ಕಲಬುರಗಿ: ಮಠದ ಗದ್ದುಗೆಯಿಂದ ಮಧ್ಯರಾತ್ರಿ ದಿವ್ಯಜ್ಯೋತಿ ಆಕಾರದ ಬೆಳಕೊಂದು ಮೇಲೆ ಹೋಗುವ ಮೂಲಕ ಭಕ್ತರನ್ನು ಆಶ್ಚರ್ಯ ಚಕಿತಗೊಳಿಸಿರುವ ಘಟನೆ ಆಳಂದ ತಾಲೂಕಿನ ಭೂಸನೂರು ಒಪ್ಪತ್ತೇಶ್ವರ ವಿರಕ್ತಮಠದಲ್ಲಿ ನಡೆದಿದೆ.
ಮಾರ್ಚ್ 1ರಂದು ಮಧ್ಯರಾತ್ರಿ 12.35ಕ್ಕೆ ಉಂಡೆಯಾಕಾರದ ಬೆಳಕು ಮೇಲೆ ಹೋಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದನ್ನು ಕಂಡಿರುವ ಮಠದ ನಿಜಗುಣಾನಂದ ಸ್ವಾಮೀಜಿ ಬೆಳಗ್ಗೆ ತಮಗಾಗಿರುವ ಅನುಭವವನ್ನು ಗ್ರಾಮಸ್ಥರಿಗೆ ತಿಳಿಸಿದ್ದಾರೆ. ಆಗ ಮಠದಲ್ಲಿರುವ ಸಿಸಿಟಿವಿ ಪರಿಶೀಲನೆಗೆ ಒಳಪಡಿಸಿದಾಗ ಬೆಳಕು ಮೇಲೆ ಹೋಗಿರುವುದು ಗೋಚರಿಸಿದೆ. ಸಿಸಿಟಿವಿಯಲ್ಲಿ ಸೆರೆಯಾಗಿರುವ ದೃಶ್ಯ ಕಂಡು ಗ್ರಾಮಸ್ಥರು ಬೆರಗಾಗಿದ್ದಾರೆ.
ಹಿರಿಯ ಸ್ವಾಮೀಜಿಗಳ ಗದ್ದುಗೆಯಿಂದ ಇಂತಹದೊಂದು ದಿವ್ಯಜ್ಯೋತಿ ಹೋಗಿದ್ದು ಶ್ರೀಗಳ ಪವಾಡ ಎಂದು ಗ್ರಾಮಸ್ಥರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಆದ್ರೆ ಬೆಳಕು ಹೇಗೆ ಹೋಯಿತು ಅನ್ನೋದು ಮಾತ್ರ ನಿಗೂಢವಾಗಿದೆ.