ETV Bharat / city

ಜೈಲಿನಲ್ಲಿ ಮೂರು ವರ್ಷದ ಮಗು ಸಾವು : ಲಾಕ್‌ಅಪ್​ ಡೆತ್​ ಆರೋಪ

ಕುಟುಂಬದ ಎಲ್ಲಾ ಹಿರಿಯರ ಮೇಲೆ ದೂರು ದಾಖಲಾಗಿದ್ದರಿಂದ 3 ವರ್ಷದ ಮಗುವನ್ನು ಸೇರಿಸಿ 10 ಜನರನ್ನು ಪೊಲೀಸರು ಬಂಧಿಸಿದ್ದರು. ಠಾಣೆಯಲ್ಲಿ ಲಾಠಿಯಿಂದ ಮಹಿಳೆಗೆ ಹೊಡೆಯುವಾಗ ಮಗುವಿಗೆ ಪೆಟ್ಟಾಗಿತ್ತು. ಅದಾದ ನಂತರ ಮಗು ಮತ್ತು ತಾಯಿ ಸೇರಿ ಉಳಿದವರನ್ನು ಕೇಂದ್ರ ಕಾರಾಗೃಹಕ್ಕೆ ಕಳುಹಿಸಿಕೊಡಲಾಗಿತ್ತು..

death-of-a-three-year-old-child-at-kalaburagi-police-station
ಮಗು ಸಾವು
author img

By

Published : Jan 2, 2021, 5:34 PM IST

ಕಲಬುರಗಿ : ಗ್ರಾಪಂ ಚುನಾವಣೆ ಫಲಿತಾಂಶದ ನಂತರ ನಡೆದ ಘರ್ಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ವರ್ಷದ ಮಗುವೊಂದು ಜೈಲಿನಲ್ಲಿ ಸಾವನ್ನಪ್ಪಿರೋ ಘಟನೆ ಕಲಬುರಗಿ ಕೇಂದ್ರ ‌ಕಾರಾಗೃದಲ್ಲಿ ನಡೆದಿದೆ.

ಭಾರತಿ (3) ಸಾವನ್ನಪ್ಪಿದ ಬಾಲಕಿ. ಜೇವರ್ಗಿ ತಾಲೂಕಿನ ಜೈನಾಪುರದಲ್ಲಿ ಗ್ರಾಪಂ ಫಲಿತಾಂಶದ ನಂತರ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಒಂದೇ ಕುಟುಂಬದ ಏಳು ಜನರ ಮೇಲೆ ದೂರು ದಾಖಲಿಸಲಾಗಿತ್ತು.

ಆದ್ರೆ, ಪೊಲೀಸರು 3 ಮಕ್ಕಳನ್ನೂ ಸೇರಿ 7 ಜನರನ್ನು ಬಂಧಿಸಿದ್ದಾರೆ. ಠಾಣೆಯಲ್ಲಿ ಮಹಿಳೆಯನ್ನು ಥಳಿಸುವ ವೇಳೆ ಮಗುವಿಗೆ ಪೆಟ್ಟಾಗಿದೆ, ಅದರಿಂದಲೇ ಮಗು ಸಾವನ್ನಪ್ಪಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಜೈಲಿನಲ್ಲಿ ಮೂರು ವರ್ಷದ ಮಗು ಸಾವು

ಘಟನೆ ವಿವರ : ಗ್ರಾಪಂ ಚುನಾವಣಾ ಫಲಿತಾಂಶದ ನಂತರ ಜೈನಾಪುರದ ಗ್ರಾಮದಲ್ಲಿ ಗೆದ್ದ ಅಭ್ಯರ್ಥಿಗಳಿಂದ ಸೋತ ಅಭ್ಯರ್ಥಿ ಕಡೆಯವರ ಮೇಲೆ ಹಲ್ಲೆ ನಡೆದಿತ್ತು. ಸಂತೋಷ ಎಂಬಾತನ ಕುಟುಂಬಸ್ಥರ ಮೇಲೆ ಗೆದ್ದ ಅಭ್ಯರ್ಥಿ ರಾಜು ಸಾಯಬಣ್ಣಾ ಅವರ ಬೆಂಬಲಿಗರಿಂದ ಮಾರಣಾಂತಿಕ ಹಲ್ಲೆ ನಡೆದಿದೆ. ಹಲ್ಲೆ ನಡೆಸಿದ್ದಲ್ಲದೆ ದೂರನ್ನು ಸಹ ನೀಡಿದ್ದರು. ಆದ್ರೆ, ಸಂತೋಷ್​ ಕುಟುಂಬಸ್ಥರು ನೀಡಿದ ದೂರನ್ನು ಪೊಲೀಸರು ಸ್ವೀಕರಿಸಿರಲಿಲ್ಲ.

