ಹುಬ್ಬಳ್ಳಿ:- ಕಲ್ಲಿನಿಂದ ಜಜ್ಜಿ ಯುವಕನನ್ನು ಬರ್ಬರ ಹತ್ಯೆ ಮಾಡಿದ ಘಟನೆ ಹುಬ್ಬಳ್ಳಿಯ ಕುಸುಗಲ್ ಗ್ರಾಮದಲ್ಲಿ ನಡೆದಿದೆ.
ಕುಸುಗಲ್ ಗ್ರಾಮದ ನಿವಾಸಿ ರೈಮನಸಾಬ ಅಮಟಕ್ಕನವರ(34) ಹತ್ಯೆಯಾದ ಯುವಕ. ಸ್ಥಳಕ್ಕೆ ಗ್ರಾಮೀಣ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತಡರಾತ್ರಿ ಕ್ಷುಲ್ಲಕ ಕಾರಣಕ್ಕೆ ಹತ್ಯೆಯಾಗಿರಬಹುದೆಂದು ಪೋಲಿಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.