ಕಲಬುರಗಿ : ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದ ತನಿಖೆಯನ್ನು ಸಿಐಡಿ ಮತ್ತಷ್ಟು ಚುರುಕುಗೊಳಿಸಿದೆ. ಪಿಎಸ್ಐ ಪರೀಕ್ಷೆ ಬರೆದ 50 ಅಭ್ಯರ್ಥಿಗಳಿಗೆ ವಿಚಾರಣೆಗೆ ಹಾಜರಾಗುವಂತೆ ಸಿಐಡಿ ನೋಟಿಸ್ ಜಾರಿ ಮಾಡಿದೆ.
ಓಎಂಆರ್ ಶೀಟ್ನಲ್ಲಿ ಕಡಿಮೆ ಅಂಕದ ಉತ್ತರ ಬರೆದರೂ ಕೂಡ ನಂತರ ಅಕ್ರಮದ ಮೂಲಕ ಸರಿಯಾದ ಉತ್ತರಗಳನ್ನು ತುಂಬಿ ಹೆಚ್ಚಿನ ಅಂಕ ಪಡೆಯುವ ಮೂಲಕ ಪಿಎಸ್ಐ ಹುದ್ದೆಗೆ ನೇಮಕವಾಗಿರುವುದು ಸಿಐಡಿ ತನಿಖೆಯಿಂದ ಬಯಲಾದ ಹಿನ್ನೆಲೆ ಪರೀಕ್ಷೆ ಬರೆದ ಇನ್ನೂ 50 ಅಭ್ಯರ್ಥಿಗಳನ್ನು ಹೆಚ್ಚಿನ ವಿಚಾರಣೆ ನಡೆಸಲು ಸಿಐಡಿ ಮುಂದಾಗಿದೆ. ಈ ಮೂಲಕ ಅಕ್ರಮದಲ್ಲಿ ಪಾಲ್ಗೊಂಡ ಮತ್ತಷ್ಟು ಅಭ್ಯರ್ಥಿಗಳ ಪತ್ತೆ ಕಾರ್ಯಕ್ಕೆ ಮುಂದಾಗಿದೆ.
ಇದನ್ನೂ ಓದಿ: ಬಿಬಿಎಂಪಿ ಕಸದ ಲಾರಿಗಳಿಂದ ಸರಣಿ ಅಪಘಾತ : ಕಡ್ಡಾಯ ನಿಯಮಗಳನ್ನು ಜಾರಿಗೆ ತಂದ ಪಾಲಿಕೆ
ನಾಳೆ 10 ಗಂಟೆಗೆ ಸಿಐಡಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ 50 ಮಂದಿ ಅಭ್ಯರ್ಥಿಗಳಿಗೆ ಕಲಂ 91 ಸಿಆರ್ಪಿಸಿ ಅಡಿಯಲ್ಲಿ ನೋಟಿಸ್ ನೀಡಲಾಗಿದೆ. ಬರುವಾಗ ಕಡ್ಡಾಯವಾಗಿ ಪರೀಕ್ಷೆ ಹಾಲ್ ಟಿಕೆಟ್, ಓಎಂಅರ್ ಶೀಟ್ ಕಾರ್ಬನ್ ಪ್ರತಿ ತರುವಂತೆ ಸೂಚನೆ ನೀಡಿದ್ದಾರೆ.