ETV Bharat / city

ಶೀಘ್ರದಲ್ಲಿ ಸಾರಿಗೆ ನೌಕರರ ವೇತನ ಪರಿಷ್ಕರಣೆ : ಬಿ ಶ್ರೀರಾಮುಲು ಭರವಸೆ - Wage Revision of Transport Crew

ಸಾರಿಗೆ ನೌಕಕರ ವೇತನ ಪರಿಷ್ಕರಣೆ ಮತ್ತು ಹಳದಿ ಬೋರ್ಡ್​ವುಳ್ಳ ಟ್ಯಾಕ್ಸಿ ಚಾಲಕರ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲು ಮುಖ್ಯಮಂತ್ರಿಗಳ ಒಪ್ಪಿಗೆ ಸೂಚಿಸಿದ್ದಾರೆ ಎಂದು ಬಿ ಶ್ರೀರಾಮುಲು ತಿಳಿಸಿದರು.

1500 new bus purchase
ಬಿ ಶ್ರೀರಾಮುಲು
author img

By

Published : Jul 19, 2022, 10:31 PM IST

ಕಲಬುರಗಿ: ರಾಜ್ಯದಲ್ಲಿನ ಸಾರಿಗೆ ವ್ಯವಸ್ಥೆಯನ್ನು ಮತ್ತಷು ಉತ್ತಮಪಡಿಸಲು ಬಿ.ಎಸ್-6 ಮಾದರಿಯ 665 ಮತ್ತು 900 ಎಲೆಕ್ಟ್ರಿಕ್ ಬಸ್ ಸೇರಿ 1500ಕ್ಕೂ ಹೆಚ್ಚು ಬಸ್‍ಗಳನ್ನು ಖರೀದಿ ಮಾಡಲಾಗುತ್ತಿದೆ. ಕಳೆದ 9-10 ವರ್ಷದಿಂದ ಬಸ್‍ಗಳು ಓಡುತ್ತಿದ್ದು ಹಳೆಯದಾಗಿವೆ. ಹೀಗಾಗಿ ಹೊಸದಾಗಿ ಬಸ್ ಖರೀದಿಗೆ ನಿರ್ಧರಿಸಿದೆ ಎಂದು ಸಾರಿಗೆ ಮತ್ತು ಪರಿಶಿಷ್ಡ ಪಂಗಡ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಹೇಳಿದರು.

ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಸಾರಿಗೆ ಇಲಾಖೆಯಲ್ಲಿ 635 ರಲ್ಲಿ 165 ಜನ ಮಾತ್ರ ಕಾರ್ಯನಿರ್ವಹಿಸುತ್ತಿದ್ದು, ಖಾಲಿ ಹುದ್ದೆಗಳ ಭರ್ತಿಗೆ ಕ್ರಮ ವಹಿಸಲಾಗುತ್ತಿದೆ. 8,500 ಕೋಟಿ ರೂ. ರಾಜಸ್ವ ಸಂಗ್ರಹ ಗುರಿ ಹೊಂದಲಾಗಿದೆ. ಇದರ ಮಧ್ಯೆ ಆರ್.ಟಿ.ಒ. ಕಚೇರಿಯಲ್ಲಿ ಕಲಿಕಾ ಪರವಾನಗಿ, ನವೀಕರಣ ಹೀಗೆ 30 ಸೇವೆಗಳನ್ನು ಆನ್‍ಲೈನ್ ಮೂಲಕ ವ್ಯವಹರಿಸಲಾಗುತ್ತಿದೆ.

ಸಾರ್ವಜನಿಕರು ಮನೆಯಲ್ಲಿ ಕುಳಿತು ಆನ್‍ಲೈನ್ ಮೂಲಕ ಸೇವೆ ಪಡೆಯಬಹುದಾಗಿದೆ. ಇಂತಹ ಸುಧಾರಣಾ ಕ್ರಮ ತಂದಿರುವುದಕ್ಕೆ ತಮಗೆ ತೃಪ್ತಿ ಇದೆ ಎಂದು ಸಚಿವರು ಹೇಳಿದರು.

ರಾಜ್ಯದಲ್ಲಿ 1,500ಕ್ಕೂ ಹೆಚ್ಚು ಬಸ್ ಖರೀದಿಗೆ ನಿರ್ಧಾರ

ಸಾರಿಗೆ ನೌಕಕರ ವೇತನ ಪರಿಷ್ಕರಣೆ ಕುರಿತಂತೆ ಮಾತನಾಡಿದ ಸಚಿವರು, ನೌಕರರ ಬಹುದಿನಗಳ ಬೇಡಿಕೆ ಇದಾಗಿದೆ. ಮುಖ್ಯಮಂತ್ರಿಗಳ ಜೊತೆ ಮಾತನಾಡಿದ್ದು, ಅವರು ಪರಿಷ್ಕರಣೆ ಮಾಡುವುದಾಗಿ ಭರವಸೆ ನೀಡಿದ್ದಾರೆ. ಹಳದಿ ಬೋರ್ಡ್​ವುಳ್ಳ ಟ್ಯಾಕ್ಸಿ ಚಾಲಕರ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲು ಮುಖ್ಯಮಂತ್ರಿಗಳ ಒಪ್ಪಿಗೆ ಸೂಚಿಸಿದ್ದಾರೆ ಎಂದರು.

ಇದನ್ನೂ ಓದಿ : ಈ ಬಾರಿ ಅದ್ಧೂರಿ ದಸರಾ ಆಚರಣೆಗೆ ತೀರ್ಮಾನ: ಉದ್ಘಾಟಕರ ಆಯ್ಕೆ ಸಿಎಂ ಹೆಗಲಿಗೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.