ETV Bharat / city

ಸುಬ್ರಮಣಿಯನ್ ಸ್ವಾಮಿ ಇಂಡಿಪೆಂಡೆಂಟ್ ಪೊಲಿಟಿಷಿಯನ್‌ ಅಂತಾ ಹೇಳಿದ್ದೆ ಅಷ್ಟೇ: ಸಿಎಂ - CM Basavaraj Bommai

'ನಾನು ಸುಬ್ರಮಣಿಯನ್ ಸ್ವಾಮಿ​​ ಅವರ ಬಗ್ಗೆ ಏನೂ ಹೇಳಿಲ್ಲ. ಅವರು ಇಂಡಿಪೆಂಡೆಂಟ್ ಪೊಲಿಟಿಷಿಯನ್‌ ಅಂತಾ ಹೇಳಿದ್ದೇನೆ ಅಷ್ಟೆ' ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸ್ಪಷ್ಟನೆ ಕೊಟ್ಟರು.

CM Basavaraj Bommai
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ
author img

By

Published : Sep 17, 2021, 4:27 PM IST

Updated : Sep 17, 2021, 5:49 PM IST

ಕಲಬುರಗಿ: 'ಬೂಟು ನೆಕ್ಕಿ ನಾನು ಆರು ಬಾರಿ ಎಂಪಿ ಆಗಿಲ್ಲ' ಎಂಬ ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಅವರ ಟ್ವೀಟ್​​ ವಿಚಾರವಾಗಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಈ ಹಿಂದೆ ನೀಡಿದ್ದ ಹೇಳಿಕೆ ಸಂಬಂಧ ಇಂದು ಸ್ಪಷ್ಟನೆ ಕೊಟ್ಟರು.

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಪ್ರತಿಕ್ರಿಯೆ

ಕಲಬುರಗಿಯಲ್ಲಿ ಮಾತನಾಡಿದ ಅವರು, 'ನಾನು ಸುಬ್ರಮಣಿಯನ್​ ಸ್ವಾಮಿ​ ಅವರ ಬಗ್ಗೆ ಏನೂ ಹೇಳಿಲ್ಲ. ಅವರು ಇಂಡಿಪೆಂಡೆಂಟ್ ಪೊಲಿಟಿಷಿಯನ್‌ ಅಂತಾ ಹೇಳಿದ್ದೇನೆ ಅಷ್ಟೆ. ಆದ್ರೆ ಅವರು ಹಾಗೆ ಟ್ವೀಟ್ ಮಾಡಿದ್ದು ಯಾಕೆ ಗೊತ್ತಿಲ್ಲ. ಅವರು ಟ್ವೀಟ್ ಮಾಡಿರುವುದಕ್ಕೆ ನಾನು ಉತ್ತರ ನೀಡಲ್ಲ' ಎಂದರು.

ಅನಧಿಕೃತ ದೇವಾಲಯ ತೆರವು ವಿಚಾರ:

ಅನಧಿಕೃತ ದೇವಸ್ಥಾನ ತೆರವು ವಿಚಾರವಾಗಿ ಪ್ರತಿಕ್ರಿಯಿಸುತ್ತಾ, 'ಈ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ. ಸ್ಪಷ್ಟ ನಿರ್ದೇಶನ ನೀಡುವವರೆಗೆ ಯಾರೂ ಕೂಡ ಅವಸರದಲ್ಲಿ ದೇವಾಲಯ ತೆರವು ಮತ್ತು ಧಕ್ಕೆ ಮಾಡಬಾರದು ಎಂದು ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ಕೊಟ್ಟಿದ್ದೇನೆ. ನಮ್ಮ ಧರ್ಮದ ದೇವಾಲಯಗಳನ್ನು ರಕ್ಷಣೆ ಮಾಡಿಕೊಳ್ಳುತ್ತೇವೆ. ಈ ವಿಚಾರದ ಬಗ್ಗೆ ಗಂಭೀರ ಚಿಂತನೆ ಮಾಡುತ್ತಿದ್ದೇವೆ. ಕೂಡಲೇ ಈ ಬಗ್ಗೆ ಪರಿಹಾರ ಕಂಡು ಕೊಳ್ಳುತ್ತೇವೆ. ಜತೆಗೆ ದೇವಸ್ಥಾನಗಳ ತೆರವು ವಿಚಾರವಾಗಿ ಮೈಸೂರು ಜಿಲ್ಲಾಧಿಕಾರಿ ಹಾಗು ತಹಶೀಲ್ದಾರ್​​ಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ' ಎಂದರು.

Last Updated : Sep 17, 2021, 5:49 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.