ಕಲಬುರಗಿ: ಉಸ್ತುವಾರಿ ಸಚಿವರು ಬರುತ್ತಿದ್ದಾರೆ, ಎಲ್ಲಾ ಸಮಸ್ಯೆಗಳನ್ನು ಹೇಳಿಕೊಳ್ಳಬೇಕು ಎಂದಿದ್ದ ಜಿಲ್ಲೆಯ ಜನರಿಗೆ ಉಪಮುಖ್ಯಮಂತ್ರಿ, ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಮತ್ತೆ ನಿರಾಸೆ ಮಾಡಿದ್ದಾರೆ.
ಜಿಲ್ಲೆಯಲ್ಲಿ ಪ್ರವಾಹವುಂಟಾದ ನಂತರ ಕಲಬುರಗಿಯತ್ತ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಸುಳಿದಿಲ್ಲ. ಕಡೆಗೂ ನಾಳೆ ಬರಲು ಮಹೂರ್ತ ಫಿಕ್ಸ್ ಮಾಡಲಾಗಿತ್ತು. ಆದ್ರೆ, ಕೆಡಿಪಿ ಸಭೆ ಸೇರಿ ನಾಳೆಯ ಪ್ರವಾಸವನ್ನು ರದ್ದುಗೊಳಿಸಿ, ಬೆಂಗಳೂರಿಂದಲೇ ಸಚಿವರು ಪ್ರವಾಸ ರದ್ದಾಗಿರುವ ಕುರಿತು ಪತ್ರ ಕಳುಹಿಸಿದ್ದಾರೆ.
ಚುನಾವಣೆ ನೀತಿ ಸಂಹಿತೆ ಉಲ್ಲೇಖಿಸಿದ ಅವರು, ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಸಭೆ ನಡೆಸುವಂತಿಲ್ಲ, ಹೀಗಾಗಿ ಜಿಲ್ಲೆಗೆ ಬರುವುದನ್ನು ರದ್ದು ಮಾಡಿರುವುದಾಗಿ ಜಿಲ್ಲಾಡಳಿತಕ್ಕೆ ಪತ್ರ ರವಾನಿಸಿದ್ದಾರೆ. ಇದರಿಂದಾಗಿ ಸಚಿವರ ಮುಂದೆ ಸಮಸ್ಯೆ ಹೇಳಲು ಕಾಯುತ್ತಿದ್ದ ಜನರಿಗೆ ಮತ್ತೆ ಅಸಮಾಧಾನವುಂಟಾಗಿದೆ.