ಹುಬ್ಬಳ್ಳಿ: ಸಿಡಿಲು ಬಡಿದು ಕುರಿಗಾಹಿ ಯುವಕ ಮೃತಪಟ್ಟ ಘಟನೆ ಕುಂದಗೋಳ ತಾಲೂಕಿನ ಹಿರೇಹರಕುಣಿ ಗ್ರಾಮದ ಹೊರವಲಯದಲ್ಲಿ ನಡೆದಿದೆ. ಮೃತನನ್ನು ದೇವೇಂದ್ರ ಮುದುಕಪ್ಪ ಮಚಿನಹಳ್ಳಿ (19) ಎಂದು ಗುರುತಿಸಲಾಗಿದೆ.
ಸರ್ಕಾರ ಮೃತನ ಕುಟುಂಬಕ್ಕೆ 10 ಲಕ್ಷ ರೂಪಾಯಿ ಪರಿಹಾರ ಧನ ನೀಡಬೇಕು ರೈತ ಮುಖಂಡ ಸಿದ್ದಣ್ಣ ತೇಜಿ ಒತ್ತಾಯಿಸಿದ್ದಾರೆ. ಘಟನಾ ಸ್ಥಳಕ್ಕೆ ಗುಡಗೇರಿ ಪೊಲೀಸ್ ಠಾಣೆ ಪೊಲೀಸರು, ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ : ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ.. ಗಂಡ ಸೇರಿ ಐವರ ವಿರುದ್ಧ ಪ್ರಕರಣ