ETV Bharat / city

ಕಲಬುರಗಿ: ಯುವತಿ ವಿಚಾರಕ್ಕೆ ಸ್ನೇಹಿತನ ಕೊಲೆ, ನಾಲ್ವರ ಬಂಧನ - ಎಂಎಸ್​ಕೆ ಮಿಲ್​ ಬಡಾವಣೆಯಲ್ಲಿ ಯುವಕನ ಕೊಲೆ

ಕೊಲೆಯಾದ ಸೋಹೆಲ್ ಮತ್ತು ಬಂಧಿತ ಆರೋಪಿಗಳ ಪೈಕಿ ಒಬ್ಬನಾದ ಮುಜಾಮಿಲ್‌ ಇಬ್ಬರೂ ಸ್ನೇಹಿತರಾಗಿದ್ದರು. ಇಬ್ಬರ ನಡುವೆ ಹಣಕಾಸಿನ ವ್ಯವಹಾರ ಕೂಡಾ ನಡೆದಿತ್ತು.‌ ಈ ಮಧ್ಯೆ ಮುಜಾಮಿಲ್ ಪ್ರೀತಿಸುತ್ತಿದ್ದ ಯುವತಿಯ ಮೇಲೆ ಸೋಹೆಲ್ ಕಣ್ಣು ಹಾಕಿದ್ದ. ಇದರಿಂದ ಕೊಲೆ ನಡೆದಿತ್ತು ಎಂಬ ಸಂಗತಿ ಪೊಲೀಸರ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.

ತನ್ನ ಹುಡಗಿಯ ಮೇಲೆ ಕಣ್ಣು ಹಾಕಿ ಸ್ನೇಹಿತನ ಕೊಲೆ: ಪ್ರಮುಖ ಆರೋಪಿ ಸೇರಿ ನಾಲ್ವರ ಬಂಧನ

author img

By

Published : Apr 5, 2022, 12:28 PM IST

ಕಲಬುರಗಿ: ಕಳೆದ ಐದು ದಿನಗಳ ಹಿಂದೆ ನಗರದ ಎಂಎಸ್​ಕೆ ಮಿಲ್​ ಬಡಾವಣೆಯಲ್ಲಿ ನಡೆದ ಯುವಕ ಸೋಹೆಲ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಹಣಕಾಸಿನ ವ್ಯವಹಾರ ಮತ್ತು ಯುವತಿ ವಿಚಾರವಾಗಿ ಈ ಕೊಲೆ ನಡೆದಿರುವುದು ಪೊಲೀಸರ ವಿಚಾರಣೆ ವೇಳೆ ಬಯಲಿಗೆ ಬಂದಿದೆ.

ಏ.1ರಂದು ಹೋಟೆಲ್​ನಲ್ಲಿ ಕುಳಿದ್ದ ಸೋಹೆಲ್​ ದೇಹಕ್ಕೆ ಮಾರಕಾಸ್ತ್ರಗಳಿಂದ ಚುಚ್ಚಿ ಕೊಲೆ ಮಾಡಲಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ನಡೆಸಿ ಮುಜಾಮಿಲ್ ಕುರೇಶಿ, ಜುನೇದ್ ಅಲಿ, ಮೊಹಮ್ಮದ್ ಆಯನ್ ಜಡ್ದಿ, ಅಬ್ರಾಬ್ ಹುಸೇನ್ ಎಂಬುವವರನ್ನು ಬಂಧಿಸಿದ್ದಾರೆ.

ಒಂದೇ ಹುಡುಗಿಯ ಮೇಲೆ ಇಬ್ಬರು ಮನಸ್ಸು: ಕೊಲೆಯಾದ ಸೋಹೆಲ್ ಮತ್ತು ಬಂಧಿತ ಆರೋಪಿಗಳ ಪೈಕಿ ಒಬ್ಬನಾದ ಮುಜಾಮಿಲ್‌ ಇಬ್ಬರೂ ಸ್ನೇಹಿತರಾಗಿದ್ದರು. ಇಬ್ಬರ ನಡುವೆ ಹಣಕಾಸಿನ ವ್ಯವಹಾರ ಕೂಡಾ ನಡೆದಿತ್ತು.‌ ಈ ನಡುವೆ ಮುಜಾಮಿಲ್ ಪ್ರೀತಿ ಮಾಡುತ್ತಿದ್ದ ಯುವತಿಯ ಮೇಲೆ ಸೋಹೆಲ್ ಕಣ್ಣು ಹಾಕಿದ್ದ ಎಂದು ತಿಳಿದು ಬಂದಿದೆ.

ಅಲ್ಲದೇ, ಅದೇ ಯುವತಿಯನ್ನು ಸೋಹೆಲ್ ಪ್ರೀತಿ ಮಾಡತೊಡಗಿದ್ದನಂತೆ. ಇದರಿಂದಾಗಿ ಇಬ್ಬರ ನಡುವೆ ಗಲಾಟೆ ನಡೆದಿದೆ. ಈ ಗಲಾಟೆ ವಿಕೋಪಕ್ಕೆ ತಿರುಗಿ ಮುಜಾಮಿಲ್ ತನ್ನ ಸಹಚರರೊಂದಿಗೆ ಸೇರಿ ಸೋಹೆಲ್ ಮೇಲೆ ದಾಳಿ ಮಾಡಿದ್ದಾನೆ. ಹೋಟೆಲ್​ನಲ್ಲಿ ಬಿರಿಯಾನಿ ತಿನ್ನುತ್ತಾ ಕುಳಿತಾಗ ಮಾರಕಾಸ್ತ್ರಗಳಿಂದ ಚುಚ್ಚಿ ಕೊಲೆಗೈದು ಆರೋಪಿಗಳು ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಆರ್‌.ಜಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಕ್ರಿಕೆಟ್ ಬೆಟ್ಟಿಂಗ್ ಹಣದ ವಿಚಾರವಾಗಿ ಗಲಾಟೆ: ಡ್ರ್ಯಾಗರ್​​ನಿಂದ ಇರಿದು ಯುವಕನ ಹತ್ಯೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.