ಕುಟುಂಬದ ಎಲ್ಲಾ ಹಿರಿಯರ ಮೇಲೆ ದೂರು ದಾಖಲಾಗಿದ್ದರಿಂದ 3 ವರ್ಷದ ಮಗುವನ್ನು ಸೇರಿಸಿ 10 ಜನರನ್ನು ಪೊಲೀಸರು ಬಂಧಿಸಿದ್ದರು. ಠಾಣೆಯಲ್ಲಿ ಲಾಠಿಯಿಂದ ಮಹಿಳೆಗೆ ಹೊಡೆಯುವಾಗ ಮಗುವಿಗೆ ಪೆಟ್ಟಾಗಿತ್ತು. ಅದಾದ ನಂತರ ಮಗು ಮತ್ತು ತಾಯಿ ಸೇರಿ ಉಳಿದವರನ್ನು ಕೇಂದ್ರ ಕಾರಾಗೃಹಕ್ಕೆ ಕಳುಹಿಸಿಕೊಡಲಾಗಿತ್ತು. ಕೇಂದ್ರ ಕಾರಾಗೃಹಕ್ಕೆ ಬಂದ ನಂತರ ಮಗು ಸಾವನ್ನಪ್ಪಿದ್ದು, ನಾಮಕಾವಸ್ತೆ ಆಸ್ಪತ್ರೆಗೆ ಕರೆತರಲಾಗಿದೆ ಎಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ.

ಓದಿ-ಕಲಬುರಗಿಯಲ್ಲಿ ಇಂದು ಕೊರೊನಾ ವ್ಯಾಕ್ಸಿನ್ ಡ್ರೈ ರನ್

ಪೊಲೀಸರ ಯಡವಟ್ಟು : ಸದ್ಯ ಘಟನೆಯಲ್ಲಿ ಪೊಲೀಸರ ತಪ್ಪು ಎದ್ದು ಕಾಣುತ್ತಿದೆ. ಏಳು ಜನ ದೊಡ್ಡವರ ಜೊತೆ ಪೊಲೀಸರು ಮೂರು ಜನ ಮಕ್ಕಳನ್ನು ಬಂಧಿಸಿರೋದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಸದ್ಯ ಮೂರು ವರ್ಷದ ಮಗು ಸಾವನ್ನಪ್ಪಿದ ಘಟನೆಯ ನಂತರ ಒಂದು ವರ್ಷದ ಮಗುವನ್ನು ಜೈಲಿನಿಂದ ಹೊರಗೆ ಕಳುಹಿಸಿ ಸಂಬಂಧಿಕರ ಸುಪರ್ದಿಗೆ ನೀಡಲಾಗಿದೆ.

ಆದ್ರೆ, ನಾಲ್ಕು ವರ್ಷದ ಮತ್ತೊಂದು ಮಗು ಜೈಲಿನಲ್ಲಿಯೇ ಇದ್ದು, ಅದಕ್ಕೇನಾಗುತ್ತದೋ ಏನೋ ಎಂಬ ಆತಂಕ ಸಂಬಂಧಿಕರದಾಗಿದೆ. ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳದಲ್ಲಿ ಏನೂ ಅರಿಯದ ಪುಟ್ಟ ಕಂದಮ್ಮ ಸಾವನಪ್ಪಿದ್ದು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಕುಟುಂಬಸ್ಥರು ಆಗ್ರಹಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.