ಕಲಬುರಗಿ: ನಗರದಲ್ಲಿ ನಡೆಯಲಿರುವ 85ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಗಡಿ ಕನ್ನಡಿಗರ ಸಮಸ್ಯೆಗೆ ವೇದಿಕೆ ಕಲ್ಪಿಸುವಂತೆ ಗಡಿನಾಡು ಕನ್ನಡ ಸಂಘ ಆಗ್ರಹಿಸಿದೆ.
ಈ ಕುರಿತು ನಗರದಲ್ಲಿ ಮಾತನಾಡಿದ ತೆಲಂಗಾಣದ ಕೃಷ್ಣಾ ಮಂಡಲದ ಗಡಿನಾಡು ಕನ್ನಡ ಸಂಘದ ಉಪಾಧ್ಯಕ್ಷ ಅಮರ್ ದೀಕ್ಷಿತ್, ಅತ್ತ ತೆಲಂಗಾಣ ಇತ್ತ ಕರ್ನಾಟಕ ಸರ್ಕಾರಗಳು ಗಡಿ ಕನ್ನಡಿಗರ ಬಗ್ಗೆ ತಾತ್ಸಾರದಿಂದ ನೋಡುತ್ತಿವೆ. ಈ ಹಿನ್ನೆಲೆಯಲ್ಲಿ ಫೆಬ್ರವರಿ 5, 6 ಮತ್ತು 7 ರಂದು ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಗಡಿ ಕನ್ನಡಿಗರಿಗೆ ವೇದಿಕೆ ಕಲ್ಪಿಸಬೇಕು.
ಹೊರ ರಾಜ್ಯದ ಕನ್ನಡಿಗರ ಸಮಸ್ಯೆ ಚರ್ಚೆಗೆ ಅವಕಾಶ ನೀಡಬೇಕು. ಹೊರನಾಡ ಕನ್ನಡಿಗರಿಗೆ ಕರ್ನಾಟಕದ ವಿದ್ಯಾರ್ಥಿಗಳಿಗೆ ನೀಡೋ ಸೌಲಭ್ಯ ಕಲ್ಪಿಸಬೇಕೆಂದು ದೀಕ್ಷಿತ್ ಆಗ್ರಹಿಸಿದ್ದಾರೆ. ಈ ಕುರಿತು ಕಸಾಪ ಅಧ್ಯಕ್ಷ ಮನು ಬಳಿಗಾರ ಅವರ ಗಮನಕ್ಕೆ ತರಲಾಗಿದೆ ಆದರೂ ಸಹ ಅವರು ಸರಿಯಾಗಿ ಸ್ಪಂದಿಸುತ್ತಿಲ್ಲ ಒಂದು ವೇಳೆ ಅವಕಾಶ ನೀಡದೆ ಇದಲ್ಲಿ ಸಮ್ಮೇಳನದಲ್ಲಿ ಕಪ್ಪು ಪಟ್ಟಿ ಧರಿಸಿ ಮೌನವಾಗಿ ಪ್ರತಿಭಟಿಸಲಾಗುವುದು ಎಂದರು.