ಕಲಬುರಗಿ: ಬೇಸಿಗೆಯಲ್ಲಿ ಪಕ್ಷಿಗಳಿಗೆ ಕುಡಿಯುವ ನೀರಿನ ಸಮಸ್ಯೆ ಆಗಬಾರದು ಎಂದು ಪ್ಲಾಸ್ಟಿಕ್ ಬಾಟಲಿಗಳಲ್ಲಿ ನೀರಿಟ್ಟು ಪಕ್ಷಿಗಳಿಗೆ ನೀರುಣಿಸುವುದಕ್ಕೆ ಜಿಲ್ಲೆಯ ಯುವಕ ರಾಹುಲ್ ಮುಂದಾಗಿದ್ದಾರೆ. ಮರ-ಗಿಡಗಳಿಗೆ ಬಾಟಲಿಗಳನ್ನು ಕಟ್ಟಿ ಕುಡಿಯುವ ನೀರು ಒದಗಿಸುತ್ತಿದ್ದಾರೆ.
ರಾಹುಲ್ ಕಳೆದ ಐದು ವರ್ಷಗಳಿಂದ ತನ್ನ ಸ್ನೇಹಿತರ ಜೊತೆಗೂಡಿ ಬೇಸಿಗೆಯಲ್ಲಿ ಕಲಬುರಗಿ ನಗರದ ಕೋರಂಟಿ ಹನುಮಾನ ದೇವಸ್ಥಾನ, ನಾಗನಹಳ್ಳಿ ರಿಂಗ್ ರಸ್ತೆ, ಶಹಬಾದ್ ರಸ್ತೆ, ಹುಮನಬಾದ್ ರಸ್ತೆ ಸೇರಿದಂತೆ ವಿವಿಧೆಡೆ ತೆರಳಿ ಮರ ಗಿಡಗಳಿಗೆ ನೀರಿನ ಬಾಟಲಿಗಳನ್ನು ಕಟ್ಟುತ್ತಾರೆ.
ಇದರ ಜೊತೆಗೆ, ವಸತಿ ಪ್ರದೇಶಗಳಲ್ಲಿ ಇದೇ ರೀತಿ ಬಾಟಲಿಗಳನ್ನು ಕಟ್ಟಿ ಪಕ್ಷಿಗಳಿಗೆ ನೀರುಣಿಸುವಂತೆ ಸ್ಥಳೀಯರಿಗೆ ರಾಹುಲ್ ಮನವಿ ಮಾಡುತ್ತಾರೆ.
ಇದನ್ನೂ ಓದಿ: ಏಕಕಾಲಕ್ಕೆ ಸೂರ್ಯಾಸ್ತ-ಚಂದ್ರೋದಯ ದರ್ಶನ: ಕನ್ಯಾಕುಮಾರಿಯಲ್ಲಿ ನಾಳೆ ವಿಸ್ಮಯ!