ಕಲಬುರಗಿ: ಕೆಲಸ ಅರಸಿ ಜಿಲ್ಲೆಗೆ ಬಂದಿದ್ದ ಅಸ್ಸಾಂ ಮೂಲದ ಜಸ್ಮಿಕಾ ಕಾತುನ್ (30) ಎಂಬ ಮಹಿಳೆಯ ಕೊಲೆ ಪ್ರಕರಣವನ್ನು ಚಿಂಚೋಳಿ ಪೊಲೀಸರು ಭೇದಿಸಿದ್ದಾರೆ. ದುಷ್ಕೃತ್ಯ ಎಸಗಿ ತಲೆಮರೆಸಿಕೊಂಡಿದ್ದ ಬಿಹಾರ ಮೂಲದ ಅಸ್ಲಾಂ ಮಹಮದ್ ಅಲಿಮೋದ್ದಿನ್ (29) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಜಸ್ಮಿಕಾ ದುಡಿಯಲು ಕಲಬುರಗಿಗೆ ಆಗಮಿಸಿದ್ದಳು. ಅಸ್ಲಾಂ ಕೂಡಾ ಜಿಲ್ಲೆಗೆ ಬಂದಿದ್ದ. ಇಬ್ಬರ ಕೆಲಸ ಒಂದೇ ಕಡೆ ಇದ್ದು ಪರಸ್ಪರ ಪರಿಚಯವಾಗಿದೆ. ಕಾಲಕ್ರಮೇಣ ನಡುವೆ ಸಲುಗೆ ಬೆಳೆದು ಅಕ್ರಮ ಸಂಬಂಧಕ್ಕೂ ತಿರುಗಿತ್ತು.
ಈ ನಡುವೆ ಮಧ್ಯೆ ಗಲಾಟೆ ನಡೆದಿದೆ. 2021ರ ಏಪ್ರಿಲ್ 4ರಂದು ಚಿಂಚೋಳಿ ತಾಲ್ಲೂಕಿನ ಪೋಲಕಪಳ್ಳಿಯ ದಿ ಮೆಟ್ರಿಕ್ಸ್ ವಿದ್ಯುತ್ ತಯಾರಿಕಾ ಘಟಕದ ಬಳಿ ಜಸ್ಮಿಕಾಳನ್ನು ಆಕೆಯ ದುಪ್ಪಟ್ಟಾದಿಂದಲೇ ಅಸ್ಲಾಂ ಕುತ್ತಿಗೆಗೆ ಬಿಗಿದು ಕೊಲೆ ಮಾಡಿ ಪರಾರಿಯಾಗಿದ್ದ.
ಇದನ್ನೂ ಓದಿ: ಜಮೀನಿಗೆ ನೀರು ಹರಿಸುವ ವಿಚಾರ: ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ ಸಮುದಾಯ!