ETV Bharat / city

ಲಾರಿ-ಬೈಕ್ ಡಿಕ್ಕಿ: ಕಲಬುರಗಿಯಲ್ಲಿ ಇಬ್ಬರು ಶಿಕ್ಷಕರ ಸಾವು - ಕಲಬುರಗಿಯಲ್ಲಿ ಇಬ್ಬರು ಶಿಕ್ಷಕರು ಸಾವು

ಕಲಬುರಗಿ ತಾಲೂಕಿನ ಕಡಗಂಚಿ ಸಮೀಪದಲ್ಲಿ ಆಳಂದ – ಕಲಬುರಗಿ ರಸ್ತೆಯಲ್ಲಿ ಲಾರಿ – ಬೈಕ್ ನಡುವೆ ಡಿಕ್ಕಿ ಸಂಭವಿಸಿ ಶಿಕ್ಷಕರಿಬ್ಬರು ಮೃತಪಟ್ಟಿದ್ದಾರೆ.

ಸಿದ್ದರಾಮಪ್ಪ ರೇವಪ್ಪಗೋಳ ಹಾಗು  ನಾನಾಗೌಡ ಪಾಟೀಲ

author img

By

Published : Dec 17, 2021, 2:37 PM IST

Updated : Dec 17, 2021, 2:46 PM IST

ಕಲಬುರಗಿ: ಲಾರಿ-ಬೈಕ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಇಬ್ಬರು ಶಿಕ್ಷಕರು ಮೃತಪಟ್ಟಿರುವ ದಾರುಣ ಘಟನೆ ಆಳಂದ- ಕಲಬುರಗಿ ರಸ್ತೆಯ ಕಡಗಂಚಿ ಬಳಿ ನಡೆದಿದೆ.

ಆಳಂದ ತಾಲೂಕಿನ ರುದ್ರವಾಡಿ ಹೆಚ್.ಕೆ.ಇ ಶಿಕ್ಷಣ ಸಂಸ್ಥೆಯ ಮುಖ್ಯ ಶಿಕ್ಷಕ ಸಿದ್ದರಾಮಪ್ಪ ರೇವಪ್ಪಗೋಳ (61) ಹಾಗೂ ಕನ್ನಡ ಶಿಕ್ಷಕ ನಾನಾಗೌಡ ಪಾಟೀಲ (55) ಮೃತ ದುರ್ದೈವಿಗಳು.

ಎಂದಿನಂತೆ ಶಾಲೆ ಮುಗಿಸಿ ಕಲಬುರಗಿಗೆ ಬೈಕ್​​​ನಲ್ಲಿ ತೆರಳುತ್ತಿದ್ದಾಗ, ಕಡಗಂಚಿ ಸಮೀಪದ ಮೌಂಟ್ ಕಾರ್ಮೆಲ್ ಶಾಲೆ ಸಮೀಪ ಎದುರಿಗೆ ಬಂದ ಲಾರಿ ಡಿಕ್ಕಿ ಹೊಡೆದಿದೆ ಎನ್ನಲಾಗ್ತಿದೆ. ಈ ಸಂಬಂಧ ನರೋಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಶಾಲೆಯ ಶೌಚಾಲಯದ ಗೋಡೆ ಕುಸಿದು ಮೂವರು ವಿದ್ಯಾರ್ಥಿಗಳು ಬಲಿ

Last Updated : Dec 17, 2021, 2:46 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.