ಕಲಬುರಗಿ: ಶೌಚಾಲಯಕ್ಕೆಂದು ಮನೆಯಿಂದ ಹೊರಗೆ ಬಂದ ವ್ಯಕ್ತಿಯ ಮೇಲೆ ಮರ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ನಗರದ ಹೊರವಲಯದ ಜೈಲ್ ಕ್ವಾಟ್ರಸ್‌ನಲ್ಲಿ ದಾರುಣ ಘಟನೆ ನಡೆದಿದೆ.
ಪತ್ನಿ, ಇಬ್ಬರು ಮಕ್ಕಳೊಂದಿಗೆ ಜೈಲ್ ಕ್ವಾಟ್ರಸ್‌ನಲ್ಲಿ ವಾಸವಿದ್ದ ಗೊವಿಂದ ಚವ್ಹಾಣ (49) ಮೃತ ದುರ್ದೈವಿ. ಈತನ ಪತ್ನಿ ಪಾರಿಬಾಯಿ ಅವರು ಜೈಲಿನ ಡಿ ಗ್ರೂಪ್ ಸಿಬ್ಬಂದಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ನಿನ್ನೆ ರಾತ್ರಿಯಿಡೀ ಬೀಸಿದ ಬಿರುಗಾಳಿಗೆ ಮರದ ರೆಂಬೆಕೊಂಬೆಗಳು ಮುರಿಯುವ ಹಂತಕ್ಕೆ ತಲುಪಿದ್ದವು ಎನ್ನಲಾಗಿತ್ತು. ಇದಾದ ಮರುದಿನ ಪಕ್ಕದ ಮನೆ ಅಂಗಳದಲ್ಲಿದ್ದ ಮರ ಚವ್ಹಾಣ ಅವರ ಮೇಲೆ ಉರುಳಿ ಬಿದ್ದಿದೆ. ತಲೆಗೆ ಬಲವಾದ ಪೆಟ್ಟು ಬಿದ್ದು ತೀವ್ರ ರಕ್ತಸ್ರಾವ ಉಂಟಾಗಿತ್ತು.
ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಈ ಕುರಿತು ಫರತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.