ಕಲಬುರಗಿ: ರಾಜ್ಯ ಸರ್ಕಾರ ನಾಳೆಯಿಂದ ಮಾಲ್ ಮತ್ತು ದೇವಸ್ಥಾನ ಪುನರಾರಂಭಕ್ಕೆ ಅನುಮತಿ ನೀಡಿದ್ದು, ಕಲಬುರಗಿಯಲ್ಲಿ ಮಾಲ್ ಗಳ ಪುನರಾರಂಭಕ್ಕೆ ಭರದಸಿದ್ಧತೆ ನಡೆದಿವೆ.
ಲಾಕ್ ಡೌನ್ ಹಿನ್ನೆಲೆಯಲ್ಲಿ ಕಳೆದ ಎರಡೂವರೆ ತಿಂಗಳಿಂದ ಮುಚ್ಚಲ್ಪಟ್ಟಿದ್ದ ಮಾಲ್ ಗಳು ಆರಂಭಕ್ಕೆ ಸಿದ್ದಗೊಂಡಿವೆ. ನಗರದ ಪ್ರಸಿದ್ಧ ಏಷ್ಯನ್ ಮಾಲ್, ಆರ್ಕಿಡ್ ಮಾಲ್, ಶ್ರದ್ಧಾಮಾಲ್, ಪ್ರಕಾಶ್ ಏಷ್ಯನ್ ಮಾಲ್ ಸೇರಿ ವಿವಿಧ ಮಾಲ್ ಗಳಲ್ಲಿಸಿದ್ಧತೆ ನಡೆಸಲಾಗುತ್ತಿದೆ. ಮಾಲ್ ಗೆ ಆಗಮಿಸಿವ ಗ್ರಾಹಕರಿಗೆ ಪ್ರವೇಶ ದ್ವಾರದಲ್ಲಿಯೇ ಸ್ಯಾನಿಟೈಸರ್, ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆಮಾಡಲಾಗುತ್ತಿದ್ದು, ಸಾಮಾಜಿಕ ಅಂತರ ಕಾಪಾಡಿಕೊಳ್ಳಲೂ ಸರ್ಕಲ್ ಗಳನ್ನು ನಿರ್ಮಿಸಲಾಗಿದೆ. ಸರ್ಕಾರದ ಮಾರ್ಗಸೂಚಿ ಅನ್ವಯ ಮಾಲ್ ಪುನರಾರಂಭಕ್ಕೆ ಕ್ರಮ ಕೈಗೊಳ್ಳಲಾಗಿದೆ.
ಮಾಸ್ಕ್ ಕಡ್ಡಾಯ:
ಮಾಲ್ ಗೆ ಆಗಮಿಸುವ ಗ್ರಾಹಕರು ಕಡ್ಡಾಯವಾಗಿ ಮಾಸ್ಕ್ ಧರಿಸಲೇಬೇಕು. ಮಾಸ್ಕ್ ಇಲ್ಲದೆ ಮಾಲ್ ಒಳಗಡೆ ಪ್ರವೇಶಕ್ಕೆ ಅವಕಾಶ ಇಲ್ಲ. ಇನ್ನೂ ಮಕ್ಕಳು, ವೃದ್ದರು ಬರುವಂತಿಲ್ಲ, ಆರೋಗ್ಯದಲ್ಲಿ ಏರುಪೇರು ಕಂಡುಬಂದಲ್ಲಿ ಅಂತವರಿಗೆ ಮಾಲ್ ಪ್ರವೇಶವಿಲ್ಲ ಎಂದು ಏಷ್ಯನ್ ಮಾಲ್ ವ್ಯವಸ್ಥಾಪಕ ಮಹೇಶ್ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.