ಕಲಬುರಗಿ: ಇಂದು ವಿಶ್ವಾದ್ಯಂತ 7 ಅಂತಾರಾಷ್ಟ್ರೀಯ ಯೋಗ ದಿನ. ಕಲಬುರಗಿಯ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರೊಬ್ಬರು ತಮ್ಮ ಪುತ್ರನೊಂದಿಗೆ ಜಲ ಯೋಗ ಮಾಡುವ ಮೂಲಕ ಯೋಗ ದಿನಾಚರಣೆ ಆಚರಿಸಿದರು.
ಕಲಬುರಗಿ ಹೊರವಲಯದ ನಂದಿಕೂರ ಗ್ರಾಮದ ನಿವಾಸಿ ಪವನ ಕುಮಾರ್ ಒಳಕೇರಿ ಸುಮಾರು 25 ವರ್ಷಗಳಿಂದ ಜಲ ಯೋಗದಲ್ಲಿ ತೊಡಗಿದ್ದಾರೆ. ವಿವಿಧ ಜಲಯೋಗ ಭಂಗಿಗಳನ್ನು ಮಾಡುವ ಇವರು, ಗಂಟೆಗಟ್ಟಲೆ ನೀರಿನಲ್ಲಿ ತೇಲುತ್ತಾರೆ. ಜೊತೆಗೆ ತಮ್ಮ ಪುತ್ರ ರವಿಕಿರಣ್ ಹಾಗೂ ಗ್ರಾಮದ ಹಲವರಿಗೆ ಜಲ ಯೋಗ ಕಲಿಸುತ್ತಿದ್ದಾರೆ.
"ಪ್ರತಿನಿತ್ಯ ಜಲ ಯೋಗ ಮಾಡುವುದರಿಂದ ಆರೋಗ್ಯವಾಗಿರಬಹುದು. ಮಾನಸಿಕ ಹಾಗೂ ದೈಹಿಕವಾಗಿ ಸದೃಢವಾಗಬಹುದು. ಈ ರೀತಿಯ ಯೋಗ ಮಾಡುತ್ತಿರುವುದರಿಂದ ನನಗೆ 54 ವರ್ಷಗಳಾದರೂ ಯಾವುದೇ ಆರೋಗ್ಯ ಸಮಸ್ಯೆ ಉಂಟಾಗಿಲ್ಲ. ಎಲ್ಲರೂ ಯೋಗಾಭ್ಯಾಸ ಮಾಡಿ."
- ಪವನ ಕುಮಾರ್ ಒಳಕೇರಿ, ಜಲಯೋಗ ಪಟು
ಇದನ್ನೂ ಓದಿ: ಮಗನಿಗೆ ದುಬಾರಿ ಕಾರು ಕೊಡಿಸಿಲ್ವಂತೆ ಸೋನು ಸೂದ್: ಗೊಂದಲಕ್ಕೆ ತೆರೆ ಎಳೆದ ನಟ