ಕಲಬುರಗಿ : 30 ಪರ್ಸೆಂಟ್ ಕಮಿಷನ್ ಆರೋಪ ಮಾಡಿದ ದಿಂಗಾಲೇಶ್ವರ ಶ್ರೀಗಳ ಮೇಲೆ ಪೊಲೀಸರು ಧಮ್ಕಿ ಹಾಕಿರುವ ಆರೋಪ ಸತ್ಯಕ್ಕೆ ದೂರವಾದದ್ದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಕಲಬುರಗಿಯಲ್ಲಿ ಮಾತನಾಡಿದ ಸಿಎಂ, ಶ್ರೀಗಳ ಮೇಲೆ ನಮಗೂ ಅಪಾರ ಗೌರವವಿದೆ. ಒಂದು ವೇಳೆ ಅವರಿಗೆ ಧಮ್ಕಿ ಹಾಕಿದ್ದರೆ ಅಂತಹ ಪೊಲೀಸರ ವಿರುದ್ಧ ದೂರು ಕೊಡಲಿ. ನಾವು ಉನ್ನತ ತನಿಖೆ ಮಾಡಿಸುತ್ತೇವೆ ಎಂದು ಭರವಸೆ ನೀಡಿದರು.
ಧ್ವನಿವರ್ಧಕ ತೆರವು ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಿಎಂ, ಮಂದಿರ, ಮಸೀದಿಗಳಿಗೆ ನೋಟಿಸ್ ನೀಡಲಾಗಿದೆ. ಹೈಕೋರ್ಟ್ ಆದೇಶ ಪಾಲನೆ ಮಾಡಲು ತಿಳಿಸಲಾಗಿದೆ. ಕೆಲ ಮಂದಿರ, ಮಜೀದಿಗಳಿಗೆ ವಾರ್ನಿಂಗ್ ನೀಡಲಾಗಿದೆ. ಕೆಲವರ ಮೇಲೆ ಕೇಸ್ ಕೂಡ ಹಾಕಲಾಗಿದೆ.
ಪ್ರತಿ ಪೊಲೀಸ್ ಠಾಣೆಗೆ ಮೈಕ್ಗಳ ನಿಯಂತ್ರಣ ಮಾಡಲು ಜವಾಬ್ದಾರಿ ನೀಡಲು ಸೂಚನೆ ನೀಡಿದ್ದೇನೆ. ಘರ್ಷಣೆಯಾಗದಂತೆ ನೋಡಿಕೊಳ್ಳಿ, ಕಾನೂನು ಉಲ್ಲಂಘನೆ ಯಾದಾಗ ಕ್ರಮಕೈಗೊಳ್ಳಲು ಸೂಚನೆ ನೀಡಿದ್ದೇನೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಇದನ್ನೂ ಓದಿ: 'ಕೌಶಲ್ಯ ರಥ'ಕ್ಕೆ ಸಿಎಂ ಬೊಮ್ಮಾಯಿ ಚಾಲನೆ: 2.5 ಲಕ್ಷ ಯುವ ಜನತೆಗೆ ತರಬೇತಿ ನೀಡುವ ಗುರಿ