್ನು ಸಾವಿರ ಬಾರಿ ಹೇಳಿದ್ರೂ ಅದು ಸುಳ್ಳೇ'.. ವಸತಿ ಸಚಿವ ವಿ. ಸೋಮಣ್ಣ

ಬಿಟ್ ಕಾಯಿನ್ (bitcoin scam) ವಿಚಾರದಲ್ಲಿ ಕಾಂಗ್ರೆಸ್ ನಾಯಕರು ಹಿಟ್ & ರನ್ ಮಾಡುವುದರ ಬದಲಾಗಿ ದಾಖಲೆಗಳು ಇದ್ರೆ ಬಹಿರಂಗ ಪಡಿಸಲಿ ಎಂದು ಸಚಿವ ವಿ. ಸೋಮಣ್ಣ (minister v somanna) ಸವಾಲು ಹಾಕಿದ್ದಾರೆ..

minister v somanna
ಸಚಿವ ವಿ ಸೋಮಣ್ಣ
author img

By

Published : Nov 17, 2021, 3:57 PM IST

ಕಲಬುರಗಿ : ಸುಳ್ಳನ್ನು ಸಾವಿರ ಬಾರಿ ಹೇಳಿದ್ರೂ ಅದು ಸುಳ್ಳೇ ಹೊರತು ಅದನ್ನು ಸತ್ಯ ಮಾಡಲು ಆಗೋದಿಲ್ಲವೆಂಬುದನ್ನು ಕಾಂಗ್ರೆಸ್‌ನವರು ಅರಿತುಕೊಳ್ಳಬೇಕು.

ಬಿಟ್ ಕಾಯಿನ್ (bitcoin scam) ವಿಚಾರದಲ್ಲಿ ಕಾಂಗ್ರೆಸ್ ನಾಯಕರು ಹಿಟ್ & ರನ್ ಮಾಡುವುದರ ಬದಲಾಗಿ ದಾಖಲೆಗಳು ಇದ್ರೆ ಬಹಿರಂಗಗೊಳಿಸಲಿ ಎಂದು ವಸತಿ ಸಚಿವ ವಿ. ಸೋಮಣ್ಣ (minister v somanna) ಸವಾಲು ಹಾಕಿದ್ದಾರೆ.

ಸಚಿವ ವಿ ಸೋಮಣ್ಣ

ಕಲಬುರಗಿಯಲ್ಲಿ(Kalburgi) ಮಾತನಾಡಿದ ಅವರು, ಈಗಾಗಲೇ ಡಾ. ಸುಧಾಕರ್ ಸ್ಪಷ್ಟವಾಗಿ ಕ್ಲ್ಯಾರಿಫೈ ಮಾಡಿದ್ದಾರೆ. ಸಿಎಂ ಬೊಮ್ಮಾಯಿ(cm basavaraja bommai) ಅವರು ಕೂಡ ಕಡ್ಡಿ ಮುರಿದ ಹಾಗೆ ಹೇಳಿದ್ದಾರೆ. ಹೀಗಿದ್ದರೂ, ಸಿದ್ದರಾಮಯ್ಯ ಹಿಟ್ ಆ್ಯಂಡ್​ ರನ್ ಮಾಡ್ತಿದ್ದಾರೆ. ನಿಮಗೆ ಗಂಭೀರತೆ ಇದ್ದರೆ ಹಗರಣದಲ್ಲಿ ಯಾರು ಯಾರು ಇದ್ದಾರೆ ಅಂತಾ ಹೇಳಿ.

ನಿಮ್ಮ ಬಳಿ ದಾಖಲೆ ಇದ್ದರೆ ಬಿಡುಗಡೆ ಮಾಡಿ. ಕಾನೂನಿನ ಚೌಕಟ್ಟಿನಲ್ಲಿ ಏನು ಕ್ರಮ ಕೈಗೊಳ್ಳಬೇಕು ಎಂಬುದನ್ನು ಸಿಎಂ ನಿರ್ಧಾರ ಮಾಡುತ್ತಾರೆ ಎಂದರು. ಇನ್ನೂ ಎರಡು ವರ್ಷ ಅಧಿಕಾರ ಇಲ್ಲದೇ ಇರೋದಕ್ಕೆ ಈ ರೀತಿ ಮೈ ಪರಚಿಕೊಳ್ಳೋಕೆ ಮುಂದಾಗಿದ್ದಾರೆ. 75 ವರ್ಷದ ಅಧಿಕಾರಾವಧಿಯಲ್ಲಿ ಮಜಾ ಮಾಡಿಕೊಂಡು ಅರಾಜಕತೆ ಸೃಷ್ಟಿಸಿದ್ದಾರೆ ಎಂದು ತಿರುಗೇಟು ನೀಡಿದರು.

ಇದನ್ನೂ ಓದಿ: ಸಿದ್ದರಾಮಯ್ಯ ಪತ್ರ ಬರೆಯುವ ಮೊದಲೇ ನಾನು ಬೆಳೆ ಹಾನಿ ಸಮೀಕ್ಷೆಗೆ ಸೂಚನೆ ಕೊಟ್ಟಿದ್ದೆ : ಸಿಎಂ ಬೊಮ್ಮಾಯಿ

ಬಸವರಾಜ ಬೊಮ್ಮಾಯಿ ಅಧಿಕಾರಕ್ಕೆ ಬಂದ‌ ಮೇಲೆ‌ ಫೆಲ್ಯೂರ್​ ಆಗ್ತಾರೆ ಅಂತಾ ಕಾಂಗ್ರೆಸ್‌ನವರು ಅಂದುಕೊಂಡಿದ್ದರು. ಈಗ ನಮ್ಮ ಅಭಿವೃದ್ಧಿ ಕೆಲಸ ಕಾಂಗ್ರೆಸ್​ನವರಿಗೆ ನುಂಗಲಾರದ ತುತ್ತಾಗಿದೆ. ಚುನಾವಣೆ ಕೂಡ ಬೊಮ್ಮಾಯಿ ನಾಯಕತ್ವದಲ್ಲೇ ನಡೆಯಲಿದೆ.

ಸಿದ್ದರಾಮಯ್ಯನವರೇ(siddaramaiah) ನಿಮ್ಮ ರಾಜಕೀಯ ಅನುಭವವನ್ನು ಗಾಳಿಗೆ ತೂರಬೇಡಿ. ನಿಮ್ಮ ಇತಿಹಾಸ ಮರೆಮಾಚೋಕೆ ಹೋಗಬೇಡಿ. ಸುಖಾಸುಮ್ಮನೆ ಹಿಟ್ & ರನ್ ಮಾಡಬೇಡಿ ಅಂತಾ ಸಿದ್ದರಾಮಯ್ಯ ವಿರುದ್ಧ ಸೋಮಣ್ಣ ವಾಗ್ದಾಳಿ ನಡೆಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.