ETV Bharat / city

ರಾಷ್ಟ್ರ ಮಟ್ಟದ ಶೂಟಿಂಗ್ ಸ್ಪರ್ಧೆಗೆ ಆಯ್ಕೆಯಾದ ಹುಬ್ಬಳ್ಳಿ ಹೈದ - shooter competition

ಆರಿಫ್ ಅಹಮದ್ ಚಳ್ಳಮರದ ನವೆಂಬರ್ 18 ರಂದು ದೆಹಲಿಯಲ್ಲಿ ನಡೆಯುವ ರಾಷ್ಟ್ರ ಮಟ್ಟದ ಶೂಟಿಂಗ್ ಚಾಂಪಿಯನ್​ಶಿಪ್​ಗೆ ಆಯ್ಕೆಯಾಗಿದ್ದಾರೆ.

young man from Hubballi  selected for a national level shooter competition
ರಾಷ್ಟ್ರ ಮಟ್ಟದ ಶೂಟರ್ ಸ್ಪರ್ಧೆಗೆ ಆಯ್ಕೆಯಾದ ಹುಬ್ಬಳ್ಳಿ ಹೈದ
author img

By

Published : Oct 26, 2021, 3:01 PM IST

ಹುಬ್ಬಳ್ಳಿ: ಹುಬ್ಬಳ್ಳಿಯ ವಿದ್ಯಾನಗರದ ನಿವಾಸಿ ಆರಿಫ್ ಅಹಮದ್ ಚಳ್ಳಮರದ ನವೆಂಬರ್ 18 ರಂದು ದೆಹಲಿಯಲ್ಲಿ ನಡೆಯುವ ರಾಷ್ಟ್ರ ಮಟ್ಟದ ಶೂಟಿಂಗ್ ಚಾಂಪಿಯನ್​ಶಿಪ್​ಗೆ ಆಯ್ಕೆಯಾಗಿದ್ದಾರೆ.

ತಮ್ಮ ಚಿಕ್ಕ ವಯಸ್ಸಿನಲ್ಲೇ ಕ್ರೀಡೆಯಲ್ಲಿ ಏನಾದರೂ ಸಾಧನೆ ಮಾಡಬೇಕು ಎಂದು ಕನಸು ಕಂಡಿದ್ದರು. 2018 ರಲ್ಲಿ ರಾಜ್ಯ ಮಟ್ಟದಲ್ಲಿ ಬೆಳ್ಳಿ ಪದಕ, 2019ಕ್ಕೆ ಒಲಿಂಪಿಕ್​ಗೆ ಆಯ್ಕೆಯಾಗಿ ಇದೀಗ 2021ರ ಸಾಲಿನ ಇದೇ ನವೆಂಬರ್ 18 ರಂದು ದೆಹಲಿಯಲ್ಲಿ ನಡೆಯುವ ರಾಷ್ಟ್ರ ಮಟ್ಟದ ಶೂಟಿಂಗ್ ಚಾಂಪಿಯನ್​​ಶಿಪ್​ಗೆ ಆಯ್ಕೆಯಾಗಿ ಹುಬ್ಬಳ್ಳಿ ಧಾರವಾಡಕ್ಕೆ ಮತ್ತಷ್ಟು ಹೆಮ್ಮೆ ತಂದಿದ್ದಾರೆ.

ರಾಷ್ಟ್ರ ಮಟ್ಟದ ಶೂಟಿಂಗ್ ಸ್ಪರ್ಧೆಗೆ ಆಯ್ಕೆಯಾದ ಹುಬ್ಬಳ್ಳಿ ಹೈದ

ಆರಿಫ್ ಅಹಮದ್ ಚಳ್ಳಮರದ ಅವರಿಗೆ ತಮ್ಮ ತಂದೆಯೇ ಸ್ಫೂರ್ತಿ. ತಂದೆ ಆರ್ಮಿ ಮ್ಯಾನ್. ತಂದೆ ದೇಶ ಸೇವೆ ಮಾಡಿದರೆ, ಇತ್ತ ಮಗ ರಾಜ್ಯ ಮತ್ತು ದೇಶದ ಕೀರ್ತಿಯನ್ನು ಹೆಚ್ಚಿಸುತ್ತಿದ್ದು, ಕುಟುಂಬದಲ್ಲಿ ಸಂತಸ ಹೆಚ್ಚಿದೆ.

ಇದನ್ನೂ ಓದಿ:ಕೊಪ್ಪಳದಲ್ಲಿ ಭಾರಿ ಮಳೆಗೆ ನೆಲ ಕಚ್ಚಿದ ಬೆಳೆ, ರೈತರು ಕಂಗಾಲು

ಒಟ್ಟಿನಲ್ಲಿ ಆರಿಫ್ ಅಹಮದ್ ಅವರ ಸಾಧನೆ ಆಕಾಶದುದ್ದಕ್ಕೂ ಬೆಳೆಯಲಿ, ದೇಶದ ಯುವಕರಿಗೆ ಸ್ಫೂರ್ತಿ ಆಗಲಿ ಎಂಬುದು ಎಲ್ಲರ ಆಶಯವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.