ETV Bharat / city

ಕೌಟುಂಬಿಕ ಕಲಹ : ಕಟ್ಟಿಗೆಯಿಂದ ಹಲ್ಲೆಗೈದು ಪತ್ನಿಯನ್ನು ಹತ್ಯೆಗೈದ ಪತಿ - ಚಿತ್ತಾಪುರ ತಾಲೂಕಿನ ಅಲ್ಲೂರು ಗ್ರಾಮ

ಕೋಪಗೊಂಡ ಮಲ್ಲಪ್ಪ ಪತ್ನಿಯ ಮೇಲೆ ಬಡಿಗೆಯಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾನೆ. ತಲೆಗೆ ಬಲವಾದ ಪೆಟ್ಟುಬಿದ್ದಿದ್ದರಿಂದ ಭೀಮಾಬಾಯಿ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಸಾವನಪ್ಪಿದ್ದಾಳೆ ಎಂದು ತಿಳಿದು ಬಂದಿದೆ..

Kalburgi
ಕಲಬುರಗಿ
author img

By

Published : Apr 23, 2022, 12:42 PM IST

ಕಲಬುರಗಿ : ಕಟ್ಟಿಗೆಯಿಂದ ಹಲ್ಲೆಗೈದು ಪತಿಯೇ ತನ್ನ ಪತ್ನಿಯನ್ನು ಕೊಲೆ ಮಾಡಿದ ಘಟನೆ ಚಿತ್ತಾಪುರ ತಾಲೂಕಿನ ಅಲ್ಲೂರು (ಬಿ) ಗ್ರಾಮದಲ್ಲಿ ನಡೆದಿದೆ. ಭೀಮಾಬಾಯಿ ಬಾಗೋಡಿ (26) ಕೊಲೆಯಾದ ಮಹಿಳೆ. ಮಲ್ಲಪ್ಪ ಬಾಗೋಡಿ ಕೊಲೆಗೈದ ಪತಿ.

ಕಳೆದ ಹಲವು ವರ್ಷಗಳ ಹಿಂದೆ ಭೀಮಾಬಾಯಿ ಹಾಗೂ ಮಲ್ಲಪ್ಪ ಮದುವೆ ನಡೆದಿತ್ತು. ಮದುವೆಯಾದ ಆರಂಭದಿಂದಲೂ ಇಬ್ಬರ ನಡುವೆ ಆಗಾಗ ಗಲಾಟೆಗಳು ನಡೆಯುತ್ತಿತ್ತಂತೆ. ಕಳೆದ ಕೆಲ ದಿನಗಳ‌ ಹಿಂದೆ ಪತಿ-ಪತ್ನಿ ಜಗಳವಾಡಿ ಭೀಮಾಬಾಯಿ ತವರು ಮನೆಗೆ ಸೇರಿದ್ದಳು.

Kalburgi
ಭೀಮಾಬಾಯಿ ಬಾಗೋಡಿ (ಕೊಲೆಯಾದ ಮಹಿಳೆ)

ಬಳಿಕ ಮಲ್ಲಪ್ಪನ ಕುಟುಂಬಸ್ಥರ ಸಮ್ಮುಖದಲ್ಲಿ ಸಂಧಾನ ಮಾಡಿ ತವರಿನಿಂದ ಪತ್ನಿ ಭೀಮಾಬಾಯಿಯನ್ನು ಕರೆದುಕೊಂಡು ಬರಲಾಗಿತ್ತು. ಆದ್ರೆ, ನಿನ್ನೆ(ಶುಕ್ರವಾರ) ಮತ್ತೆ ಇಬ್ಬರ ನಡುವೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದಿದೆ.

ಕೋಪಗೊಂಡ ಮಲ್ಲಪ್ಪ ಪತ್ನಿಯ ಮೇಲೆ ಬಡಿಗೆಯಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾನೆ. ತಲೆಗೆ ಬಲವಾದ ಪೆಟ್ಟುಬಿದ್ದಿದ್ದರಿಂದ ಭೀಮಾಬಾಯಿ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಸಾವನಪ್ಪಿದ್ದಾಳೆ ಎಂದು ತಿಳಿದು ಬಂದಿದೆ.

ಘಟನೆ ಬಳಿಕ ಪತಿ ಮಲ್ಲಪ್ಪ ಪರಾರಿಯಾಗಿದ್ದಾನೆ. ಈ ಕುರಿತು ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಭೇಟಿ ನೀಡಿ ಪೊಲೀಸರು ಪರಿಶೀಲನೆ ಮಾಡಿದ್ದಾರೆ. ಇನ್ನು ತಲೆ ಮರೆಸಿಕೊಂಡಿರುವ ಆರೋಪಿ ಮಲ್ಲಪ್ಪನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಇದನ್ನೂ ಓದಿ: ಹುಚ್ಚನಂತೆ ಓಡೋಡಿ ಬಂದು ಮಕ್ಕಳೆದುರೇ ತಾಯಿಯನ್ನು ಬರ್ಬರವಾಗಿ ಕೊಂದ ಕೊಲೆಗಾರ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.