ETV Bharat / city

ಮೈಕ್ ತೆರವು ವಿಚಾರ: ನಾಳೆ ಕಲಬುರಗಿಯಲ್ಲಿ ಹನುಮಾನ್​ ಚಾಲೀಸ ಪಠಣ- ಸಿದ್ದಲಿಂಗ ಸ್ವಾಮೀಜಿ

ಮಸೀದಿ ಮೇಲಿನ ಮೈಕ್​ ತೆರವು ಮಾಡಬೇಕು ಎಂದು ನಾಳೆ ಹನುಮಾನ್​ ಚಾಲೀಸ ಪಠಣ ಮಾಡಿ ಪ್ರತಿಭಟನೆ ನಡೆಸಲಾಗುವುದು ಎಂದು ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಹೇಳಿದ್ದಾರೆ.

hanuman chalisa Chanting in temple for Mosque mike ban campaign
ನಾಳೆ ಹನುಮಾನ‌ ಚಾಲಿಸ ಪಠಣ- ಸಿದ್ದಲಿಂಗ ಸ್ವಾಮೀಜಿ
author img

By

Published : May 8, 2022, 8:38 PM IST

ಕಲಬುರಗಿ: ಮಸೀದಿಗಳ‌ ಮೇಲಿನ‌ ಮೈಕ್‌ಗಳ‌ ತೆರವು ಅಭಿಯಾನ ರಾಜ್ಯಾದ್ಯಂತ ತೀವ್ರಗೊಳಿಸಲಾಗುತ್ತಿದೆ. ನಾಳೆ‌ ಮಧ್ಯಾಹ್ನ ದೇವಸ್ಥಾನ ಮುಂದೆ‌ ಹನುಮಾನ್​ ಚಾಲೀಸ ಪಠಿಸುವುದಾಗಿ ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಹೇಳಿದ್ದಾರೆ.

ನಗರದ ಸೂಪರ್ ಮಾರ್ಕೆಟ್ ಹನುಮಾನ್​ ದೇವಸ್ಥಾನದ ಬಳಿ ಮಧ್ಯಾಹ್ನ 12 ಗಂಟೆಯಿಂದ ಹನುಮಾನ್​ ಚಾಲೀಸ ಪಠಿಸುವ ಮೂಲಕ ಪ್ರತಿಭಟನೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಆದರೆ ಹೋರಾಟಕ್ಕೆ ಪೊಲೀಸ್ ಇಲಾಖೆ ಅನುಮತಿ‌ ನೀಡದೆ ಪ್ರತಿಭಟನೆ ಹತ್ತಿಕ್ಕುವ ಕೆಲಸ ಮಾಡುತ್ತಿದೆ. ದ್ವಂಧ್ವ ನೀತಿ ಅನುಸರಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಮಸೀದಿಗಳಿಗೆ ನೋಟಿಸ್​ ನೀಡಲಾಗಿದೆ, ಪ್ರತಿಭಟನೆ ಯಾಕೆ ಮಾಡುತ್ತೀರಾ ಅಂತ ಪೊಲೀಸರು ಕೇಳುತ್ತಿದ್ದಾರೆ. ನೋಟಿಸ್ ಮಾತ್ರ ನೀಡಲಾಗಿದೆ. ಆದ್ರೆ ಧ್ವನಿವರ್ಧಕ ತೆರವು ಮಾಡುತ್ತಿಲ್ಲ ಅಂತ ನಗರ ಪೊಲೀಸ್ ಇಲಾಖೆ ವಿರುದ್ಧ ಕಿಡಿಕಾರಿದ ಸ್ವಾಮೀಜಿ, ನಾಳೆ ಯಾವುದೇ ಕಾರಣಕ್ಕೂ ಹೋರಾಟ ನಿಲ್ಲುವುದಿಲ್ಲ. ಮೈಕ್ ತೆರವು ಆಗುವವರೆಗೆ ಹೋರಾಟ ಮುಂದುವರೆಯಲಿದೆ ಹೇಳಿದ್ದಾರೆ.

ಇದನ್ನೂ ಓದಿ: ಸಿಡಿ ಇಟ್ಕೊಂಡೇ ನಮ್ಮ ಬಿಜೆಪಿಯೊಳಗೆ ಮಂತ್ರಿ ಆಗ್ಯಾರ, ₹50-100 ಕೋಟಿ ಎಲ್ಲಿಂದ ಕೋಡೋದು?: ಯತ್ನಾಳ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.